ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಗೌಡ ಆಕ್ರೋಶ
ರಾಶಿಕಾ ಹಾಗೂ ಗಿಲ್ಲಿ ನಟ ಸೇರಿಕೊಂಡು ಅಶ್ವಿನಿಗೆ ಹೀಯಾಳಿಸಿದ್ದಾರೆ. ಕ್ಯಾಪ್ಟನ್ ಆಗುವ ಸಾಮರ್ಥ್ಯ ಇಲ್ಲ ಎಂದು ಹೇಳಿದರು. ಅದನ್ನು ಕೇಳಿಸಿಕೊಂಡು ಅಶ್ವಿನಿ ಗೌಡ ಗರಂ ಆದರು. ‘ಹೋದ ತಕ್ಷಣ ಮದುವೆ ಆಗು. ಮೂಳೆ ಬಿದ್ದು ಹೋಗುವಷ್ಟರಲ್ಲಿ ಮದುವೆ ಆಗು’ ಎಂದು ಗಿಲ್ಲಿಗೆ ಅವರು ಹೇಳಿದರು.
‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನ ಜನವರಿ 4ರ ಸಂಚಿಕೆಯಲ್ಲಿ ಅಶ್ವಿನಿ ಗೌಡ ವಿರುದ್ಧ ಗಿಲ್ಲಿ ನಟ, ರಾಶಿಕಾ ಶೆಟ್ಟಿ ಮುಂತಾದವರು ಹರಿಹಾಯ್ದಿದ್ದರು. ಅದರಿಂದಾಗಿ ಅಶ್ವಿನಿ ಗೌಡ ಅವರು ಯಾರ ಜೊತೆಯೂ ಸೇರದೇ ಕೇವಲ ಧ್ರುವಂತ್ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ರಾಶಿಕಾ ಶೆಟ್ಟಿ ಮತ್ತು ಗಿಲ್ಲಿ ನಟ (Gilli Nata) ಸೇರಿಕೊಂಡು ಅಶ್ವಿನಿಯನ್ನು ಹೀಯಾಳಿಸಿದ್ದಾರೆ. ಅಶ್ವಿನಿಗೆ ಕ್ಯಾಪ್ಟನ್ ಆಗುವ ಸಾಮರ್ಥ್ಯ ಇಲ್ಲ ಎಂದು ಗಿಲ್ಲಿ ಮತ್ತು ರಾಶಿಕಾ ಹೇಳಿದರು. ಅದನ್ನು ಕೇಳಿಸಿಕೊಂಡು ಅಶ್ವಿನಿ ಗೌಡ ಗರಂ ಆದರು. ‘ಹೋದ ತಕ್ಷಣ ಮದುವೆ ಆಗು. ಮೂಳೆ ಬಿದ್ದು ಹೋಗುವಷ್ಟರಲ್ಲಿ ಮದುವೆ ಆಗು. ನೀವೆಲ್ಲ ಕ್ಯಾಪ್ಟನ್ ಆಗಿ ಏನು ದಬಾಕಿದ್ದೀರಿ ಅನ್ನೋದು ಗೊತ್ತಿದೆ’ ಎಂದು ಅಶ್ವಿನಿ ಗೌಡ (Ashwini Gowda) ಅವರು ಹೇಳಿದರು. ಜನವರಿ 5ರ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ. ಶೀಘ್ರದಲ್ಲೇ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

