ಏಳು ನಾಯಿಗಳ ಜತೆ ಮಗನನ್ನು ಬಿಟ್ಟು ಎರಡು ವಾರಗಳ ಕಾಲ ಟ್ರಿಪ್​​ಗೆ ಹೋದ ಮಹಿಳೆ, ಆಮೇಲೇನಾಯ್ತು?

ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಲುವಾಗಿ ಮಹಿಳೆಯೊಬ್ಬಳು ತನ್ನ ಮಗ ಹಾಗೂ ಆತನ ಜತೆ ಏಳು ನಾಯಿಗಳನ್ನು ಬಿಟ್ಟು ಎರಡು ವಾರಗಳ ಕಾಲ ಟ್ರಿಪ್​ಗೆ ಹೋಗಿದ್ದರು. ಅವರು ಹಿಂದಿರುಗುವಷ್ಟರಲ್ಲಿ ಏನೇನೆಲ್ಲಾ ಆಗಿತ್ತು, ಇಲ್ಲಿದೆ ಮಾಹಿತಿ. ಇದು ಲಾಸ್​ ವೆಗಾಸ್​​ನಲ್ಲಿ ನಡೆದ ಘಟನೆ. ಫ್ಲೋರಿಡಾದ ಮಹಿಳೆಯೊಬ್ಬರು ತನ್ನ ಮಗ ಹಾಗೂ ಏಳು ನಾಯಿಯನ್ನು ಬಿಟ್ಟು ಎರಡು ವಾರಗಳ ಕಾಲ ಟ್ರಿಪ್​​ಗೆ ಹೋಗಿದ್ದರು

ಏಳು ನಾಯಿಗಳ ಜತೆ ಮಗನನ್ನು ಬಿಟ್ಟು ಎರಡು ವಾರಗಳ ಕಾಲ ಟ್ರಿಪ್​​ಗೆ ಹೋದ ಮಹಿಳೆ, ಆಮೇಲೇನಾಯ್ತು?
ತಾಯಿ

Updated on: Aug 08, 2025 | 12:07 PM

ವಾಷಿಂಗ್ಟನ್, ಆಗಸ್ಟ್​ 08: ಸಾಮಾನ್ಯವಾಗಿ ಏಳೆಂಟು ನಾಯಿ(Dog)ಗಳನ್ನು ಸಾಕುತ್ತಿದ್ದಾರೆ ಎಂದರೆ ಅವರಿಗೆ ಪ್ರಾಣಿಗಳ ಬಗ್ಗೆ ಇರುವ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಯಾರೂ ಪ್ರೀತಿ ಇಲ್ಲದೆ ತೋರ್ಪಡಿಕೆಗಾಗಿ ಪ್ರಾಣಿಗಳನ್ನು ಸಾಕುವುದು ಅತಿ ವಿರಳ. ಆದರೆ ಈ ಮಹಿಳೆ ವಿಚಾರದಲ್ಲಿ ನೀವು ಅಂದುಕೊಂಡಿರುವುದೆಲ್ಲವೂ ತಲೆಕೆಳಗಾಗುವುದು ಗ್ಯಾರಂಟಿ. ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಲುವಾಗಿ ಮಹಿಳೆಯೊಬ್ಬಳು ತನ್ನ ಮಗ ಹಾಗೂ ಆತನ ಜತೆ ಏಳು ನಾಯಿಗಳನ್ನು ಬಿಟ್ಟು ಎರಡು ವಾರಗಳ ಕಾಲ ಟ್ರಿಪ್​ಗೆ ಹೋಗಿದ್ದರು. ಅವರು ಹಿಂದಿರುಗುವಷ್ಟರಲ್ಲಿ ಏನೇನೆಲ್ಲಾ ಆಗಿತ್ತು, ಇಲ್ಲಿದೆ ಮಾಹಿತಿ.

ಇದು ಲಾಸ್​ ವೆಗಾಸ್​​ನಲ್ಲಿ ನಡೆದ ಘಟನೆ. ಫ್ಲೋರಿಡಾದ ಮಹಿಳೆಯೊಬ್ಬರು ತನ್ನ ಮಗ ಹಾಗೂ ಏಳು ನಾಯಿಯನ್ನು ಬಿಟ್ಟು ಎರಡು ವಾರಗಳ ಕಾಲ ಟ್ರಿಪ್​​ಗೆ ಹೋಗಿದ್ದರು. ಮೊದಲೇ ಮನೆ ತುಂಬಾ ಹೊಲಸಾಗಿತ್ತು. ಈಗ ನಾಯಿಗಳು ಎಲ್ಲೆಂದರಲ್ಲಿ ಮಲ ಹಾಗೂ ಮೂತ್ರ ವಿಸರ್ಜನೆ ಮಾಡಿದ್ದ ಕಾರಣ ಮನೆಯಲ್ಲಿ ಯಾರೂ ಇರಲಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಆಕೆ ಹೋಗುವ ಮುನ್ನವೇ ಮನೆ ಸ್ವಚ್ಛವಾಗಿಲ್ಲದಿದ್ದರೂ ಮಗನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾಳೆ.

ಜಾಕ್ಸನ್‌ವಿಲ್ಲೆಯಿಂದ 60 ಮೈಲು ದಕ್ಷಿಣದಲ್ಲಿರುವ ಪಲಾಟ್ಕಾ ಪಟ್ಟಣದ 37 ವರ್ಷದ ಜೆಸ್ಸಿಕಾ ಕೋಪ್ಲ್ಯಾಂಡ್ ಅವರನ್ನು ಮಂಗಳವಾರ ಮಕ್ಕಳ ನಿರ್ಲಕ್ಷ್ಯ ಮತ್ತು ಪ್ರಾಣಿ ದೌರ್ಜನ್ಯದ ಆರೋಪದ ಮೇಲೆ ಬಂಧಿಸಲಾಗಿದೆ. ನಾಯಿಗಳು ಅನ್ನ, ನೀರಿಲ್ಲದೆ ಹಸಿವಿನಿಂದ ಬಳಲುತ್ತಿದ್ದವು. ತೀರಾ ಶೋಚನೀಯ ಸ್ಥಿತಿಯಲ್ಲಿದ್ದವು.

ಮತ್ತಷ್ಟು ಓದಿ:Video: ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ

ಕೆಲವು ನಾಯಿಗಳು ಹಾಲ್​​ನಲ್ಲಿದ್ದರೆ ಇನ್ನೂ ಕೆಲವು ನಾಯಿಗಳು ರೂಮಿನಲ್ಲಿದ್ದವು, ಎಲ್ಲವೂ ಶೋಚನೀಯ ಸ್ಥಿತಿಯಲ್ಲಿದ್ದವು. ಇಡೀ ಕೋಣೆ ಮಲದಿಂದ ಆವೃತವಾಗಿತ್ತು. ಬಾಲಕನ ಕೋಣೆ ಕೂಡ ತುಂಬಾ ಗಲೀಜಾಗಿತ್ತು. ಈ ಕುರಿತು ಪೊಲೀಸರು ವಿಚಾರಿಸಿದಾಗ ನನ್ನ ತಾಯಿ ಯಾವಗಲೂ ಹಾಗೆಯೇ ಮನೆಯನ್ನು ಸ್ವಚ್ಛಗೊಳಿಸುವುದಿಲ್ಲ. ಹೀಗೆ ಕೊಳಕಾಗಿಯೇ ಇಟ್ಟುಕೊಂಡಿರುತ್ತಾರೆ ಎಂದು ಹೇಳಿದ್ದಾನೆ.

ಮಲದಿಂದ ಆವೃತವಾದ ಕಾರ್ಪೆಟ್‌ಗಳು, ವಾಸದ ಕೋಣೆಯಾದ್ಯಂತ ರಾಶಿ ಹಾಕಲಾಗಿರುವ ಕೊಳಕು ವಸ್ತುಗಳು ಮತ್ತು ಗೋಡೆಯಲ್ಲಿ ಹಲವಾರು ದೊಡ್ಡ ರಂಧ್ರಗಳನ್ನು ಕಾಣಬಹುದು.ಒಂದು ಫೋಟೋದಲ್ಲಿ, ಒಂದು ಕ್ರಿಸ್‌ಮಸ್ ಮರವು ಗೋಡೆಗೆ ಒರಗಿ ನಿಂತಿದೆ.ನಾಯಿಗಳ ಪಕ್ಕೆಲುಬು ಕಾಣುತ್ತಿತ್ತು. ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡುಬರುತ್ತಿದೆ.

ಜುಲೈ 21 ರಂದು ತನ್ನ ತಾಯಿ ಲಾಸ್ ವೇಗಾಸ್‌ಗೆ ತೆರಳಿದ್ದರು.ತನಿಖಾಧಿಕಾರಿಗಳು ಆಕೆಯ ಹುಟ್ಟುಹಬ್ಬವನ್ನು ಆಚರಿಸಲು ಹೋಗಿದ್ದರು ಎಂದು ತಿಳಿಸಿದ್ದಾರೆ.ನಾನು ರಜೆಗೆ ಹೋಗಿದ್ದೆ ಈಗ ಬಂದಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ಆದರೆ ಇದು ಕೇವಲ ಎರಡು ವಾರಗಳ ಘಟನೆಯಲ್ಲ ನಾಯಿಗಳ ಸ್ಥಿತಿ ನೋಡಿದರೆ ಮೊದಲಿನಿಂದಲೂ ಅವುಗಳಿಗೆ ಆಹಾರ ಕೊಟ್ಟಂತೆ ಕಾಣುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಆಕೆಯ ಮಗನಿಗೆ ಯಾರೋ ಬಂದು ಸ್ವಲ್ಪ ಆಹಾರ ಕೊಟಗಟು ಹೋಗುತ್ತಿದ್ದರು ಎನ್ನಲಾಗಿದೆ. 36,500 ಡಾಲರ್ ಬಾಂಡ್ ಮೇಲೆ ಪುಟ್ನಮ್ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ. ಈ ಪರಿಸ್ಥಿತಿಯ ದುಃಸ್ಥಿತಿ ಹೃದಯವಿದ್ರಾವಕ ಮತ್ತು ಕೋಪ ತರಿಸುವಂತಿದೆ.

ಒಬ್ಬ ತಾಯಿ ಲಾಸ್ ವೇಗಾಸ್‌ಗೆ ಎರಡು ವಾರಗಳ ಹುಟ್ಟುಹಬ್ಬದ ಪ್ರವಾಸಕ್ಕೆ ಹೋದಾಗ, ಪ್ರಾಣಿಗಳ ಮಲದ ದುರ್ವಾಸನೆ, ಹೊಲಸು ತುಂಬಿದ ಮನೆಯಲ್ಲಿ ತನ್ನ ಸ್ವಂತ ಮಗನನ್ನು ಬಿಟ್ಟು ಹೋಗಲು ಆಕೆಗೆ ಹೇಗೆ ಮನಸ್ಸು ಬಂತು ಎಂದು ಜನರು ಪ್ರಶ್ನಿಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 12:02 pm, Fri, 8 August 25