ಸರ್ಕಾರದ ಮನೆಗಳ ಕರ್ಮಕಾಂಡ ಬಯಲು: ಭಯದಲ್ಲೇ ಬದುಕುತ್ತಿವೆ ನೂರಾರು ಕುಟುಂಬಗಳು
ಬೆಂಗಳೂರಿನ ಕೆಂಗೇರಿಯಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಫ್ಲಾಟ್‌ಗಳ ಕಳಪೆ ಕಾಮಗಾರಿ ಬಟಾಬಯಲಾಗಿದೆ. ಕೋಗಿಲು ನಿವಾಸಿಗಳಿಗೆ ಸರ್ಕಾರ ಮನೆ ನೀಡಲು ಮುಂದಾಗಿರುವಾಗ, ಕೆಹೆಚ್‌ಬಿ ಫ್ಲಾಟ್‌ಗಳಿಗೆ ಲಕ್ಷಾಂತರ ರೂ ಕೊಟ್ಟು ನೂರಾರು ಕುಟುಂಬಗಳು ಪರದಾಡುವಂತಾಗಿದೆ. ಸರ್ಕಾರ ತಮ್ಮ ಕಡೆ ಗಮನಹರಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಬೆಂಗಳೂರು, ಜನವರಿ 05: ಸದ್ಯ ರಾಜಧಾನಿಯಲ್ಲಿ ಕೋಗಿಲು (Kogilu Layout Row) ನಿವಾಸಿಗಳ ವಸತಿ ಬಗ್ಗೆ ದೊಡ್ಡ ಚರ್ಚೆ ಕೇಳಿ ಬರ್ತಿದೆ. ಕಡಿಮೆ ದುಡ್ಡನಲ್ಲಿ ಸರ್ಕಾರ ಕೊಗಿಲು ನಿವಾಸಿಗಳಿಗೆ ಮನೆ ನೀಡುವುದಕ್ಕೆ ಮುಂದಾಗಿದೆ. ಆದರೆ ಈ ನಡುವೆ ಇದೀಗ ಲಕ್ಷಾಂತರ ರೂ. ಖರ್ಚು ಮಾಡಿ ಮನೆ ಪಡೆದಿರುವ ಕರ್ನಾಟಕ ಹೌಸಿಂಗ್ ಬೋರ್ಡ್ (KHB) ನಿವಾಸಿಗಳು ನಮ್ಮ ಗೋಳು ಕೇಳಿ ಎನ್ನುತ್ತಾರೆ. ಸದ್ಯ ನೂರಾರು ಕುಟುಂಬಗಳು ಭಯದಲ್ಲೇ ಬದುಕುವಂತಾಗಿದೆ.
ಕೋಗಿಲು ಬಡಾವಣೆ ಅನಧಿಕೃತ ಮನೆಗಳ ತೆರವು ವಿಚಾರದಲ್ಲಿ ರಾಜಕೀಯ ಜೋರಾಗಿದೆ. ಉಚಿತ ಮನೆ ನೀಡಲು ಸರ್ಕಾರವು ಜೋಶ್ನಲ್ಲಿದೆ. ಆದರೆ ಸರ್ಕಾರದ್ದೆ ಮನೆಗಳು ಬೀಳುವ ಹಂತದಲ್ಲಿ ಇದ್ದರೂ ಇಲ್ಲಿ ವಾಸಿಸುವ ಜನರ ಗೋಳು ಕೇಳೋರಿಲ್ಲ. ಕರ್ನಾಟಕ ಗೃಹ ಮಂಡಳಿಯ 800 ಫ್ಲಾಟ್‌ಗಳ ಸ್ಥಿತಿ ಡೇಂಜರ್ ಹಂತದಲ್ಲಿವೆ. ಕಳಪೆ ಕಾಮಗಾರಿಗೆ ನಿವಾಸಿಗಳು ಕಂಗಾಲಾಗಿದ್ದು, ನೂರಾರು ಕುಟುಂಬಗಳು ಭಯದಲ್ಲೇ ಬದುಕುತ್ತಿದ್ದಾರೆ.
ಇದನ್ನೂ ಓದಿ: ಕೋಗಿಲು ಕದನ: ಬಿಜೆಪಿ ವಿರುದ್ಧ ಸಚಿವ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ಕೆಂಗೇರಿಯಲ್ಲಿ ಕೆಹೆಚ್‌ಬಿ ಫ್ಲಾಟ್ನ ಬಹುಮಹಡಿ ವಸತಿ ಯೋಜನೆಯಲ್ಲಿ ಮನೆ ಪಡೆದವರು ಪರದಾಡುವಂತಾಗಿದೆ. ಸರ್ಕಾರದ ಮೇಲೆ ಭರವಸೆ ಇಟ್ಟು 2012ರಲ್ಲಿ ಫ್ಲಾಟ್ ಖರೀದಿಸಿದ್ದ ಜನರಿಗೆ ಈಗ ಸಂಕಷ್ಟ ಶುರುವಾಗಿದೆ. ನಾವು ಸುಮ್ಮನೆ ಭರವಸೆಗಳನ್ನು ಕೊಡುವುದಿಲ್ಲ, ಆದರೆ ಕೊಟ್ಟ ಭರವಸೆಗಳನ್ನು ಖಂಡಿತ ಈಡೇರಿಸುತ್ತೇನೆ ಎಂದು ಸುಳ್ಳು ಪ್ರಚಾರ ನೀಡಿದ್ದ ಕೆಹೆಚ್‌ಬಿ, ಕೆಹೆಚ್‌ಬಿ ಮಾತು ನಂಬಿ 13 ವರ್ಷಗಳ ಹಿಂದೆಯೇ ಸರಾಸರಿ 40 ಲಕ್ಷ ರೂ ಕೊಟ್ಟು ಫ್ಲಾಟ್ ಖರೀದಿಸಿದ್ದ ಜನರು ಈಗ ಪರದಾಡುವಂತಾಗಿದೆ. ಮನೆಯ ಗೋಡೆಗಳ ಸಿಮೆಂಟ್ ಕಿತ್ತು ಬರ್ತಿದೆ. ಮಳೆಗಾದಲ್ಲಿ ಮನೆಗಳು ಸೋರುತ್ತವೆ. ಗೋಡೆಗಳ ಸಿಮೆಂಟ್ ಕಿತ್ತು ಬರುತ್ತಿದೆ. ಗೋಡೆಯೇ ಕಿತ್ತು ಬರುತ್ತದೆಯೋ ಎಂದು ನಾಗರಜ್ ಎನ್ನುವವರು ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟು 6 ಎಕರೆ 20 ಗುಂಟೆ ಜಾಗದಲ್ಲಿರುವ 808 ಫ್ಲಾಟ್‌ಗಳು, 13 ವರ್ಷಗಳ ಹಿಂದೆ 3,500 ಸಾವಿರ ಚದರ ಅಡಿಗೆ ಹಣ ಕೊಟ್ಟು ಜನರು ಫ್ಲಾಟ್ ಖರೀದಿಸಿದ್ದರು. ಆದರೆ ಒಂದೇ ವರ್ಷದಲ್ಲಿ ಫ್ಲಾಟ್ ಕಳಪೆ ಕಾಮಗಾರಿ ಬಟಬಯಲಾಗಿತ್ತು. ಸರಾಸರಿ 297, 4006, 405 ಕೋಟಿ ರೂ ವೆಚ್ಚದಲ್ಲಿ ನಿವಾಸಿಗಳು 808 ಫ್ಲಾಟ್‌ಗಳು ಖರೀದಿ ಮಾಡಿದ್ದರು. ಇಷ್ಟೆಲ್ಲಾ ಖರ್ಚು ಮಾಡಿ ಮನೆ ಖರೀದಿಸಿದರೂ ಇನ್ನು ಕೂಡ ಖಾತೆ ಸಿಕ್ಕಿಲ್ಲ. ಎನ್ಓ ಸಿ ಸರ್ಟಿಫಿಕೇಟ್ ಕೂಡ ಫೇಕ್ ನೀಡಲಾಗಿದೆಯಂತೆ. ಈ ನಡುವೆ ಇರುವ ಮನೆಗಳ ಗೋಡೆಗಳು ಕೂಡ ಕೈಗೆ ಕಿತ್ತು ಬರುತ್ತಿವೆ. ಸ್ವಿಮ್ಮಿಂಗ್ ಪೂಲ್ ಕೂಡ ಸಂಪೂರ್ಣ ಕಳಪೆಯಾಗಿದ್ದು, ನಮ್ಮ ಗೋಳು ಕೇಳಿ ಅಂತಿದ್ದಾರೆ.
ಇದನ್ನೂ ಓದಿ: ಕೋಗಿಲು ನಿವಾಸಿಗಳ ಪಟ್ಟಿ ಸಿದ್ಧ: ಲೇಔಟ್ಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಒತ್ತುವರಿ ಮಾಡಿಕೊಂಡು ಕೋಗಿಲು ಲೇಔಟ್ನಲ್ಲಿ ಮನೆ ನಿರ್ಮಾಣ ಮಾಡಿದ ನಿವಾಸಿಗಳಿಗೆ ಸರ್ಕಾರ ಹಿಂದೆ ಮುಂದೆ ನೋಡದೆ ಕಡಿಮೆ ಬಜೆಟ್ನಲ್ಲಿ ಮನೆಗಳನ್ನ ನೀಡಲು ಮುಂದಾಗಿದೆ. ಆದರೆ ಲಕ್ಷಾಂತರ ರೂ ಹಣ ನೀಡಿ ಮನೆ ಪಡೆದ ನಿವಾಸಿಗಳಿಗೆ ಸರ್ಕಾರ ಕಳಪೆ ಮನೆ ನೀಡಿದೆ. ಇನ್ನಾದರೂ ಸರ್ಕಾರ ಕೆಹೆಚ್‌ಬಿ ಕೊಂಚ ಇತ್ತ ಗಮನ ಹರಿಬೇಕಿದೆ ಅಂತಿದ್ದಾರೆ ನಿವಾಸಿಗಳು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.