ನವದೆಹಲಿ: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರನ್ನು ಇಸ್ರೇಲ್ ಮಿಲಿಟರಿ ಪಡೆ ಹತ್ಯೆ ಮಾಡಿದ್ದು ಸುಳ್ಳು ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಹಮಾಸ್ ಇದೀಗ ತಮ್ಮ ನಾಯಕನ ಹತ್ಯೆಯ ಸುದ್ದಿಯನ್ನು ಒಪ್ಪಿಕೊಂಡಿದೆ. ಅಲ್ಲದೆ, ಗಾಜಾ ಪಟ್ಟಿಯ ಯುದ್ಧ ಅಂತ್ಯವಾಗುವವರೆಗೂ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಘೋಷಿಸಿದೆ.
“ದಕ್ಷಿಣ ಗಾಜಾ ಪಟ್ಟಿಯ ಕಾರ್ಯಾಚರಣೆಯಲ್ಲಿ ಹಮಾಸ್ ಭಯೋತ್ಪಾದಕ ಸಂಘಟನೆಯ ನಾಯಕ ಯಾಹ್ಯಾ ಸಿನ್ವಾರ್‌ನನ್ನು ಹತ್ಯೆ ಮಾಡಿದೆ” ಎಂದು ಇಸ್ರೇಲಿ ಮಿಲಿಟರಿ ಹೇಳಿತ್ತು. ಆದರೆ, ಅವರ ಸಾವನ್ನು ಹಮಾಸ್ ದೃಢಪಡಿಸಿರಲಿಲ್ಲ. ಇದೀಗ ಈ ಬಗ್ಗೆ ಹಮಾಸ್ ಸ್ಪಷ್ಟನೆ ನೀಡಿದ್ದು, ತಮ್ಮ ನಾಯಕನ ಸಾವನ್ನು ಖಚಿತಪಡಿಸಿದೆ. ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲಿನ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಸಿನ್ವಾರ್ ಎಂದು ಹೇಳಲಾಗಿತ್ತು. ಇದಾದ ನಂತರ ಇಸ್ರೇಲ್ ಮತ್ತು ಗಾಜಾ ನಡುವಿನ ಸಂಘರ್ಷ ಉಲ್ಬಣಗೊಂಡಿತು.
ಇದನ್ನೂ ಓದಿ: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆ; ಇಸ್ರೇಲ್ ಘೋಷಣೆ
ಗಾಜಾದಲ್ಲಿ ಇಸ್ರೇಲಿ ವೈಮಾನಿಕ ದಾಳಿಯ ನಂತರ ಹಮಾಸ್ ತನ್ನ ನಾಯಕ ಯಾಹ್ಯಾ ಸಿನ್ವಾರ್ ಅವರ ಸಾವನ್ನು ದೃಢಪಡಿಸಿದೆ. ಸಿನ್ವಾರ್‌ನ ಸಾವು ಹಮಾಸ್ ಮತ್ತು ಹೆಜ್ಬೊಲ್ಲಾದ ಉನ್ನತ ಕಮಾಂಡರ್‌ಗಳ ವಿರುದ್ಧ ಇಸ್ರೇಲಿ ಆಕ್ರಮಣಗಳ ಸರಣಿಯಲ್ಲಿ ಹೊಸ ಬೆಳವಣಿಗೆಯಾಗಿದೆ. ಇದು ಉಗ್ರಗಾಮಿ ಸಂಘಟನೆಗಳಿಗೆ ದೊಡ್ಡ ಹಾನಿಯನ್ನುಂಟುಮಾಡಿದೆ.
ಹಮಾಸ್ ತನ್ನ ಪ್ರಕಟಣೆಯಲ್ಲಿ ಯಾಹ್ಯಾ ಸಿನ್ವಾರ್ ಯುದ್ಧಭೂಮಿಯಲ್ಲಿ ಇಸ್ರೇಲಿ ಪಡೆಗಳನ್ನು ಎದುರಿಸಿದ “ವೀರ ಹುತಾತ್ಮ” ಎಂದು ಹಮಾಸ್ ಶ್ಲಾಘಿಸಿದೆ. ಕದನ ವಿರಾಮ ಮತ್ತು ಗಾಜಾದಿಂದ ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳುವವರೆಗೆ ಸಂಘರ್ಷದ ಸಮಯದಲ್ಲಿ ಇಸ್ರೇಲ್‌ನಿಂದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ಒತ್ತಿಹೇಳಿದೆ.
ಇದನ್ನೂ ಓದಿ: ಲೆಬನಾನ್: ಹಿಬ್ಜುಲ್ಲಾ ವಿರುದ್ಧದ ಯುದ್ಧದಲ್ಲಿ 8 ಇಸ್ರೇಲಿ ಸೈನಿಕರು ಸಾವು
ನಿನ್ನೆಯಷ್ಟೇ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಸಿನ್ವಾರ್ ಹತ್ಯೆಯನ್ನು ದೃಢಪಡಿಸಿದರು ಮತ್ತು ಹಮಾಸ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯು ಮುಗಿದಿಲ್ಲ ಎಂದು ಹೇಳಿದ್ದರು. ಈ ಬೆಳವಣಿಗೆಯು ಇಸ್ರೇಲಿ ಅಧಿಕಾರಿಗಳು ಮತ್ತು ಗಾಜಾ ನಿವಾಸಿಗಳ ನಡುವೆ ಸಂಘರ್ಷ ಉಲ್ಬಣಗೊಳ್ಳುವ ಸಾಧ್ಯತೆ ಹುಟ್ಟುಹಾಕಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ