ಚೇಳಿನ ಭಂಗಿಯಲ್ಲಿ 29 ನಿಮಿಷ ನಿಂತು ಗಿನ್ನೆಸ್ ದಾಖಲೆ ಬರೆದ ದುಬೈ ಮೂಲದ ಯೋಗ ತರಬೇತುದಾರ

ಚೇಳಿನ ಭಂಗಿಯಲ್ಲಿ 29 ನಿಮಿಷ ನಿಂತು ಗಿನ್ನೆಸ್ ದಾಖಲೆ ಬರೆದ ದುಬೈ ಮೂಲದ ಯೋಗ ತರಬೇತುದಾರ
ಯಶ್ ಮೊರಾಡಿಯಾ

2001 ರಲ್ಲಿ ಜನಿಸಿದ ಅವರು ತಮ್ಮ ಎಂಟನೇ ವಯಸ್ಸಿನಲ್ಲಿ ಯೋಗ ಪಯಣವನ್ನು ಪ್ರಾರಂಭಿಸಿದರು. 2017 ರಲ್ಲಿ, ಅವರು ತಮ್ಮ ಯೋಗ ಶಿಕ್ಷಕರ ತರಬೇತಿ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಜನರು ತಮ್ಮ...

TV9kannada Web Team

| Edited By: Rashmi Kallakatta

Jun 23, 2022 | 3:33 PM

ದುಬೈ (Dubai) ಮೂಲದ ಯೋಗ ತರಬೇತುದಾರ (yoga instructor) ಯಶ್ ಮನ್ಸುಖ್​​​ಭಾಯಿ ಮೊರಾಡಿಯಾ (Yash Mansukhbhai Moradiya) ಅವರು ಚೇಳಿನ ಭಂಗಿಯಲ್ಲಿ 29 ನಿಮಿಷ ಮತ್ತು ನಾಲ್ಕು ಸೆಕೆಂಡುಗಳ ಕಾಲ ನಿಂತು ಗಿನ್ನೆಸ್ ದಾಖಲೆ ಬರೆದಿದ್ದಾರೆ. 21 ವರ್ಷದ ಯಶ್ ಮೊರಾಡಿಯಾ ಅವರು ಚೇಳಿನ ಭಂಗಿಯಲ್ಲಿ (ಅಥವಾ ವೃಶ್ಚಿಕಾಸನ) 29 ನಿಮಿಷ ಮತ್ತು ನಾಲ್ಕು ಸೆಕೆಂಡುಗಳ ಕಾಲ ನಿಲ್ಲುವ ಮೂಲಕ ಈ ಹಿಂದೆಇದ್ದ ನಾಲ್ಕು ನಿಮಿಷ 47 ಸೆಕೆಂಡುಗಳ ದಾಖಲೆ ಮುರಿದಿದ್ದಾರೆ. ಚೇಳಿನ ಭಂಗಿಯು ಸುಧಾರಿತ ಯೋಗ ಆಸನವಾಗಿದೆ. ಅಲ್ಲಿ ನೀವು ನಿಮ್ಮ ಮುಂದಿನ ತೋಳುಗಳನ್ನು ನೆಲದ ಮೇಲೆ ಇರಿಸಿ ಮತ್ತು ನಿಮ್ಮ ತಲೆಯ ಮೇಲೆ ನಿಮ್ಮ ಕಾಲುಗಳನ್ನು ಕಮಾನು ಮಾಡಿ ನಿಲ್ಲಬೇಕು. “ಚೇಳಿನ ಸ್ಥಾನವು ಸ್ಥಿರತೆಗೆ ಸಂಬಂಧಿಸಿದೆ. ನೀವು ಭಂಗಿಯನ್ನು ಎಷ್ಟು ಸಮಯ ಹಿಡಿದಿಟ್ಟುಕೊಳ್ಳುತ್ತೀರಿ, ನಿಮ್ಮ ಮಾನಸಿಕ ಸ್ಥಿತಿಸ್ಥಾಪಕತ್ವವನ್ನು ಸ್ಥಾಪಿಸಬಹುದು ಎಂದು ಯಶ್ ಹೇಳಿದ್ದಾರೆ. ಕೊವಿಡ್ ಸಮಯದಲ್ಲಿ ಮನೆಯಲ್ಲಿ ಕಳೆದ ಹೆಚ್ಚುವರಿ ಸಮಯವನ್ನು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಬಳಸಿದ ಯಶ್ ಸುಮಾರು ಎರಡು ವರ್ಷಗಳ ಕಾಲ ಈ ಪ್ರಯತ್ನ ಮಾಡಿದ್ದಾರೆ. ಯಶ್ ಅವರು ಈ ಸಾಧನೆ ಮಾಡಲು ಫೆಬ್ರವರಿ 22, 2022 ಮಂಗಳವಾರವನ್ನೇ ಆಯ್ಕೆ ಮಾಡಿದ್ದು, ನಿರ್ದಿಷ್ಟ ಸ್ವರೂಪದಲ್ಲಿ (2/22/22) ಬರೆದಾಗ ಅದು ಪಾಲಿಂಡ್ರೋಮ್ ಆಗಿದೆ.

2001 ರಲ್ಲಿ ಜನಿಸಿದ ಅವರು ತಮ್ಮ ಎಂಟನೇ ವಯಸ್ಸಿನಲ್ಲಿ ಯೋಗ ಪಯಣವನ್ನು ಪ್ರಾರಂಭಿಸಿದರು. 2017 ರಲ್ಲಿ, ಅವರು ತಮ್ಮ ಯೋಗ ಶಿಕ್ಷಕರ ತರಬೇತಿ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಜನರು ತಮ್ಮ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಅವರ ಫಿಟ್‌ನೆಸ್ ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ಯೋಗವನ್ನು ತಮ್ಮ ವೃತ್ತಿಯಾಗಿ ಆರಿಸಿಕೊಂಡರು.

ಯಶ್ ಅವರು 2010 ರಲ್ಲಿ ನಿಯಮಿತ ಯೋಗಾಭ್ಯಾಸವನ್ನು ಪ್ರಾರಂಭಿಸಿದರು, ಪವರ್ ಯೋಗಕ್ಕೆ ದಾರಿ ಮಾಡಿಕೊಟ್ಟರು. ಇದು ವೇಗದ ಹೃದಯದ ವ್ಯಾಯಾಮವಾಗಿದ್ದು, ಹೆಚ್ಚಿನ ಪ್ರಭಾವದ ಯೋಗ ಭಂಗಿಗಳ ಮೂಲಕ ದೇಹದಲ್ಲಿ ಶಕ್ತಿ ಮತ್ತು ನಮ್ಯತೆಯನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕರಿಸಿದೆ. ಈ ದಾಖಲೆಯನ್ನು ಸಾಧಿಸಲು ಯಶ್ ಎರಡು ವರ್ಷಗಳ ಸತತ ಅಭ್ಯಾಸವನ್ನು ಮಾಡಿದ್ದಾರೆ.

“ನನ್ನ ಸಾಧನೆ ದೈಹಿಕ ಮಾತ್ರವಲ್ಲ, ಆತ್ಮವಿಶ್ವಾಸ ಮತ್ತು ಮಾನಸಿಕ ಶಕ್ತಿಯೊಂದಿಗೆ ಬಹಳಷ್ಟು ಸಂಬಂಧ ಹೊಂದಿದೆ ಅಂತಾರೆ ಅವರು.

ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada