ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಲ್ಲ ಎಂದ ಫ್ರೆಂಚ್ ಅಧ್ಯಕ್ಷನಿಗೆ ಗಾವುದ ದೂರ ಕೂರಿಸಿ ರಷ್ಯಾ ಅಧ್ಯಕ್ಷ ಮಾತುಕತೆ ನಡೆಸಿದರು!

ಹಂಗರಿಯ ಪ್ರಧಾನ ಮಂತ್ರಿ ವಿಕ್ಟರ್ ಒರ್ಬನ್ ಮತ್ತು ಇರಾನಿನ ಅಧ್ಯಕ್ಷ ಎಬ್ರಾಹಿಮ್ ರೈಸಿ ಅವರೊಂದಿಗೆ ಮಾತುಕತೆ ನಡೆಸುವಾಗಲೂ ‘ಬೃಹತ್ ಟೇಬಲ್ ಪಾಲಿಸಿ’ಯನ್ನೇ ಅಳವಡಿಸಲಾಗಿತ್ತು. ಇವರಿಬ್ಬರು ಈ ವರ್ಷದ ಆರಂಭದಲ್ಲಿ ರಷ್ಯಾಗೆ ಪ್ರವಾಸ ಬಂದಾಗ ಪುಟಿನ್ ಅವರಿಬ್ಬನ್ನು ಗಾವುದ ದೂರ ಕೂರಿಸಿಯೇ ಮಾತುಕತೆ ನಡೆಸಿದ್ದರು.

ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಲ್ಲ ಎಂದ ಫ್ರೆಂಚ್ ಅಧ್ಯಕ್ಷನಿಗೆ ಗಾವುದ ದೂರ ಕೂರಿಸಿ ರಷ್ಯಾ ಅಧ್ಯಕ್ಷ ಮಾತುಕತೆ ನಡೆಸಿದರು!
ರಾಜತಾಂತ್ರಿಕ ಮಾತುಕತೆ ಹೀಗೂ ನಡೆಯುತ್ತವೆ!
Follow us
| Updated By: shivaprasad.hs

Updated on: Feb 12, 2022 | 7:54 AM

ಮಾಸ್ಕೋ: ಹೀಗೂ ಆಗುತ್ತಿದೆ ಪ್ರಪಂಚದಲ್ಲಿ! ರಷ್ಯಾದ ಪ್ರವಾಸ ಹೋಗಿದ್ದ ಫ್ರಾನ್ಸ್ ದೇಶದ ಅಧ್ಯಕ್ಷ ಇಮ್ಯಾನುಯೇಲ್ ಮ್ಯಾಕ್ರನ್ (Emmanuel Macron) ಅವರಿಗೆ ಆ ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರೊಂದಿಗೆ ಮಾತುಕತೆ ನಡೆಸಲು ಗಾವುದ ದೂರದಲ್ಲಿ ಕುಳ್ಳಿರಿಸಲಾಗಿತ್ತು!! ಅವರನ್ನು ಪುತಿನ್ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ಯಾಕೆ ಗೊತ್ತಾ? ಮ್ಯಾಕ್ರನ್, ಕ್ರೆಮ್ಲಿನ್ (Kremlin) ನಗರದಲ್ಲಿ ಕೊವಿಡ್ ಟೆಸ್ಟ್ ಗೆ (ಪಿಸಿಆರ್) ಒಳಪಡಲು ನಿರಾಕರಿಸಿದರು! ಎರಡು ದೇಶಗಳ ಧುರೀಣರು ಬೃಹತ್ ಗಾತ್ರದ ಟೇಬಲ್ ನ (long table) ವಿರುದ್ಧ ದಿಕ್ಕುಗಳಲ್ಲಿ ಕೂತು ಮಾತುಕತೆ ನಡೆಸಿದರು. ರಷ್ಯಾ ಮತ್ತು ಉಕ್ರೇನ್ ನಡುವೆ ತಲೆದೋರಿರುವ ಬಿಕ್ಕಟ್ಟನ್ನು ಶಮನಗೊಳಿಸುವ ಪ್ರಯತ್ನ ಮಾಡಲು ಮ್ಯಾಕ್ರನ್ ಮಾಸ್ಕೋ ತೆರಳಿದ್ದರು. ಕೇವಲ ಮೂರು ದಿನಗಳ ನಂತರ ಪುಟಿನ್, ತಮ್ಮ ಆಪ್ತರಲ್ಲಿ ಒಬ್ಬರಾಗಿರುವ ಕಜಾಕಸ್ತಾನ್ ಅಧ್ಯಕ್ಷರೊಂದಿಗೆ ಒಂದು ಚಿಕ್ಕ ಟೇಬಲ್ ನಡುವೆ ಇಟ್ಟುಕೊಂಡು ಮಾತುಕತೆ ನಡಿಸಿದ ಹಿನ್ನೆಲೆಯಲ್ಲಿ ಮ್ಯಾಕ್ರನ್ ಜೊತೆಗಿನ ಮಾತುಕತೆಗಾಗಿ ವ್ಯವಸ್ಥೆ ಮಾಡಲಾಗಿದ್ದ ಜಂಬೋ ಟೇಬಲ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.

ಕ್ರೆಮ್ಲಿನ್ ವೈದ್ಯಕೀಯ ಸಿಬ್ಬಂದಿ ನಡೆಸಬೇಕೆಂದಿದ್ದ ಕೊವಿಡ್ ಟೆಸ್ಟ್ ಗೆ ಮ್ಯಾಕ್ರನ್ ಒಲ್ಲೆ ಎಂದ ಕಾರಣ ಅಧ್ಯಕ್ಷ ಪುಟಿನ್ ಅವರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ದೊಡ್ಡ ಟೇಬಲ್ ವ್ಯವಸ್ಥೆ ಮಾಡಲಾಯಿತು ಎಂದು ಪುಟಿನ್ ಅವರ ಬಾತ್ಮೀದಾರ ಡಿಮಿತ್ರಿ ಪೆಕ್ಸೋವ್ ಹೇಳಿದ್ದಾರೆ. ಕೆಲವು ನಾಯಕರೊಂದಿಗೆ ಎರಡು ಕೊನೆಗಳ ನಡುವೆ 6 ಮೀಟರ್​ಗಳಷ್ಟು ಅಂತರವಿರುವ ಟೇಬಲ್ ಮಧ್ಯೆ ಇರಿಸಿ ಮಾತುಕತೆ ನಡೆಸಲಾಗುತ್ತಿದೆ, ಎಂದು ಅವರು ಹೇಳಿದ್ದಾರೆ.

‘ಕೆಲವು ನಾಯಕರು ತಮ್ಮದೇ ಆದ ನಿಯಮಗಳನ್ನು ಪಾಲಿಸುತ್ತಾರೆ, ಅತಿಥೇಯ ಪಕ್ಷದವರು ಹೇಳುವುದನ್ನು ಕೇಳುವುದಿಲ್ಲ, ಅಂಥ ಸಂದರ್ಭಗಳಲ್ಲಿ ಹೀಗೆ ಮಾಡುವುದು ಅನಿವಾರ್ಯವಾಗುತ್ತದೆ. ನಮ್ಮ ಅಧ್ಯಕ್ಷರು ಮತ್ತು ಅತಿಥಿಗಳ ಆರೋಗ್ಯ ಕಾಪಾಡಲು ಹೆಚ್ಚುವರಿ ಸ್ವಚ್ಛತೆ ಶಿಷ್ಟಾಚಾರದ ಭಾಗವಾಗಿ ನಾವಿದನ್ನು ಮಾಡುತ್ತೇವೆ,’ ಎಂದು ಪೆಕ್ಸೋವ್ ಹೇಳಿದ್ದಾರೆ.

ಬೇರೆ ದೇಶದ ನಾಯಕರೊಂದಿಗೆ ದೊಡ್ಡ ಟೇಬಲ್ ಆರಿಸಿಕೊಳ್ಳಬೇಕು ಅನ್ನುವುದರ ಹಿಂದೆ ರಾಜಕೀಯದ ಯಾವುದೇ ಉದ್ದೇಶ ಇಲ್ಲ ಎಂದು ಅವರು ಹೇಳಿದ್ದಾರೆ. ‘ಇದರಲ್ಲಿ ಯಾವುದೇ ರಾಜಕೀಯವಿಲ್ಲ ಮತ್ತು ದೊಡ್ಡ ಟೇಬಲ್ ಮಾತುಕತೆಗೆ ಅಡಚಣೆ ಉಂಟು ಮಾಡುವುದಿಲ್ಲ,’ ಎಂದು ಪೆಕ್ಸೋವ್ ಹೇಳಿದ್ದಾರೆ.

‘ರಾಜತಾಂತ್ರಿಕ ಮಾತುಕತೆಗಳು ನಡೆಯುವಾಗ ಎರಡೂ ರಾಷ್ಟ್ರಗಳ ವೈದ್ಯಕೀಯ ಸಿಬ್ಬಂದಿ ಸಹಕರಿಸಿದರೆ, ಅತಿಥಿಗಳೊಂದಿಗೆ ಪುಟಿನ್ ನೇರವಾಗಿ ಅವರಿಗೆ ತೀರ ಹತ್ತಿರ ಕೂತು ಹಸ್ತಲಾಘ ಮಾಡುತ್ತಾ ಮಾತುಕತೆ ನಡೆಸಲು ತಯಾರಿದ್ದಾರೆ,’ ಎಂದು ಅವರು ಹೇಳಿದರು.

ಮತ್ತೊಂದೆಡೆ ಮ್ಯಾಕ್ರನ್ ಅವರ ಅಪ್ತ ಸಿಬ್ಬಂದಿಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಅಧ್ಯಕ್ಷರು ತಮ್ಮ ಪ್ರವಾಸದಲ್ಲಿ ಏನೆಲ್ಲ ಮಾಡುತ್ತಾರೋ ರಷ್ಯಾನಲ್ಲೂ ಅದನ್ನೇ ಮಾಡಿದರು.

ರಷ್ಯಾದ ತಂಡವೊಂದು ಪಿಸಿಆರ್ ಮಾಡಿಸಬೇಕೆಂದು ಆಗ್ರಹಿಸಿದ್ದರಿಂದ ಅಂಥ ಪರಿಸ್ಥಿತಿ ಉದ್ಭವಿಸಿತು ಎಂದು ಹೆಸರು ಗೌಪ್ಯವಾಗಿಡಬೇಕೆಂಬ ಷರತ್ತಿನೊಂದಿಗೆ ಫ್ರೆಂಚ್ ಅಧ್ಯಕ್ಷೀಯ ತಂಡದ ಅಧಿಕಾರಿಯೊಬ್ಬರು ಎ ಎಫ್ ಪಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಹಂಗರಿಯ ಪ್ರಧಾನ ಮಂತ್ರಿ ವಿಕ್ಟರ್ ಒರ್ಬನ್ ಮತ್ತು ಇರಾನಿನ ಅಧ್ಯಕ್ಷ ಎಬ್ರಾಹಿಮ್ ರೈಸಿ ಅವರೊಂದಿಗೆ ಮಾತುಕತೆ ನಡೆಸುವಾಗಲೂ ‘ಬೃಹತ್ ಟೇಬಲ್ ಪಾಲಿಸಿ’ಯನ್ನೇ ಅಳವಡಿಸಲಾಗಿತ್ತು. ಇವರಿಬ್ಬರು ಈ ವರ್ಷದ ಆರಂಭದಲ್ಲಿ ರಷ್ಯಾಗೆ ಪ್ರವಾಸ ಬಂದಾಗ ಪುಟಿನ್ ಅವರಿಬ್ಬನ್ನು ಗಾವುದ ದೂರ ಕೂರಿಸಿಯೇ ಮಾತುಕತೆ ನಡೆಸಿದ್ದರು.

ಪುಟಿನ್ ಮತ್ತು ಒರ್ಬನ್ ಕ್ರೆಮ್ಲಿನ್ ನಲ್ಲಿ ಟೇಬಲ್ ನ ವಿರುದ್ಧ ದಿಕ್ಕಿಗೆ ನಿಂತುಕೊಂಡೇ ಶಾಂಪೇನ್ ಹೀರಿದರು.

ಕ್ರೆಮ್ಲಿನ್ ಅಧಿಕಾರಿಗಳು 69-ವರ್ಷ ವಯಸ್ಸಿನ ಪುಟಿನ್ ಅವರನ್ನು ಸೋಂಕಿನಿಂದ ರಕ್ಷಿಸಲು ವಿಪರೀತ ಅನಿಸುವಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪುಟಿನ್ ಅವರು ರಷ್ಯಾದಲ್ಲೇ ತಯಾರಾಗುವ ಸ್ಫುಟ್ನಿಕ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾಸ್ಕೋನಲ್ಲಿ ಜನ ಹೆಚ್ಚು ತಲೆ ಕೆಡಿಸಿಕೊಂಡಿಲ್ಲವಾದರೂ ಅವರ ಅಧ್ಯಕ್ಷ ಮಾತ್ರ ಸೋಂಕಿನ ಬಗ್ಗೆ ಅತ್ಯಂತ ಜಾಗರೂಕರಾಗಿದ್ದಾರೆ.

ರಷ್ಯಾನಲ್ಲಿ ಈಗ ಅನುಷ್ಠಾನದಲ್ಲಿರುವ ಕೊವಿಡ್ ಸುರಕ್ಷೆ ನಿಯಮಾವಳಿಗಳ ಪ್ರಕಾರ ಆ ದೇಶಕ್ಕೆ ಪ್ರಯಾಣಿಸಲಿಚ್ಛಿಸುವವರು ವಿಮಾನ ಹತ್ತುವ ಮೊದಲೇ ಪಿಸಿಅರ್ ಟೆಸ್ಟ್ ಮಾಡಿಸಿಕೊಂಡು ಅದರ ರಿಸಲ್ಟ್ ತಮ್ಮೊಂದಿಗೆ ಕೊಂಡೊಯ್ಯಬೇಕು. ರಷ್ಯಾ ತಲುಪಿದ ನಂತರ ಅವರು ಮತ್ತೊಮ್ಮೆ ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ.

ಇದನ್ನೂ ಓದಿ:   Modi-Putin Meeting ಹೈದರಾಬಾದ್ ಹೌಸ್‌ನಲ್ಲಿ ವ್ಲಾಡಿಮಿರ್ ಪುಟಿನ್ ಭೇಟಿ ಮಾಡಿದ ಮೋದಿ, ಭಾರತ-ರಷ್ಯಾ ಬಾಂಧವ್ಯ ಸದೃಢವಾಗಿದೆ ಎಂದ ಪ್ರಧಾನಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ