ಹಾಂಗ್ ಕಾಂಗ್ ಇತಿಹಾಸದ ಭಾಗವಾಗಿದ್ದ ತೇಲುವ ಜಂಬೋ ರೆಸ್ಟುರಾಂಟ್ ಇನ್ನು ಇತಿಹಾಸ, ಸಮುದ್ರದಲ್ಲಿ ಅದು ಮುಗುಚಿಕೊಂಡಿದೆ!
ಆದರೆ ಕೊವಿಡ್ ಪಿಡುಗು ಈ ತೇಲುವ ರೆಸ್ಟುರಾಂಟ್ ನ ಆಂತ್ಯ ಬರೆಯಲಾರಂಭಿಸಿತು. ಜನ ಇಲ್ಲಿಗೆ ಬರುವುದನ್ನು ನಿಲ್ಲಿಸಿದರು. ಇದರ ನಿರ್ವಹಣೆ ಮಾಡುತ್ತಿದ್ದ ಮೆಲ್ಕೊ ಇಂಟರ್ ನ್ಯಾಶನಲ್ ಡೆವಲಪ್ಮೆಂಟ್ ಪ್ರಕಾರ 2013 ರಿಂದಲೇ ವ್ಯಾಪಾರ ಕುಂಠಿತಗೊಂಡಿತ್ತು ಅದನ್ನು ನಷ್ಟದಲ್ಲಿ ನಡೆಸಲಾಗುತಿತ್ತು.
ಹಾಂಗ್ ಕಾಂಗ್ ನ ಜಂಬೋ ತೇಲುವ ರೆಸ್ಟುರಾಂಟ್ ಬಗ್ಗೆ ಯಾರು ಕೇಳಿಲ್ಲ? ಕಳೆದ ಅರ್ಧ ಶತಮಾನಕ್ಕಿಂತಲೂ ಹೆಚ್ಚು ಸಮಯದಿಂದ ಅದು ಈ ದೇಶದ ಪ್ರಮುಖ ಆಕರ್ಷಣೆ ಅನಿಸಿಕೊಂಡಿತ್ತು ಮತ್ತು ಜನಪ್ರಿಯ ಟೂರಿಸ್ಟ್ ಸ್ಪಾಟ್ ಅಗಿ ಹೆಸರು ಮಾಡಿತ್ತು. ಅದರೆ ಅದಿನ್ನು ಇತಿಹಾಸ ಮಾರಾಯ್ರೇ. ಯಾಕೆ ಗೊತ್ತಾ? ಹಾಂಗ್ ಕಾಂಗ್ ಲ್ಯಾಂಡ್ ಮಾರ್ಕ್ಗಳಲ್ಲಿ ಒಂದಾಗಿದ್ದ ತೇಲುವ ರೆಸ್ಟುರಾಂಟ್ ದಕ್ಷಿಣ ಚೀನಾ ಸಮುದ್ರದಲ್ಲಿ ಮುಗುಚಿಕೊಂಡಿದೆ!
ಬಿಬಿಸಿಯ ವರದಿಯೊಂದರ ಪ್ರಕಾರ ಸದರಿ ರೆಸ್ಟುರಾಂಟನ್ನು ಅಘೋಷಿತ ಸ್ಥಳವೊಂದಕ್ಕೆ ಟೋ ಮಾಡಿಕೊಂಡು ಎಳೆದೊಯ್ಯುವ ಪ್ರಯತ್ನ ಆರಂಭಗೊಂಡ ಒಂದು ವಾರದ ಬಳಿಕ ಅದು ಮುಗುಚಿಕೊಂಡಿದೆ. ಇದರ ಮಾಲೀಕತ್ವ ಹೊಂದಿದ್ದ ಅಬರ್ದೀನ್ ರೆಸ್ಟುರಾಂಟ್ ಎಂಟರ್ ಪ್ರೈಸಸ್, ’ರೆಸ್ಟುರಾಂಟ್ ಮುಗುಚಿ ಹೋಗಿದ್ದು ಬಹಳ ವಿಷಾದಕರ ಸಂಗತಿ. ಆದರೆ ಸಮಾಧಾನದ ವಿಷಯವೆಂದರೆ ಒಬ್ಬೇ ಒಬ್ಬ ಸಿಬ್ಬಂದಿ ದುರ್ಘಟನೆಯಲ್ಲಿ ಗಾಯಗೊಂಡಿಲ್ಲ,’ ಎಂದು ಹೇಳಿದೆ.
Floating restaurant sinks in South China Sea. #HongKong pic.twitter.com/qhbOf1rCID
— ????????????? ♏ (@motorcycho81) June 21, 2022
ಕಳೆದ ಶನಿವಾರ ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ರೆಸ್ಟುರಾಂಟ್ ಹೊಂದಿದ್ದ ತೇಲುವ ಸ್ಟ್ರಕ್ಚರ್ ವಾಲಲಾರಂಭಿಸಿತ್ತು ಎಂದು ಅದರ ಮಾಲೀಕರು ಹೇಳಿದ್ದಾರೆ. ದಕ್ಷಿಣ ಚೀನಾ ಸಮುದ್ರದ ಪ್ಯಾರಾಸೆಲ್ ದ್ವೀಪಗಳನ್ನು ಹಾದು ಹೋಗುವಾಗ ನೀರು ಹಡಗಿನೊಳಗೆ ಪ್ರವೇಶಿಸಲು ಪ್ರಾರಂಭಿಸಿತು ಎಂದು ದಿ ಇಂಡಿಪೆಂಡಂಟ್ ವರದಿ ಮಾಡಿದೆ.
‘ಹಡಗನ್ನು ರಕ್ಷಿಸಲು; ಮುಳುಗುತ್ತಿರುವ ಹಡುಗು, ನಾವೆಗಳನ್ನು ಉಳಿಸಲೆಂದೇ ಅಸ್ತಿತ್ವಕ್ಕೆ ಬಂದಿರುವ ಟೋಯಿಂಗ್ ಕಂಪನಿಯ ಪ್ರಯತ್ನಗಳ ಹೊರತಾಗಿಯೂ, ನತದೃಷ್ಟ ರೆಸ್ಟುರಾಂಟ್ ಭಾನುವಾರ ಮುಳುಗಿತು,’ ಎಂದು ಮಾಲೀಕರು ಹೇಳಿದ್ದಾರೆ. ಕೊವಿಡ್ ಪಿಡುಗಿನಿಂದಾಗಿ 2020 ರಿಂದ ಎರಡು ವರ್ಷಗಳ ರೆಸ್ಟರಾಂಟ್ ಮುಚ್ಚಲ್ಪಟ್ಟಿದ್ದರಿಂದ ಅದರ ಮಾಲೀಕರು ಮತ್ತು ಪಾಲುದಾರರು ಆರ್ಥಿಕ ಹೊರೆ ಅನುಭವಿಸಲಾರಂಭಿಸಿದ್ದರು.
ಕಳೆದ 50 ವರ್ಷಗಳ ಅವಧಿಯಲ್ಲಿ ಬ್ರಿಟನ್ ಮಹಾರಾಣಿ ಎಲಿಜಬೆತ್ II, ಹಾಲಿವುಡ್ ನಟ ಟಾಮ್ ಕ್ರೂಸ್, ಬ್ರಿಟನ್ ಉದ್ಯಮಿ ರಿಚರ್ಡ್ ಬ್ರ್ಯಾನ್ಸನ್ ಸೇರಿದಂತೆ 3 ಬಿಲಿಯನ್ ಗಳಿಗೂ ಹೆಚ್ಚು ಅತಿಥಿಗಳು ರೆಸ್ಟುರಾಂಟ್ ನಲ್ಲಿ ಊಟ ಮಾಡಿದ್ದಾರೆ. ಜೇಮ್ಸ್ ಬಾಂಡ್ ಸಿನಿಮಾ ಸೇರಿದಂತೆ ಹಲವಾರು ಚಿತ್ರಗಳ ಶೂಟಿಂಗ್ ಇಲ್ಲಿ ನಡೆದಿದೆ.
ಆದರೆ ಕೊವಿಡ್ ಪಿಡುಗು ಈ ತೇಲುವ ರೆಸ್ಟುರಾಂಟ್ ನ ಆಂತ್ಯ ಬರೆಯಲಾರಂಭಿಸಿತು. ಜನ ಇಲ್ಲಿಗೆ ಬರುವುದನ್ನು ನಿಲ್ಲಿಸಿದರು. ಇದರ ನಿರ್ವಹಣೆ ಮಾಡುತ್ತಿದ್ದ ಮೆಲ್ಕೊ ಇಂಟರ್ ನ್ಯಾಶನಲ್ ಡೆವಲಪ್ಮೆಂಟ್ ಪ್ರಕಾರ 2013 ರಿಂದಲೇ ವ್ಯಾಪಾರ ಕುಂಠಿತಗೊಂಡಿತ್ತು ಅದನ್ನು ನಷ್ಟದಲ್ಲಿ ನಡೆಸಲಾಗುತಿತ್ತು.
ಅದನ್ನು ಟೋ ಮಾಡಿ ತೀರಕ್ಕೆ ಎಳೆತರಲು ಪ್ರಯತ್ನ ಆರಂಭಿಸುವ ಮುನ್ನ ಅದರ ಒಳಭಾಗದ ತಪಾಸಣೆ ನಡೆಸಲು ಮರೀನ್ ಇಂಜಿನೀಯರ್ ಗಳ ಸೇವೆ ಬಳಸಿಕೊಳ್ಳಲಾಗಿತ್ತು. ಅದಕ್ಕೆ ಬೇಕಾಗಿದ್ದ ಎಲ್ಲ ಅನುಮತಿ ಪತ್ರಗಳನ್ನು ಪಡೆದುಕೊಳ್ಳಲಾಗಿತ್ತು. ಅದರ ನಿರ್ವಹಣೆಯನ್ನು ಹೊಸಬರು ಯಾರಾದರೂ ವಹಿಸಿಕೊಳ್ಳುವ ಮುನ್ನ ಒಂದು ಅಘೋಷಿತ ಸ್ಥಳಕ್ಕೆ ಎಳೆದೊಯ್ದು ಇಡುವ ಯೋಚನೆ ಮಾಲೀಕರಿಗಿತ್ತು.
ಇದನ್ನೂ ಓದಿ: Viral Video: ಚಿಕ್ನಿ ಚಮೇಲಿ ಹಾಡಿಗೆ ಕತ್ರಿನಾ ಕೈಫ್ ಅವರಂತೆ ಹೆಜ್ಜೆ ಹಾಕಿದ ವಿದೇಶಿ ವಧು