Work From Home: 2022ರ ಡಿಸೆಂಬರ್​ವರೆಗೂ ಬೆಂಗಳೂರಿನ 800ಕ್ಕೂ ಹೆಚ್ಚು ಕಂಪನಿಗಳಲ್ಲಿ ವರ್ಕ್ ಫ್ರಂ ಹೋಂ ಮುಂದುವರೆಸಲು ಸರ್ಕಾರದಿಂದಲೇ ಸಲಹೆ

ಈ ಪ್ರದೇಶದಲ್ಲಿನ ಕಂಪನಿಗಳು ಮತ್ತು ಅಲ್ಲಿನ ಪರಿಸರವನ್ನು ನಂಬಿ ಸುಮಾರು 20 ಸಾವಿರ ಕಾರ್ಮಿಕರು, 5 ಸಾವಿರ ಟಿಟಿ ಹಾಗೂ ಕ್ಯಾಬ್​ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

Work From Home: 2022ರ ಡಿಸೆಂಬರ್​ವರೆಗೂ ಬೆಂಗಳೂರಿನ 800ಕ್ಕೂ ಹೆಚ್ಚು ಕಂಪನಿಗಳಲ್ಲಿ ವರ್ಕ್ ಫ್ರಂ ಹೋಂ ಮುಂದುವರೆಸಲು ಸರ್ಕಾರದಿಂದಲೇ ಸಲಹೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: guruganesh bhat

Updated on: Aug 28, 2021 | 9:32 PM

ಬೆಂಗಳೂರು: ಕೊವಿಡ್ 2ನೇ ಅಲೆ ಲಾಕ್​ಡೌನ್ ಮುಗಿದ ಮೇಲೆ ಐಟಿ ಬಿಟಿ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ಬದಲು, ವರ್ಕ್ ಫ್ರಮ್ ಆಫೀಸ್ ಮಾಡಬಹುದು ಅಂತ ಸರ್ಕಾರ ಹೇಳಿತ್ತು. ಆದರೂ ಬಹುತೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್ ಸಿಸ್ಟಮ್​ನ್ನೇ ಮುಂದುವರಿಸಿದ್ದವು. ಇದಕ್ಕೆ ಕಾರಣ ಕೊವಿಡ್ ಮೂರನೇ ಅಲೆ ಭೀತಿ, ವರ್ಕ್ ಫ್ರಮ್ ಹೋಮ್​ನಿಂದ ಕಂಪನಿಗಳಿಗೆ ಖರ್ಚು ಕಡಿಮೆ ಅನ್ನುವ ಉದ್ದೇಶ. ಆದರೆ ಇದೀಗ ಸರ್ಕಾರವೇ ವರ್ಕ್ ಫ್ರಮ್ ಹೋಮ್ ಮುಂದುವರಿಸುವಂತೆ ಸಲಹೆ ನೀಡಿದೆ. ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಇ.ವಿ ರಮಣ ರೆಡ್ಡಿ ಐಟಿ ಬಿಟಿ ಕಂಪನಿಗಳ ಸಮೂಹಕ್ಕೆ ಪ್ರಕಟಣೆ ಮೂಲಕ ವರ್ಕ್ ಫ್ರಮ್ ಹೋಮ್ (Work Frome Home in Bengaluru) ಮುಂದುವರಿಸುವ ಬಗ್ಗೆ ಸಲಹೆ ನೀಡಿದ್ದಾರೆ.

ಸಿಲ್ಕ್ ಬೋರ್ಡ್​ನಿಂದ ಕೆ.ಆರ್ ಪುರಂವರೆಗಿನ ಮೆಟ್ರೋ ಕಾಮಗಾರಿ ಆರಂಭವಾಗಿದೆ. ಈ ಕಾಮಗಾರಿ ಔಟರ್ ರಿಂಗ್ ರೋಡ್ ಮೂಲಕ ಹಾದು ಹೋಗಲಿದ್ದು, ಸರ್ವಿಸ್ ರಸ್ತೆ ಹಾಗೂ 6 ಲೈನ್​ಗಳ ರಸ್ತೆ ಇದ್ದರೂ ಈ ಪ್ರದೇಶ ಮೊದಲೇ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದೆ. ಈಗ ಈ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಯೂ ನಡೆಯಲಿದ್ದು, ವಾಹನ ದಟ್ಟಣೆ ತಪ್ಪಿಸುವುದಕ್ಕಾಗಿ ಐಟಿ ಕಂಪನಿಗಳು ತಮ್ಮ ನೌಕರರಿಗೆ 2022 ರ ಡಿಸೆಂಬರ್ ವರೆಗೂ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಬೇಕಿದೆ ಎಂದು ಸಲಹೆ ನೀಡಿದೆ.

ಹೊರ ವರ್ತುಲ ರಸ್ತೆ ಅಥವಾ ಒಆರ್ ಆರ್ ನಲ್ಲಿ 800ಕ್ಕೂ ಹೆಚ್ಚು ಕಂಪನಿಗಳಿವೆ. 1.5 ಲಕ್ಷ ಐಟಿ ಉದ್ಯೋಗಿಗಳು ಈ ವ್ಯಾಪ್ತಿಯಲ್ಲಿ ಬರುವ ಕಂಪನಿಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ವಾಹನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸಲಹೆ, ಸೂಚನೆಗಳು ಸಹಕಾರಿಯಾಗಬಹುದೆಂಬ ನಿರೀಕ್ಷೆ ಇದೆ ಎಂದು ಐಟಿ-ಬಿಟಿ ವಿಭಾಗದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಇ. ವಿ ರಮಣರೆಡ್ಡಿ ತಿಳಿಸಿದ್ದಾರೆ. ಹೊರ ವರ್ತುಲ ರಸ್ತೆಯಲ್ಲಿರುವ ಐಟಿ ಪಾರ್ಕ್ ಗಳಿಗೆ ಸರ್ಕಾರ ಈ ಸಲಹೆ ನೀಡಿದ್ದು, 2022 ರ ಡಿಸೆಂಬರ್ ವರೆಗೂ ವರ್ಕ್ ಫ್ರಮ್ ಹೋಮ್ ಮುಂದುವರೆಸುವಂತೆ ಹಾಗೂ ಕಚೇರಿಗೆ ಬರಲೇಬೇಕಾದ ಸಿಬ್ಬಂದಿಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡಿಕೊಳ್ಳುವಂತೆ ಕೇಳಿದೆ. ಇದು ಒತ್ತಾಯಪೂರ್ವಕವಲ್ಲ, ಸಲಹೆಯಷ್ಟೇ ಎಂದು ಸಹ ತಿಳಿಸಲಾಗಿದೆ.

ಈ ಪ್ರದೇಶದಲ್ಲಿನ ಕಂಪನಿಗಳು ಮತ್ತು ಅಲ್ಲಿನ ಪರಿಸರವನ್ನು ನಂಬಿ ಸುಮಾರು 20 ಸಾವಿರ ಕಾರ್ಮಿಕರು, 5 ಸಾವಿರ ಟಿಟಿ ಹಾಗೂ ಕ್ಯಾಬ್​ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೊವಿಡ್ ಆರಂಭವಾಗಿ ವರ್ಕ್ ಫ್ರಮ್ ಹೋಮ್ ಶುರುವಾದಾಗಿನಿಂದ ಇವರೆಲ್ಲರಿಗೂ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬಿದಿದ್ದೆ. ಸರ್ಕಾರದಿಂದ ಇವರಿಗೆ ಯಾವುದೇ ರೀತಿಯ ಸಹಾಯವಾಗಿಲ್ಲ. ಸಾಕಷ್ಟು ಜನರು ಇರುವ ವಾಹನಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಇಂತ ಪರಿಸ್ಥಿತಿಯಲ್ಲಿ 2022 ರ ವರೆಗೂ ಐಟಿ ಬಿಟಿ ಮನೆಯಿಂದಲೇ ಕೆಲಸ ಮಾಡಿದರೆ ಹೇಗೆ? ಎಂದು ಟ್ರಾವೆಲ್ಸ್ ಮಾಲೀಕರು ಹಾಗೂ ಚಾಲಕರು ಅಳಲು ತೋಡಿಕೊಂಡಿದ್ದಾರೆ.

ವರದಿ: ಕಿರಣ್ ಸೂರ್ಯ

ಇದನ್ನೂ ಓದಿ: 

ಅಮರುಲ್ಲಾ ಸಲೇಹ್: ಅಫ್ಘಾನಿಸ್ತಾನ ಪ್ರತಿರೋಧ ಹೋರಾಟದ ಕೊನೆಯ ಆಸರೆ, ತಾಲಿಬಾನ್-ಪಾಕಿಸ್ತಾನವನ್ನು ಎಂದಿಗೂ ಒಪ್ಪದ ನಾಯಕನೀತ 

ಟಿವಿಎಸ್‌ನ ಈ ದ್ವಿಚಕ್ರ ವಾಹನವನ್ನು ಕೇವಲ 7,999 ರೂ.ಗೆ ಖರೀದಿಸಬಹುದು

(Work From Home in Bengaluru Karnataka Government advice Continue WFH in Over 800 Companies Bangalore till December 2022)

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ