ಆರ್ಥಿಕ ಸಂಬಂಧಗಳ ಬಲವರ್ಧನೆ ವಿಯೆಟ್ನಾಂನ ಟು ಲ್ಯಾಮ್​ರನ್ನು ಭೇಟಿ ಮಾಡಿದ ಗೌತಮ್ ಅದಾನಿ

ಗೌತಮ್ ಅದಾನಿ ಅವರು ವಿಯೆಟ್ನಾಂನ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿಯಾಗಿ, ಇಂಧನ, ಬಂದರು ಮತ್ತು ಕೈಗಾರಿಕೆಗಳಲ್ಲಿ ಸಹಕಾರವನ್ನು ಬಲಪಡಿಸಿದ್ದಾರೆ. ಭಾರತ ಮತ್ತು ವಿಯೆಟ್ನಾಂ ನಡುವಿನ ದ್ವಿಪಕ್ಷೀಯ ವ್ಯಾಪಾರವು ಏರುತ್ತಿದ್ದು, ಈ ಭೇಟಿಯು ಎರಡೂ ದೇಶಗಳ ಆರ್ಥಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಆರ್ಥಿಕ ಸಂಬಂಧಗಳ ಬಲವರ್ಧನೆ ವಿಯೆಟ್ನಾಂನ ಟು ಲ್ಯಾಮ್​ರನ್ನು ಭೇಟಿ ಮಾಡಿದ ಗೌತಮ್ ಅದಾನಿ
ಗೌತಮ್ ಅದಾನಿ, ಟೊ ಲ್ಯಾಮ್ ವಿಯೆಟ್ನಾಂ

Updated on: Jul 30, 2025 | 9:38 PM

ನವದೆಹಲಿ, ಜುಲೈ 30: ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ (Goutam Adani) ಅವರು ಮಂಗಳವಾರ ವಿಯೆಟ್ನಾಂ (Vietnam) ದೇಶದ ಟೊ ಲ್ಯಾಮ್ ವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಟೊ ಲ್ಯಾಮ್ ಅವರನ್ನು ಭೇಟಿಯಾದರು. ಸಭೆಯಲ್ಲಿ ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ಮುಂದುವರಿಸುವ ಕುರಿತು ಚರ್ಚೆ ಮಾಡಿದರು.

ಭೇಟಿ ಬಳಿಕ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಹಾಕಿದ ಗೌತಮ ಅದಾನಿ, ಲ್ಯಾಮ್ ಅವರ “ದಿಟ್ಟ ಸುಧಾರಣೆಗಳು ಮತ್ತು ದೂರದೃಷ್ಟಿಯ ಕಾರ್ಯಸೂಚಿ” ಯನ್ನು ಶ್ಲಾಘಿಸಿದರು. ಈ ಭೇಟಿಯು ವಿಯೆಟ್ನಾಂ ದೇಶವನ್ನು ಇಂಧನ, ಬಂದರು, ಕೈಗಾರಿಕಾ ಕ್ಷೇತ್ರದಲ್ಲಿ ಪ್ರಾದೇಶಿಕ ನಾಯಕನನ್ನಾಗಿ ಇರಿಸಲು ಸಹಾಯ ಮಾಡಿದೆ ಟ್ವೀಟ್ ಮಾಡಿದ್ದಾರೆ. 

“ವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹೆಚ್.ಇ. ಟು ಲ್ಯಾಮ್ ಅವರನ್ನು ಭೇಟಿಯಾಗುವುದು ಒಂದು ಸೌಭಾಗ್ಯವಾಗಿತ್ತು. ಇಂಧನ, ಲಾಜಿಸ್ಟಿಕ್ಸ್, ಬಂದರುಗಳು ಮತ್ತು ವಾಯುಯಾನದಲ್ಲಿ ವಿಯೆಟ್ನಾಂ ಅನ್ನು ಪ್ರಾದೇಶಿಕ ನಾಯಕನನ್ನಾಗಿ ಮಾಡುವ ಅವರ ದಿಟ್ಟ ಸುಧಾರಣೆಗಳು ಮತ್ತು ದೂರದೃಷ್ಟಿಯ ಕಾರ್ಯಸೂಚಿಯು ಅಸಾಧಾರಣ ಕಾರ್ಯತಂತ್ರದ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಅದಾನಿ ಹೇಳಿದರು.

“ವಿಯೆಟ್ನಾಂನ ಅಭಿವೃದ್ಧಿಯನ್ನು ಬೆಂಬಲಿಸಲು ಮತ್ತು ಭಾರತ-ವಿಯೆಟ್ನಾಂ ನಡುವಿನ ಆಳವಾದ ಆರ್ಥಿಕ ಪಾಲುದಾರಿಕೆಯನ್ನು ಸಕ್ರಿಯಗೊಳಿಸಲು ಅದಾನಿ ಗ್ರೂಪ್ ಎದುರು ನೋಡುತ್ತಿದೆ” ಎಂದು ಅವರು ಹೇಳಿದರು.

ಭಾರತ-ವಿಯೆಟ್ನಾಂ ದ್ವಿಪಕ್ಷೀಯ ಸಂಬಂಧಗಳು

ಭಾರತ ಮತ್ತು ವಿಯೆಟ್ನಾಂ ದೀರ್ಘಕಾಲದ ಆರ್ಥಿಕ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಹಂಚಿಕೊಂಡಿವೆ. 2026 ರ ಆರ್ಥಿಕ ವರ್ಷದ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 15.76 ಶತಕೋಟಿ ಅಮೆರಿಕನ್ ಡಾಲರ್ ಆಗಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ 6.40 ರಷ್ಟು ಹೆಚ್ಚಳವಾಗಿದೆ. ಭಾರತವು ವಿಯೆಟ್ನಾಂಗೆ 5.43 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿದರೆ, ವಿಯೆಟ್ನಾಂ ಆಮದು ಮಾಡಿಕೊಳ್ಳುವ ಮೌಲ್ಯ 10.33 ಶತಕೋಟಿ ಅಮೆರಿಕನ್ ಡಾಲರ್ ಆಗಿದೆ.

FY25 ರಲ್ಲಿ, ವಿಯೆಟ್ನಾಂ ಭಾರತದ 20 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಜಾಗತಿಕವಾಗಿ 15 ನೇ ಅತಿದೊಡ್ಡ ರಫ್ತು ತಾಣವಾಗಿ ಸ್ಥಾನ ಪಡೆದಿದೆ. ಎರಡೂ ದೇಶಗಳು ರಕ್ಷಣಾ ಮತ್ತು ಕಡಲ ಸಹಕಾರವನ್ನು ಹೆಚ್ಚಿಸುತ್ತಿವೆ.

ಇತ್ತೀಚಿಗೆ, ವಿಯೆಟ್ನಾಂನ ಭಾರತದ ರಾಯಭಾರಿ ಸಂದೀಪ್ ಆರ್ಯ ಅವರು ಡಾ ನಾಂಗ್‌ನಲ್ಲಿರುವ ಟಿಯೆನ್ ಸಾ ಬಂದರಿಗೆ ಭೇಟಿ ನೀಡಿದರು. ಭಾರತೀಯ ನೌಕಾ ಹಡಗುಗಳಾದ ಐಎನ್‌ಎಸ್ ದೆಹಲಿ, ಐಎನ್‌ಎಸ್ ಶಕ್ತಿ ಮತ್ತು ಐಎನ್‌ಎಸ್ ಕಿಲ್ಟನ್ ಬಂದರಿಗೆ ಭೇಟಿ ನೀಡಿದ್ದು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಎರಡೂ ದೇಶಗಳ ಬಲವನ್ನು ಸೂಚಿಸುತ್ತದೆ.

ಈ ತಿಂಗಳ ಆರಂಭದಲ್ಲಿ, ಬ್ರೆಜಿಲ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ಹ್ ಚಿನ್ ಅವರನ್ನು ಭೇಟಿಯಾದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:36 pm, Wed, 30 July 25