ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ 12’ ಶೋ ಫಿನಾಲೆ ಬರಲಿದೆ. ಈಗ 8 ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸ್ಪಂದನಾ ಸೋಮಣ್ಣ ಅವರು ಕಳೆದ ವಾರ ಎಲಿಮಿನೇಟ್ ಆದರು. ಯಾರು ಫಿನಾಲೆಗೆ ಬರಬಹುದು ಎಂಬ ಪ್ರಶ್ನೆಗೆ ಸ್ಪಂದನಾ ಈಗ ಉತ್ತರ ನೀಡಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋ ಫಿನಾಲೆ ಬರಲಿದೆ. ಈಗ 8 ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸ್ಪಂದನಾ ಸೋಮಣ್ಣ ಅವರು ಕಳೆದ ವಾರ ಎಲಿಮಿನೇಟ್ ಆದರು. ಈಗ ಗಿಲ್ಲಿ ನಟ (Gilli Nata), ಧ್ರುವಂತ್, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ರಾಶಿಕಾ ಶೆಟ್ಟಿ, ಧನುಷ್ ಹಾಗೂ ಕಾವ್ಯ ಶೈವ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಯಾರು ಫಿನಾಲೆಗೆ ಬರಬಹುದು ಎಂಬ ಪ್ರಶ್ನೆಗೆ ಸ್ಪಂದನಾ ಸೋಮಣ್ಣ ಅವರು ಉತ್ತರ ನೀಡಿದ್ದಾರೆ. ‘ಕಾಕ್ರೋಚ್ ಸುಧಿ ಅವರು ಫಿನಾಲೆಗೆ ಬರಬಹುದು ಎಂದು ಆರಂಭದಲ್ಲಿ ಅನಿಸಿತ್ತು. ಯಾಕೆಂದರೆ ಅವರಿಗೆ ಸಿನಿಮಾ ಹಿನ್ನೆಲೆ ಇತ್ತು, ಫ್ಯಾನ್ ಫಾಲೋಯಿಂಗ್ ಇತ್ತು. ಆದರೆ ಈಗ ಧನು ಕ್ಯಾಪ್ಷನ್ ಆಗಿರುವುದರಿಂದ ಅವನು ಫಸ್ಟ್ ಫೈನಲಿಸ್ಟ್ ಆಗಿರುತ್ತಾನೆ ಎನಿಸುತ್ತದೆ. ಗಿಲ್ಲಿ ಫಿನಾಲೆಗೆ ಬರುತ್ತಾನೆ’ ಎಂದು ಸ್ಪಂದನಾ (Spandana Somanna) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
