ಹೊಗೆಯಲ್ಲಿ ಮುಳುಗಿದ ಸಿಡ್ನಿ, ವಿಮಾನ ಹಾರಾಟ ರದ್ದು
ಆಸ್ಟ್ರೇಲಿಯಾದಲ್ಲಿ ಹಬ್ಬಿರುವ ಕಾಡ್ಗಿಚ್ಚು ಇನ್ನೂ ತಣ್ಣಗಾಗಿಲ್ಲ. ಇದರ ಪರಿಣಾಮ ಸಿಡ್ನಿ ಸೇರಿದಂತೆ ಹಲವು ನಗರಗಳಲ್ಲಿ ತೀವ್ರ ಪ್ರಮಾಣದ ಹೊಗೆ ಆವರಿಸಿದ್ದು, ವಿಮಾನ ಹಾರಾಟವನ್ನ ರದ್ದುಪಡಿಸಲಾಗಿದೆ. ಮತ್ತೊಂದ್ಕಡೆ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಪರದಾಡುತ್ತಿದ್ದಾರೆ. ಮತ್ತೆ ಭುಗಿಲೆದ್ದ ಹೋರಾಟ..! ಹಾಂಕಾಂಗ್ನಲ್ಲಿ ಪರಿಸ್ಥಿತಿ ತಣ್ಣಗಾಗಿ, ಪ್ರತಿಭಟನೆ ಮುಕ್ತಾಯವಾಯಿತು ಅನ್ನೋ ಹೊತ್ತಲ್ಲೇ ಹೋರಾಟ ಭುಗಿಲೆದ್ದಿದೆ. ಪ್ರಜಾಪ್ರಭುತ್ವವಾದಿ ನಾಯಕರು ಕರೆ ನೀಡಿರುವ ಪ್ರತಿಭಟನೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದು, ಹಾಂಕಾಂಗ್ ಆಡಳಿತ ಪಕ್ಷಕ್ಕೆ ತಿರುಗೇಟು ನೀಡಿವೆ. ಶಾಂತಿ ಕಾಪಾಡಲು ಭಾರಿ ಭದ್ರತೆ: ಇತ್ತೀಚೆಗೆ ನಡೆದಿದ್ದ […]
ಆಸ್ಟ್ರೇಲಿಯಾದಲ್ಲಿ ಹಬ್ಬಿರುವ ಕಾಡ್ಗಿಚ್ಚು ಇನ್ನೂ ತಣ್ಣಗಾಗಿಲ್ಲ. ಇದರ ಪರಿಣಾಮ ಸಿಡ್ನಿ ಸೇರಿದಂತೆ ಹಲವು ನಗರಗಳಲ್ಲಿ ತೀವ್ರ ಪ್ರಮಾಣದ ಹೊಗೆ ಆವರಿಸಿದ್ದು, ವಿಮಾನ ಹಾರಾಟವನ್ನ ರದ್ದುಪಡಿಸಲಾಗಿದೆ. ಮತ್ತೊಂದ್ಕಡೆ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಪರದಾಡುತ್ತಿದ್ದಾರೆ.
ಮತ್ತೆ ಭುಗಿಲೆದ್ದ ಹೋರಾಟ..! ಹಾಂಕಾಂಗ್ನಲ್ಲಿ ಪರಿಸ್ಥಿತಿ ತಣ್ಣಗಾಗಿ, ಪ್ರತಿಭಟನೆ ಮುಕ್ತಾಯವಾಯಿತು ಅನ್ನೋ ಹೊತ್ತಲ್ಲೇ ಹೋರಾಟ ಭುಗಿಲೆದ್ದಿದೆ. ಪ್ರಜಾಪ್ರಭುತ್ವವಾದಿ ನಾಯಕರು ಕರೆ ನೀಡಿರುವ ಪ್ರತಿಭಟನೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದು, ಹಾಂಕಾಂಗ್ ಆಡಳಿತ ಪಕ್ಷಕ್ಕೆ ತಿರುಗೇಟು ನೀಡಿವೆ.
ಶಾಂತಿ ಕಾಪಾಡಲು ಭಾರಿ ಭದ್ರತೆ: ಇತ್ತೀಚೆಗೆ ನಡೆದಿದ್ದ ಆಂತರಿಕ ಗಲಭೆಯಿಂದ ಇರಾಕ್ ಸ್ವಲ್ಪ ರಿಲೀಫ್ ಪಡೆದುಕೊಂಡಿದೆ. ಸದ್ಯದ ಮಟ್ಟಿಗೆ ಪ್ರತಿಭಟನೆ ಹಾಗೂ ಹೋರಾಟಗಳು ತಣ್ಣಗಾಗಿವೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ, ಇರಾಕ್ ಭದ್ರತಾ ಅಧಿಕಾರಿಗಳು ಜನರನ್ನ ಪರಿಶೀಲನೆ ಮಾಡಿ ಬಿಡುತ್ತಿದ್ದಾರೆ. ಈ ಮಧ್ಯೆ ಉಗ್ರ ದಾಳಿಯ ಭೀತಿಯೂ ಇರಾಕ್ಗೆ ಎದುರಾಗಿದೆ.
Published On - 2:14 pm, Tue, 10 December 19