Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪನ್ನುನ್ ಕೊಲೆ ಸಂಚು ರೂಪಿಸಿದ ಮಾಜಿ ಭಾರತೀಯ ಅಧಿಕಾರಿ ವಿಕಾಸ್ ಯಾದವ್ ಯಾರು?

ಭಾರತೀಯ ಮಾಜಿ ಅಧಿಕಾರಿ ವಿಕಾಸ್ ಯಾದವ್ ವಿರುದ್ಧ ಕೊಲೆಗೆ ಸಂಚು ರೂಪಿಸಿದ, ಮನಿ ಲಾಂಡರಿಂಗ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿರುವುದಾಗಿ ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ. ವಿಕಾಸ್ ಯಾದವ್ ಭಾರತೀಯ ಗುಪ್ತಚರ ಇಲಾಖೆ ರಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಭಾರತ ಘೋಷಿತ ಉಗ್ರನಾಗಿರುವ ಗುರುಪಸ್ವಂತ್ ಪನ್ನುನ್ ಕೊಲೆಗೆ ಸಂಚು ರೂಪಿಸಿದ ಆರೋಪವನ್ನು ವಿಕಾಸ್ ಯಾದವ್ ಎದುರಿಸುತ್ತಿದ್ದಾರೆ.

ಪನ್ನುನ್ ಕೊಲೆ ಸಂಚು ರೂಪಿಸಿದ ಮಾಜಿ ಭಾರತೀಯ ಅಧಿಕಾರಿ ವಿಕಾಸ್ ಯಾದವ್ ಯಾರು?
ವಿಕಾಸ್ ಯಾದವ್
Follow us
ಸುಷ್ಮಾ ಚಕ್ರೆ
|

Updated on: Oct 18, 2024 | 3:24 PM

ನವದೆಹಲಿ: ಅಮೆರಿಕಾ ಮತ್ತು ಕೆನಡಾದ ಪೌರತ್ವ ಹೊಂದಿರುವ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಅಮೆರಿಕ ಗುರುವಾರ ಭಾರತದ ಮಾಜಿ ಗುಪ್ತಚರ ಅಧಿಕಾರಿ ವಿಕಾಸ್ ಯಾದವ್ ವಿರುದ್ಧ ಆರೋಪ ಹೊರಿಸಿದೆ. ವಿಕಾಸ್ ಯಾದವ್ ಪ್ರಸ್ತುತ ಬಂಧನಕ್ಕೊಳಗಾಗಿದ್ದರೂ ಅವರು ಕೊಲೆ ಮತ್ತು ಹಣ ವರ್ಗಾವಣೆಗೆ ಸಂಚು ರೂಪಿಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಘೋಷಿಸಿದೆ. ಭಾರತ ಘೋಷಿತ ಉಗ್ರನಾಗಿರುವ ಗುರುಪಸ್ವಂತ್ ಪನ್ನುನ್ ಸದ್ಯಕ್ಕೆ ಅಮೆರಿಕ ಪ್ರಜೆಯಾಗಿದ್ದಾರೆ. ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಭಾರತೀಯ ಗುಪ್ತಚರ ಇಲಾಖೆ ರಾ ಮಾಜಿ ಅಧಿಕಾರಿ ವಿಕಾಸ್ ಯಾದವ್ ವಿರುದ್ಧ ಕೇಸ್ ದಾಖಲಾಗಿದೆ.

ವಿಕಾಸ್ ಯಾದವ್ ಅವರು ದೇಶದ ವಿದೇಶಿ ಗುಪ್ತಚರ ಸೇವೆಯಾದ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (RAW) ಅನ್ನು ಒಳಗೊಂಡಿರುವ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ಗಾಗಿ ಕೆಲಸ ಮಾಡಿದ್ದರು. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ವಿಕಾಸ್ ಯಾದವ್‌ಗಾಗಿ ವಾಂಟೆಡ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. 1984ರಲ್ಲಿ ಹರಿಯಾಣದಲ್ಲಿ ಜನಿಸಿದ ವಿಕಾಸ್ ಯಾದವ್ ಭಾರತದಲ್ಲಿ ನೆಲೆಸಿರುವ ಭಾರತೀಯ ಪ್ರಜೆಯಾಗಿದ್ದು, ಗುರುಪತ್ವಂತ್ ಪನ್ನುನ್ ಹತ್ಯೆಯ ಸಂಚು ಪ್ರಕರಣದಲ್ಲಿ ಎಫ್‌ಬಿಐನಿಂದ ‘ವಾಂಟೆಡ್’ ಎಂದು ಘೋಷಿಸಲ್ಪಟ್ಟಿದ್ದಾರೆ.

ಇದನ್ನೂ ಓದಿ: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆ; ಇಸ್ರೇಲ್ ಘೋಷಣೆ

ವಿಕಾಸ್ ಯಾದವ್ ವಿರುದ್ಧದ ಆರೋಪಗಳೇನು?:

ವಿಕಾಶ್ ಯಾದವ್ ಅವರು ಭಾರತದ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಭಾರತದ ಅತಿದೊಡ್ಡ ಅರೆಸೇನಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಯುಎಸ್ ದೋಷಾರೋಪಣೆ ಹೇಳುತ್ತದೆ. ಅಮೆರಿಕದ ನೆಲದಲ್ಲಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ವಿಫಲವಾದ ಸಂಚಿನಲ್ಲಿ ಪಾತ್ರ ವಹಿಸಿದ್ದಕ್ಕಾಗಿ ವಿಕಾಸ್ ಯಾದವ್ ವಿರುದ್ಧ ಯುಎಸ್ ಅಧಿಕಾರಿಗಳು ಆರೋಪಿಸಿದ್ದಾರೆ.

ವಿಕಾಸ್ ಯಾದವ್ ಅವರು ಭಾರತದ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಭಾರತದ ಅತಿದೊಡ್ಡ ಅರೆಸೈನಿಕ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವಿಕಾಸ್ ಯಾದವ್ ಅವರು ಕೌಂಟರ್ ಇಂಟೆಲಿಜೆನ್ಸ್, ವಾರ್ ಕ್ರಾಫ್ಟ್, ಶಸ್ತ್ರಾಸ್ತ್ರಗಳು ಮತ್ತು ಪ್ಯಾರಾಟ್ರೂಪರ್ ತರಬೇತಿಯನ್ನು ಪಡೆದಿದ್ದಾರೆ ಎಂದು ಯುಎಸ್ ದೋಷಾರೋಪಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಪನ್ನು ಹತ್ಯೆಗೆ ಸಂಚು ರೂಪಿಸಿದವನು ಇನ್ನುಮುಂದೆ ಭಾರತ ಸರ್ಕಾರದ ಉದ್ಯೋಗಿಯಾಗಿರುವುದಿಲ್ಲ: ಮ್ಯಾಥ್ಯೂ ಮಿಲ್ಲರ್

ಗುರುವಾರ ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ (ಡಿಒಜೆ) ದೋಷಾರೋಪಣೆಯಲ್ಲಿ ಗುರುತಿಸಲಾದ ವ್ಯಕ್ತಿಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ಆ ವ್ಯಕ್ತಿಯು “ಇನ್ನುಮುಂದೆ ಭಾರತ ಸರ್ಕಾರದ ಉದ್ಯೋಗಿ ಅಲ್ಲ” ಎಂದು ದೃಢಪಡಿಸಿದರು.

ಅಮೆರಿಕದ ನೆಲದಲ್ಲಿ ಒಬ್ಬ ಅಮೇರಿಕನ್ ಪ್ರಜೆಯನ್ನು ಕೊಲ್ಲುವ ಸಂಚಿನಲ್ಲಿ ಭಾರತ ಸರ್ಕಾರವು ತನ್ನ ಸಹಭಾಗಿತ್ವ ಅಥವಾ ಒಳಗೊಳ್ಳುವಿಕೆಯನ್ನು ನಿರಾಕರಿಸಿದೆ. ಅಮೆರಿಕದ ಆರೋಪದ ನಂತರ ಈ ವಿಷಯದ ಬಗ್ಗೆ ತನಿಖೆ ನಡೆಸಲು ನವದೆಹಲಿ ತನಿಖಾ ಸಮಿತಿಯನ್ನು ರಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ