AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eye Care: ವರ್ಕ್ ಫ್ರಂ ಹೋಂನಿಂದ ಹೆಚ್ಚುತ್ತಿದೆ ಕಣ್ಣಿನ ಸಮಸ್ಯೆ: ಕಣ್ಣಿನ ಕಾಳಜಿ ಮಾಡಲು ದಾರಿಗಳೇನು?

ಕಂಪ್ಯೂಟರ್ , ಲ್ಯಾಪ್ ಟಾಪ್ ಬಿಟ್ಟು ದೂರದ ವಸ್ತುಗಳನ್ನು ಕನಿಷ್ಠ 20 ನಿಮಿಷಕ್ಕೆ ಒಮ್ಮೆಯಾದರೂ ನೋಡಬೇಕು.

Eye Care: ವರ್ಕ್ ಫ್ರಂ ಹೋಂನಿಂದ ಹೆಚ್ಚುತ್ತಿದೆ ಕಣ್ಣಿನ ಸಮಸ್ಯೆ: ಕಣ್ಣಿನ ಕಾಳಜಿ ಮಾಡಲು ದಾರಿಗಳೇನು?
ಸಾಂಕೇತಿಕ ಚಿತ್ರ
TV9 Web
| Updated By: shruti hegde|

Updated on: Sep 01, 2021 | 8:48 AM

Share

ಕೊರೋನಾ ಬಂದ ಬಳಿಕ ಜನಜೀವನವೇ ಸಂಪೂರ್ಣ ಬದಲಾಗಿ ಹೋಗಿದೆ. ಈ ಹಿಂದೆ ಪ್ರತಿದಿನ ಬೆಳಗಾಗುತ್ತಿದ್ದಂತೆ ಕೆಲಸಕ್ಕೆ ಹೋಗುತ್ತಿರುವವರು ಈಗ ವರ್ಕ್ ಫ್ರಂ ಹೋಂ ಅಂತ ಮನೆಯಲ್ಲಿ ಕುಳಿತಿದ್ದಾರೆ. ಕಳೆದ ಒಂದೂವರೆ ವರ್ಷದ ವರ್ಕ್ ಫ್ರಂ ಹೋಂ ವ್ಯವಸ್ಥೆ ಈಗ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಕಣ್ಣಿನ ಸಮಸ್ಯೆ ಒಂದೇ ವರ್ಷದಲ್ಲಿ ದುಪ್ಪಟ್ಟಾಗಿದೆ ಎಂಬ ಪರಿಣಿತ ವೈದ್ಯರು ತಿಳಿಸಿದ್ದಾರೆ. ಕೊರೋನಾ ಸಂಕಷ್ಟದಿಂದ ಜನರಿಗೆ ಮುಕ್ತಿ ಸಿಗುತ್ತಲೇ ಇಲ್ಲ. ಯಾಕಂದ್ರೆ ಒಂದಾದಮೇಲೆ ಒಂದರಂತೆ ಆತಂಕ ಎದುರಾಗುತ್ತಿದೆ. ಇಷ್ಟು ದಿನ ಆನ್ ಲೈನ್ ಕ್ಲಾಸಿನಿಂದ ಮಕ್ಕಳಲ್ಲಿ ಹೆಚ್ಚು ಕಣ್ಣಿನ ಸಮಸ್ಯೆ ಎದುರಾಗಿತ್ತು. ಇತ್ತಿಚಿಗೇ ಶೇಕಡಾ 20 ಕ್ಕಿಂತ ಹೆಚ್ಚು ಮಕ್ಕಳಲ್ಲಿ ಸಮಸ್ಯೆ ಕಾಣಿಸಿಕೊಂಡ ಕುರಿತು ವರದಿಯಾಗಿತ್ತು. ಅದೇ ರೀತಿ ಮನೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಲ್ಲೂ ಸಮಸ್ಯೆ ಎದುರಾಗಿದೆ. ಬಹುತೇಕರು ಆಫೀಸ್​ಗಿಂತ ಹೆಚ್ಚು ಸಮಯ ವರ್ಕ್ ಫ್ರಂ ಹೋಂನಲ್ಲಿ ಹತ್ತಿರದಿಂದ ಮೊಬೈಲ್, ಲ್ಯಾಪ್​ಟಾಪ್​ಗಳನ್ನು. ಇದರಿಂದ ಕಣ್ಣಿನ ಸ್ನಾಯುಗಳ ಶಕ್ತಿ ಮಂದವಾಗುತ್ತಿದೆ. ಇದರಿಂದ ಕಣ್ಣಿನ ಸಮಸ್ಯೆ ಶೇಕಡಾ 35ರಷ್ಟು ಏರಿಕೆಯಾಗಿದೆ.

ಕಳೆದ ಎರಡು ಎರಡು ತಿಂಗಳಿಂದ ಈ‌ ಕಣ್ಣಿನ ಸಮಸ್ಯೆ ಜನರನ್ನು ಹೆಚ್ಚು ಕಾಡುತ್ತಿದೆ. ಹೀಗಾಗಿ ಆಸ್ಪತ್ರೆಗೆ ಬರುವವರ ಸಂಖ್ಯೆಯೂ ಹೆಚ್ಚಳವಾಗಿದೆ. ವಯಸ್ಕರಲ್ಲಿನ ಕಣ್ಣಿನ ಸಮಸ್ಯೆಗೆ ಕಣ್ಣಿಗೆ ವಿರಾಮ ಕೊಡುವುದೊಂದೇ ಪರಿಹಾರವಾಗಿದೆ. ಸ್ಕ್ರೀನ್ ಟೈಮ್ ಅವಧಿ ನಡುವೆ ಬ್ರೇಕ್ ತೆಗೆದುಕೊಳ್ಳಬೇಕು. ಕಂಪ್ಯೂಟರ್ , ಲ್ಯಾಪ್ ಟಾಪ್ ಬಿಟ್ಟು ದೂರದ ವಸ್ತುಗಳನ್ನು ಕನಿಷ್ಠ 20 ನಿಮಿಷಕ್ಕೆ ಒಮ್ಮೆಯಾದರೂ ನೋಡಬೇಕು. ಕಣ್ಣಿನ ಸಮಸ್ಯೆ ಹೆಚ್ಚಾದರೆ ನಿರ್ಲಕ್ಷ ಮಾಡದೇ ಕಣ್ಣಿನ ಆಸ್ಪತ್ರೆ ಸಂಪರ್ಕಿಸಿ ಎಂದು ಪರಿಣಿತ ನೇತ್ರ ವೈದ್ಯೆ ಪ್ರಿಯಾಂಕ ಸೋಲಂಕಿ ಸಲಹೆ ನೀಡಿದ್ದಾರೆ.

ವರ್ಕ್ ಫ್ರಂ ಹೋಂನಿಂದ ಆಗುವ ಕಣ್ಣಿನ ಸಮಸ್ಯೆಗಳು *ಕಂಪ್ಯೂಟರ್ ವಿಷನ್ ಸಿಂಡ್ರೋಮ್

*ಸಮೀಪ ದೃಷ್ಟಿ ದೋಷ *ಮೆಳ್ಳೆಗಣ್ಣು *ಕಣ್ಣಿನ ಅಲರ್ಜಿ *ಕಣ್ಣಿನ ಊರಿ *ಕೆಂಗಣ್ಣು *ತಲೆನೋವು

ಕೊರೊನಾ ಮತ್ತು ಕೊರೊನಾ ತಂದೊಡ್ಡಿದ ಸಂಕಷ್ಟ ಕಡಿಮೆಯಾಗುತ್ತಿಲ್ಲ. ಇದೀಗ ವರ್ಕ್ ಫ್ರಂ ಹೋಂ ಇನ್ನಷ್ಟು ದಿನ ಮುಂದುವರಿಸುವ ಚಿಂತನೆ ಹಲವು ಕಂಪನಿಗಳಿಗಿವೆ. ಹೀಗಾಗಿ‌ ಮತ್ತಷ್ಟು ಜನರ ಕಣ್ಣಿಗೆ ಸಮಸ್ಯೆಯಾಗಬಹುದು. ಆದಷ್ಟು ಬೇಗ ಎಚ್ಚೆತ್ತುಕೊಂಡು ನಮ್ಮ ಕಣ್ಣುಗಳ ಕಾಳಜಿ ಮಾಡುವುದೇ ಇದಕ್ಕೆ ಉಪಾಯ.

ಬರಹ: ಕಿರಣ್ ಸೂರ್ಯ ಟಿವಿ9 

ಇದನ್ನೂ ಓದಿ: 

Work From Home: 2022ರ ಡಿಸೆಂಬರ್​ವರೆಗೂ ಬೆಂಗಳೂರಿನ 800ಕ್ಕೂ ಹೆಚ್ಚು ಕಂಪನಿಗಳಲ್ಲಿ ವರ್ಕ್ ಫ್ರಂ ಹೋಂ ಮುಂದುವರೆಸಲು ಸರ್ಕಾರದಿಂದಲೇ ಸಲಹೆ

Viral Photo: ಈ ಫೋಟೋದಲ್ಲಿ ಎಷ್ಟು ಸಿಂಹಗಳಿವೆ ಎಂದು ಗುರುತಿಸಬಲ್ಲಿರಾ? ನಿಮ್ಮ ಕಣ್ಣಿಗೆ ಸವಾಲೊಡ್ಡುವ ಪ್ರಶ್ನೆಯಿದು

(Eye care tips in the time of work from home time )

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ