ವಾಷಿಂಗ್ಟನ್: ಅಮೆರಿಕದಲ್ಲಿ ಅಪ್ಪಳಿಸಿರುವ ಇಡಾ ಚಂಡಮಾರುತದ (Hurricane Ida) ಅಟ್ಟಹಾಸದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಮೆರಿಕದಲ್ಲಿ ಇದುವರಎಗೂ ಉಂಟಾದ ಚಂಡಮಾರುತಗಳಲ್ಲೇ ಇದು ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಇಡಾ ಚಂಡಮಾರುತದ ಅಬ್ಬರಕ್ಕೆ ಲೂಸಿಯಾನ ಬಹುತೇಕ ಮುಳುಗಡೆಯಾಗಿದೆ. ಈ ಭಾಗದಲ್ಲಿ ಚಂಡಮಾರುತದ ಜೊತೆಗೆ ಭೂ ಕುಸಿತವೂ ಉಂಟಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಡಾ ಚಂಡಮಾರುತದ ಅಟ್ಟಹಾಸದ ವಿಡಿಯೋ, ಫೋಟೋಗಳು ವೈರಲ್ ಅಗಿವೆ.
ಲೂಸಿಯಾನಾಗೆ ಭಾನುವಾರ ಅಪ್ಪಳಿಸಿರುವ ಇಡಾ ಚಂಡಮಾರುತದ ಪರಿಣಾಮದಿಂದ ಮಿಸಿಸಿಪ್ಪಿ ನದಿ ಕೂಡ ಹಿಮ್ಮುಖವಾಗಿ ಹರಿದ ವಿಡಿಯೋಗಳು ವೈರಲ್ ಆಗಿದ್ದವು. ಮಿಸಿಸಿಪ್ಪಿ ನದಿ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತಿರುವ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಸಮುದ್ರದಲ್ಲಿ ಭೀಕರ ಚಂಡಮಾರುತ ಎದ್ದಿರುವುದರಿಂದ ನದಿ ಹಿಮ್ಮುಖವಾಗಿ ಹರಿದಿತ್ತು.
This is why I took before photos. Building got wiped out by #Ida #NOLA pic.twitter.com/z1sLf3I4Q2
— Joel Franco (@OfficialJoelF) August 30, 2021
ಲೂಸಿಯಾನದಲ್ಲಿ ಅಪ್ಪಳಿಸಿರುವ ಇಡಾ ಚಂಡಮಾರುತದ ನಂತರದ ಪರಿಸ್ಥಿತಿಯ ವಿಡಿಯೋಗಳು ಇಲ್ಲಿವೆ.
Footage taken from a backyard in Houma, Louisiana, shows raging winds and rain from Hurricane Ida. pic.twitter.com/B8F7MwJRLA
— USA TODAY (@USATODAY) August 30, 2021
SOUND OF FURY: Powerful winds and sheets of rain brought by Hurricane Ida lash a dock in Port Fourchon, Louisiana, as the extremely dangerous Category 4 storm continues to move inland.
LIVE UPDATES: https://t.co/S1Phqc9Gta pic.twitter.com/OsbrFFK2NM
— ABC News (@ABC) August 29, 2021
ಅಮೆರಿಕದ ನ್ಯೂ ಒರ್ಲಿಯನ್ಸ್ ಕರಾವಳಿ ತೀರದಲ್ಲಿ ಎದ್ದಿರುವ ಇಡಾ ಚಂಡಮಾರುತದಿಂದ ಹಲವರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಮನೆಗಳು ನಾಶವಾಗಿವೆ. ಭಾರೀ ಪ್ರವಾಹದಿಂದ ಮನೆಗಳು, ಕಂಪನಿಗಳು, ವಿದ್ಯುತ್ ಘಟಕಗಳು ನೀರಿನಿಂದ ಆವೃತವಾಗಿವೆ.
Y’all … I don’t even know what wizardry this is but it’s terrifying. #HurricaneIda
? Scott Alexander in the New Orleans CBD pic.twitter.com/Yy51B2ECn3
— Jeff Nowak (@Jeff_Nowak) August 29, 2021
Incredible flooding in Lafitte, LA. #ida pic.twitter.com/byK6cmSNqa
— Jim Cantore (@JimCantore) August 31, 2021
ನ್ಯೂ ಒರ್ಲಿಯನ್ಸ್ ಭಾಗದಲ್ಲಿ ಉಂಟಾಗಿರುವ ಇಡಾ ಚಂಡಮಾರುತದಿಂದ ಲೂಸಿಯಾನದ ರಾಜಧಾನಿ ಬ್ರಾಟನ್ ರೂಜ್ ಸುತ್ತಮುತ್ತ ಜನಜೀವನ ಅಸ್ತವ್ಯಸ್ತವಾಗಿದೆ. ಇಡಾ ಚಂಡಮಾರುತದಿಂದ ಈಗಾಗಲೇ ಮೂರೂವರೆ ಲಕ್ಷಕ್ಕೂ ಹೆಚ್ಚು ಮನೆಗಳು ಹಾಗೂ ಕಾರ್ಖಾನೆ, ಕಂಪನಿಗಳಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡಿದೆ. ಮೂರ್ನಾಲ್ಕು ದಿನಗಳಾದರೂ ಇನ್ನೂ ವಿದ್ಯುತ್ ಸಂಪರ್ಕ ಸರಿಯಾಗಿಲ್ಲ.
Our heart goes out to all those affected by #Ida. pic.twitter.com/3af2gR69wS
— The Weather Channel (@weatherchannel) August 31, 2021
ಇದನ್ನೂ ಓದಿ: Karnataka Weather Today: ಮಲೆನಾಡು, ಕರಾವಳಿಯಲ್ಲಿ ಸೆ. 2ರವರೆಗೂ ಭಾರೀ ಮಳೆ; ಕೆಲವೆಡೆ ಆರೆಂಜ್ ಅಲರ್ಟ್ ಘೋಷಣೆ
Karnataka Dams Water Level: ಮಳೆಯಿಂದ ಹಲವು ಡ್ಯಾಂಗಳ ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
(Videos capturing the impact of Ida Hurricane in Louisiana goes viral on Social Media)