ಉತ್ತರ ಫ್ರಾನ್ಸ್ ಭಾಗದಲ್ಲಿ ಸೃಷ್ಟಿಯಾದ ವಿಧ್ವಂಸಕ ಸುಂಟರಗಾಳಿಗೆ ಮೇಲ್ಛಾವಣಿಗಳು ಹಾರಿ ಮನೆಗಳು ಕುಸಿದವು

ಸ್ಥಳೀಯ ಆಡಳಿತ ಪಸ್-ಡಿ-ಕಲಾಯಿಸ್ ನೀಡಿರುವ ಮಾಹಿತಿ ಆಧರಿಸಿ ರಾಯಿಟರ್ ಸು ಸುದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ ಸುಂಟರಗಾಳಿಯಿಂದಾಗಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆದರೆ ಮನೆ ಮತ್ತು ಇತರ ಅಗತ್ಯ ಸೌಕರ್ಯಗಳ ಮೇಲೆ ಸುಂಟರಗಾಳಿ ಭಾರಿ ಪ್ರಭಾವ ಬೀರಿದೆ.

ಉತ್ತರ ಫ್ರಾನ್ಸ್ ಭಾಗದಲ್ಲಿ ಸೃಷ್ಟಿಯಾದ ವಿಧ್ವಂಸಕ ಸುಂಟರಗಾಳಿಗೆ ಮೇಲ್ಛಾವಣಿಗಳು ಹಾರಿ ಮನೆಗಳು ಕುಸಿದವು
ಫ್ರಾನ್ಸ್​​ನಲ್ಲಿ ಸುಂಟರಗಾಳಿ ಸೃಷ್ಟಿಸಿದ ಅವಾಂತರ
Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 24, 2022 | 12:20 PM

ರವಿವಾರದಂದು ಜೋರಾಗಿ ಬೀಸಿದ ಸುಂಟರಗಾಳಿ (tornado) ಫ್ರಾನ್ಸ್ ದೇಶದ ಉತ್ತರ ಭಾಗದಲ್ಲಿರುವ ಕಲಾಯಿಸ್ ಬಂದರಿಗೆ ಹತ್ತಿರದ ಬಿಹುಕೋರ್ಟ್ (Bihucourt)- ಹೆಸರಿನ ಒಂದು ಗ್ರಾಮವನ್ನು ವಿಧ್ವಂಸಗೊಳಿಸಿದೆ. ಸದರಿ ಪ್ರದೇಶದಲ್ಲಿ ಅಕಾಲಿಕವಾಗಿ (unseasonal) ತಾಪಮಾನ ಹೆಚ್ಚಿದ ಬಳಿಕ ಸುಂಟರಗಾಳಿ ವಿನಾಶಕಾರಿಯಾಗಿ ಪರಣಮಿಸಿದೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಫೋನಲ್ಲಿ ಸೆರೆಹಿಡಿದಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದರಲ್ಲಿ ನೀವು ನೋಡುವ ಹಾಗೆ ಬಿಹುಕೋರ್ಟ್ ಗ್ರಾಮದ ಮೇಲ್ಭಾಗದಲ್ಲಿ ಕಾರ್ಮೋಡಗಳು ಸುಂಟರಗಾಳಿಯ ರಭಸಕ್ಕೆ ಸುತ್ತುತ್ತಿವೆ.

ಸ್ಥಳೀಯ ಆಡಳಿತ ಪಸ್-ಡಿ-ಕಲಾಯಿಸ್ ನೀಡಿರುವ ಮಾಹಿತಿ ಆಧರಿಸಿ ರಾಯಿಟರ್ ಸುದ್ದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ ಸುಂಟರಗಾಳಿಯಿಂದಾಗಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆದರೆ ಮನೆ ಮತ್ತು ಇತರ ಅಗತ್ಯ ಸೌಕರ್ಯಗಳ ಮೇಲೆ ಸುಂಟರಗಾಳಿ ಭಾರಿ ಪ್ರಭಾವ ಬೀರಿದೆ.

ಹಲವಾರು ಮನೆಗಳು ಹಾನಿಗೊಳಗಾಗಿವೆ, ಸುಂಟರಗಾಳಿ ಸೃಷ್ಟಿಸಿರುವ ಅವಾಂತರವನ್ನು, ನೆಟ್ಟಿಗರು ಕಳೆದ ಹಲವಾರು ವರ್ಷಗಳಲ್ಲಿ ಫ್ರಾನ್ಸ್ ದೇಶವನ್ನು ಅಪ್ಪಳಿಸಿರುವ ವಿಧ್ವಂಸಕ ಸುಂಟರಗಾಳಿ ಇದು ಎಂದು ಹೇಳಿದ್ದಾರೆ.

Published On - 12:19 pm, Mon, 24 October 22