ಆಂಧ್ರಪ್ರದೇಶದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ಅವಘಡ; ಸ್ಥಳೀಯ ನಿವಾಸಿಗಳ ಸ್ಥಳಾಂತರ
ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯ ಒಂದು ಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಎನ್‌ಜಿಸಿ ತೈಲ ಬಾವಿಯಿಂದ ಭಾರಿ ಅನಿಲ ಸೋರಿಕೆಯಾಗಿ ವ್ಯಾಪಕ ಭೀತಿ ಉಂಟಾಗಿದೆ. ಕೊನಸೀಮಾದ ರಜೋಲ್ ಪ್ರದೇಶದ ಇರುಸುಮಂಡ ಗ್ರಾಮದಲ್ಲಿ ಈ ತೈಲ ಬಾವಿ ಇದೆ. ಈ ಬಾವಿಯಲ್ಲಿ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತಗೊಂಡ ನಂತರ ವರ್ಕ್‌ಓವರ್ ರಿಗ್ ಬಳಸಿ ದುರಸ್ತಿ ಕಾರ್ಯಗಳು ನಡೆಯುತ್ತಿರುವಾಗ ಈ ಘಟನೆ ಸಂಭವಿಸಿದೆ. ಸೋರಿಕೆಯಾದ ಅನಿಲಕ್ಕೆ ಶೀಘ್ರದಲ್ಲೇ ಬೆಂಕಿ ಹೊತ್ತಿಕೊಂಡಿತು.
ಕೊನಸೀಮಾ, ಜನವರಿ 5: ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಪೈಪ್‌ಲೈನ್‌ನಿಂದ ಭಾರಿ ಅನಿಲ ಸೋರಿಕೆಯಾಗಿದ್ದು, ಆ ಗ್ಯಾಸ್ಗೆ ಬೆಂಕಿ (Fire Accident) ಹೊತ್ತಿಕೊಂಡಿದೆ. ಇದರಿಂದಾಗಿ ಇಡೀ ಹಳ್ಳಿಯಲ್ಲಿ ಬೆಂಕಿಯ ದಟ್ಟ ಹೊಗೆ ತುಂಬಿದೆ. ಮಾಲಿಕಿಪುರಂ ಮಂಡಲದ ಇರುಸಮಂಡದ ಬಳಿ ಅನಿಲ ಸೋರಿಕೆ ಮತ್ತು ಬೆಂಕಿಯಿಂದಾಗಿ ಇಡೀ ಗ್ರಾಮವೇ ಹೊಗೆಯಿಂದ ಆವೃತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಅಧಿಕಾರಿಗಳು ಆ ಗ್ರಾಮದ ಜನರನ್ನು ಅವರ ಮನೆಗಳಿಂದ ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಈ ಘಟನೆಯಲ್ಲಿ ಇಲ್ಲಿಯವರೆಗೆ ಯಾರೂ ಗಾಯಗೊಂಡಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

