AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್‌ನ ಮ್ಯು ರೂಪಾಂತರಿ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ; ಏನಿದರ ವಿಶೇಷತೆ?

ಕೊಲಂಬಿಯಾದ ನಂತರ, ಇತರ ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಮತ್ತು ಯುರೋಪಿನಲ್ಲಿ ಮ್ಯು ಪ್ರಕರಣ ವರದಿ ಮಾಡಲಾಗಿದೆ. ಇದು ಪ್ರಪಂಚದಾದ್ಯಂತ ವ್ಯಾಪಕವಾಗಿಲ್ಲದಿದ್ದರೂ, ಅದರ ಉಪಸ್ಥಿತಿಯು ಕೊಲಂಬಿಯಾದಲ್ಲಿ ಶೇಕಡಾ 39 ರಷ್ಟಿದೆ.

ಕೊವಿಡ್‌ನ ಮ್ಯು ರೂಪಾಂತರಿ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ; ಏನಿದರ ವಿಶೇಷತೆ?
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 01, 2021 | 4:43 PM

Share

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾವೈರಸ್ ನ ಹೊಸ ರೂಪಾಂತರವನ್ನು ಮ್ಯು (‘Mu’)ಎಂದು ಹೆಸರಿಸಿದೆ ಮತ್ತು ಅದನ್ನು ಅದರ ಇತ್ತೀಚಿನ ಸಾಂಕ್ರಾಮಿಕ ಬುಲೆಟಿನ್ ನಲ್ಲಿ ಕುತೂಹಲಕಾರಿ ರೂಪಾಂತರವೆಂದು ವರ್ಗೀಕರಿಸಿದೆ. ಮ್ಯು ರೂಪಾಂತರಿಯ ಸೇರ್ಪಡೆಯೊಂದಿಗೆ ಈಗ ಇಟಾ, ಐಯೋಟಾ, ಕಪ್ಪಾ, ಲ್ಯಾಂಬ್ಡಾ ಮತ್ತು ಮ್ಯು ಐದು ವಿಧದ ಕುತೂಹಲಕಾರಿ ರೂಪಾಂತರಿಗಳಾಗಿವೆ.

ಕೊವಿಡ್ ಹೊಸ ರೂಪಾಂತರಿ ಮ್ಯು ವಿಶೇಷತೆ ಏನು? 1. ಈ ರೂಪಾಂತರವನ್ನು ವೈಜ್ಞಾನಿಕವಾಗಿ B.1.621ಎಂದು ಕರೆಯಲಾಗುತ್ತದೆ. 2. ಮ್ಯು ಅನ್ನು ಜನವರಿಯಲ್ಲಿ ಕೊಲಂಬಿಯಾದಲ್ಲಿ ಮೊದಲು ಪತ್ತೆ ಮಾಡಲಾಯಿತು ಮತ್ತು ಆಗಸ್ಟ್‌ನಲ್ಲಿ ಕುತೂಹಲಕಾರಿ ರೂಪಾಂತರವೆಂದು ವರ್ಗೀಕರಿಸಲಾಯಿತು. 3. ಮ್ಯು ಲಸಿಕೆಗಳಿಗೆ ಪ್ರತಿರೋಧದ ಅಪಾಯವನ್ನು ಸೂಚಿಸುವ ರೂಪಾಂತರಗಳನ್ನು ಹೊಂದಿದೆ, ಆದರೆ ಉತ್ತಮ ತಿಳುವಳಿಕೆಗಾಗಿ ಹೆಚ್ಚಿನ ಅಧ್ಯಯನಗಳು ಬೇಕಾಗುತ್ತವೆ. 4. ರೂಪಾಂತರಿಗಳ ಗುಂಪು ಹೊಂದಿರುವುದರಿಂದ ಈ ರೂಪಾಂತರವು ರೋಗ ನಿರೋಧಕವನ್ನು ಮೀರುವ ಗುಣಗಳನ್ನು ಹೊಂದಿರಬಹುದು. 5. ಕೊಲಂಬಿಯಾದ ನಂತರ, ಇತರ ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಮತ್ತು ಯುರೋಪಿನಲ್ಲಿ ಮ್ಯು ಪ್ರಕರಣ ವರದಿ ಮಾಡಲಾಗಿದೆ. ಇದು ಪ್ರಪಂಚದಾದ್ಯಂತ ವ್ಯಾಪಕವಾಗಿಲ್ಲದಿದ್ದರೂ, ಅದರ ಉಪಸ್ಥಿತಿಯು ಕೊಲಂಬಿಯಾದಲ್ಲಿ ಶೇಕಡಾ 39 ರಷ್ಟಿದೆ.

ಡಬ್ಲ್ಯುಎಚ್‌ಒ ಈಗಾಗಲೇ ವರ್ಗೀಕರಿಸಿರುವ ಈ ರೂಪಾಂತರವನ್ನು ಹೊರತುಪಡಿಸಿ,ಇನ್ನೊಂದು ರೂಪಾಂತರ C.1.2 ಪತ್ತೆಯಾಗಿದೆ. ಇದನ್ನು ಕುತೂಹಲದ ರೂಪಾಂತರ ಅಥವಾ ಕಾಳಜಿಯ ರೂಪಾಂತರ ಎಂದು ವರ್ಗೀಕರಿಸಲಾಗಿಲ್ಲ. ಆದರೆ ಇದರ ಮೇಲೆ ನಿಗಾ ಇರಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಯಾವುದೇ ರೂಪಾಂತರಗಳು ಭಾರತದಲ್ಲಿ ಪತ್ತೆಯಾಗಿಲ್ಲ.

ರೂಪಾಂತರಗಳು ವ್ಯಾಪಕವಾಗಿಲ್ಲದಿದ್ದರೂ ಏಕೆ ಮಹತ್ವದ್ದಾಗಿವೆ?

ಈ ಹೊಸ ರೂಪಾಂತರಗಳು ಡೆಲ್ಟಾ ರೂಪಾಂತರಿಗಿಂತ ಭಿನ್ನವಾಗಿವೆ. ಆದರೆ ಹೊಸ ತಳಿಗಳ ಹೊರಹೊಮ್ಮುವಿಕೆಯ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ರೂಪಾಂತರಿಗಳು ಲಸಿಕೆಗಳನ್ನು ತಟಸ್ಥಗೊಳಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: C.1.2 ಕೊವಿಡ್ -19 ರೂಪಾಂತರ: ಭಾರತದಲ್ಲಿ ಇದುವರೆಗೆ ಯಾವುದೇ ಪ್ರಕರಣಗಳಿಲ್ಲ ಎಂದ ಕೇಂದ್ರ ಸರ್ಕಾರ, ಆದರೆ ಇದು ಎಷ್ಟು ಮಾರಕ?

ಇದನ್ನೂ ಓದಿ:  Coronavirus cases in India: ದೇಶದಲ್ಲಿ 41,965 ಹೊಸ ಕೊವಿಡ್ ಪ್ರಕರಣ ಪತ್ತೆ, 460 ಮಂದಿ ಸಾವು

(Here is all you need to know about this Coronavirus new variant Mu)

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ