ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ: ಅಸಲಿಗೆ ಆಗಿದ್ದೇನು?
ಅಪ್ಪ ಮಗನಿಂದ ಪ್ರತಿ ದಿನ ಮನೆಯಲ್ಲಿ ಜಗಳ. ಕುಡಿದು ಬರುತ್ತಿದ್ದ ಅಪ್ಪನ ನಿಯಂತ್ರಿಸಲು ಮಗ ಹೊರಟಿದ್ದರೆ, ಮಗನ ಮೇಲೆ ಸವಾರಿ ಮಾಡುವುದು ಅಪ್ಪನ ಪ್ರತಿನಿತ್ಯದ ಕೆಲಸವಾಗಿತ್ತು. ಹೀಗೆ ಕುಡಿದ ಬಂದ ತಂದೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ಮತ್ತಿನಲ್ಲಿ ತಂದೆ ತನ್ನ ಮಗನನ್ನೇ ಹತ್ಯೆಗೈದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಡೆದಿದ್ದು, ರಮೇಶ್ ಅಚಾರ್ ಕುಟುಂಬ ಛಿದ್ರವಾಗಿದೆ.
ಚಿಕ್ಕಮಗಳೂರು (ಜನವರಿ.05) ಅಪ್ಪ ಮಗನಿಂದ ಪ್ರತಿ ದಿನ ಮನೆಯಲ್ಲಿ ಜಗಳ. ಕುಡಿದು ಬರುತ್ತಿದ್ದ ಅಪ್ಪನ ನಿಯಂತ್ರಿಸಲು ಮಗ ಹೊರಟಿದ್ದರೆ, ಮಗನ ಮೇಲೆ ಸವಾರಿ ಮಾಡುವುದು ಅಪ್ಪನ ಪ್ರತಿನಿತ್ಯದ ಕೆಲಸವಾಗಿತ್ತು. ಹೀಗೆ ಕುಡಿದ ಬಂದ ತಂದೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ಮತ್ತಿನಲ್ಲಿ ತಂದೆ ತನ್ನ ಮಗನನ್ನೇ ಹತ್ಯೆಗೈದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಡೆದಿದ್ದು, ರಮೇಶ್ ಅಚಾರ್ ಕುಟುಂಬ ಛಿದ್ರವಾಗಿದೆ. ಇದ್ದ ಒಬ್ಬ ಮಗ 29 ವರ್ಷದ ಪ್ರದೀಪ್ ಆಚಾರ್ ಬಲಿಯಾಗಿದ್ದಾನೆ. ಇತ್ತ ರಮೇಶ್ ಆಚಾರ್ ಪತ್ನಿ ಇವರಿಬ್ಬರ ಸುದೀರ್ಘ ಜಗಳದಿಂದ ಬೇಸತ್ತು ಮನೆ ಬಿಟ್ಟು ಹೋಗಿ ವರ್ಷಗಳು ಉರುಳಿದೆ. ಒಂದು ಸುಂದರ ಕುಟುಂಬ ಇದೀಗ ಛಿದ್ರವಾಗಿದ್ದು ಮಾತ್ರವಲ್ಲ ಮಗು ಮಸಣ ಸೇರಿದರೆ, ಅಪ್ಪ ಜೈಲು ಸೇರಿದ್ದಾನೆ.
ಇದನ್ನೂ ಓದಿ: ಹುಟ್ಟಿಸಿದ ಮಗನ ಬಲಿ ಪಡೆದ ತಂದೆ: ಅಪ್ಪನ ಚಟಕ್ಕೆ ಹೋಯ್ತು ಪುತ್ರನ ಪ್ರಾಣಪಕ್ಷಿ
ಕ್ಷುಲಕ ಕಾರಣಕ್ಕೆ ಕುಡಿದು ಪದ ಪದೇ ಅಪ್ಪ ಮಗನ ಗಲಾಟೆ ನಡೆಯುತ್ತಿತ್ತು. ಇವರ ಗಲಾಟೆ ಬಿಡಿಸುವಾಗ ಪತ್ನಿಗೂ ಎರಡೇಟು ಸಿಗುತ್ತಿತ್ತು. ಬುದ್ದಿ ಹೇಳಿದರೂ ಕೇಳಲಿಲ್ಲ, ಗದರಿಸಿದರೂ ಆಗಲಿಲ್ಲ. ಹೀಗಾಗಿ ಅಪ್ಪ ಮಗನ ಸಹವಾಸವೇ ಸಾಕು ಎಂದು ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಇತ್ತ ಹಲವು ತಿಂಗಳಿಂದ ಅಪ್ಪ ಮಗ ಇಬ್ಬರೇ ಮನೆಯಲ್ಲಿ ವಾಸವಿದ್ದರು. ಆದರೆ ಜಗಳ ಹಾಗೇ ಮುಂದುವರಿದಿತ್ತು.

