AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀರಿನ ಬಾಟಲಿ ಎಸೆದು, ಸಾಯಿ ಎಂದರು’; ಎನ್‌ವಿಡಿಯಾ ಉದ್ಯೋಗಿಗಳ ಮೇಲಿನ ಜೆನ್ಸನ್ ಹುವಾಂಗ್ ಆಕ್ರೋಶ ಬಯಲು

ಕಪ್ಪು ಲೆದರ್ ಜಾಕೆಟ್, ಸರಳ ಹಿನ್ನೆಲೆಯ ಕತೆಗಳು ಮತ್ತು ಎನ್‌ವಿಡಿಯಾದ ಯಶಸ್ಸಿಗೆ ಉದ್ಯೋಗಿಗಳೇ ಕಾರಣ ಎಂಬ ವಿನಮ್ರ ಮಾತುಗಳಿಂದ ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದ ಎನ್‌ವಿಡಿಯಾ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಅವರ ಮುಖವಾಡದ ಹಿಂದಿನ ಮತ್ತೊಂದು ಕರಾಳ ಮುಖ ಇದೀಗ ಬಯಲಾಗಿದೆ. ಸಭೆಗಳ ಕೊಠಡಿಯಲ್ಲಿ ಹಿರಿಯ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಅವಮಾನಿಸುವುದು, ವಸ್ತುಗಳನ್ನು ಎಸೆಯುವುದು ಮತ್ತು ಭಿನ್ನಾಭಿಪ್ರಾಯಗಳಿಗೆ ತೀವ್ರವಾಗಿ ಸಿಡಿಯುವ ಅವರ ಆಕ್ರಮಣಕಾರಿ ನಾಯಕತ್ವದ ಶೈಲಿಯ ಕುರಿತು ಆಘಾತಕಾರಿ ವರದಿಗಳು ಹೊರಬಿದ್ದಿವೆ. ವಿವಾಹೇತರ ಸಂಬಂಧಗಳ ಬಹಿರಂಗಪಡಿಸುವಿಕೆಯ ಬೆನ್ನಲ್ಲೇ ಕಳೆದ ವಾರ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿರುವ 63 ವರ್ಷದ ಹುವಾಂಗ್ ಅವರ ಸಿಟ್ಟಿನ ಸ್ವಭಾವದಿಂದಾಗಿ, ಕಂಪನಿಯ ಸಭೆಗಳಲ್ಲಿ ಸಾರ್ವಜನಿಕವಾಗಿ ನಿಂದನೆಗೆ ಒಳಗಾಗುವ ಭಯದಲ್ಲಿಯೇ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

‘ನೀರಿನ ಬಾಟಲಿ ಎಸೆದು, ಸಾಯಿ ಎಂದರು’; ಎನ್‌ವಿಡಿಯಾ ಉದ್ಯೋಗಿಗಳ ಮೇಲಿನ ಜೆನ್ಸನ್ ಹುವಾಂಗ್ ಆಕ್ರೋಶ ಬಯಲು
Jensen Huang
ಸುಷ್ಮಾ ಚಕ್ರೆ
|

Updated on: Nov 15, 2026 | 4:15 PM

Share

ಸ್ಯಾನ್ ಫ್ರಾನ್ಸಿಸ್ಕೋ, ನವೆಂಬರ್ 15: ಚೀನಾದ ಗೂಢಚಾರಣಿ ಮತ್ತು ತಮ್ಮದೇ ಕಂಪನಿಯ ಇಬ್ಬರು ಉದ್ಯೋಗಿಗಳೊಂದಿಗಿನ ವಿವಾಹೇತರ ಸಂಬಂಧಗಳ ವಿವಾದದ ಹಿನ್ನೆಲೆಯಲ್ಲಿ ಇತ್ತೀಚೆಗೆ ಎನ್‌ವಿಡಿಯಾ ಸಿಇಒ ಸ್ಥಾನದಿಂದ ಕೆಳಗಿಳಿದಿರುವ ಜೆನ್ಸನ್ ಹುವಾಂಗ್ ಕುರಿತು ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕಚೇರಿಯಲ್ಲಿ ಜೆನ್ಸನ್ ಹುವಾಂಗ್ ಪದೇಪದೆ ತೀವ್ರ ಆಕ್ರೋಶ ಹೊರಹಾಕುತ್ತಿದ್ದರು. ಉದ್ಯೋಗಿಗಳನ್ನು ಸಾರ್ವಜನಿಕವಾಗಿ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುವುದಲ್ಲದೆ, ಭಾರತೀಯ ಮೂಲದ ಹಿರಿಯ ಅಧಿಕಾರಿಯ ಮೇಲೆ ನೀರಿನ ಬಾಟಲಿಯನ್ನೂ ಎಸೆದಿದ್ದರು ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.

63 ವರ್ಷದ ಈ ಎಐ ದಿಗ್ಗಜ ಕಪ್ಪು ಲೆದರ್ ಜಾಕೆಟ್ ಧರಿಸಿ, ಹೋಟೆಲ್‌ನಲ್ಲಿ ಪಾತ್ರೆ ತೊಳೆಯುತ್ತಿದ್ದ ತಮ್ಮ ಸರಳ ಹಿನ್ನೆಲೆಯ ಬಗ್ಗೆ ಟಿವಿ ಸಂದರ್ಶನಗಳಲ್ಲಿ ಮಾತನಾಡುತ್ತಾ ಸರಳ ಸಾರ್ವಜನಿಕ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು. ಆದರೆ, ಎನ್‌ವಿಡಿಯಾ ವ್ಯವಹಾರವನ್ನು ವಿಸ್ತರಿಸುವ ಭರದಲ್ಲಿ ಸುದೀರ್ಘ ಸಭೆಗಳಲ್ಲಿ ಸಹೋದ್ಯೋಗಿಗಳ ಮುಂದೆಯೇ ತಾವು ಕ್ರೂರವಾಗಿ ನಿಂದನೆಗೆ ಒಳಗಾಗಬಹುದು ಎಂಬ ಭಯದಲ್ಲೇ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಎಂದು ಕಂಪನಿಯ ಆಂತರಿಕ ಮೂಲಗಳು ತಿಳಿಸಿವೆ.

ಭಾರತೀಯ ಮೂಲದ ಉಪಾಧ್ಯಕ್ಷರಿಗೆ “ನೀನು ಸಾಯಿ” ಎಂದಿದ್ದ ಹುವಾಂಗ್:

ಕಳೆದ ಫೆಬ್ರವರಿಯಲ್ಲಿ ನಡೆದ ರಹಸ್ಯ ಸಭೆಯೊಂದರಲ್ಲಿ ೩೦ಕ್ಕೂ ಹೆಚ್ಚು ಹಿರಿಯ ಕಾರ್ಯನಿರ್ವಾಹಕರ ಎದುರೇ ಎನ್‌ವಿಡಿಯಾದ ಅಂದಿನ ವಿಶ್ವವ್ಯಾಪಿ ಕ್ಷೇತ್ರ ಕಾರ್ಯಾಚರಣೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜೇ ಪುರಿ ಅವರ ಮೇಲೆ ಹುವಾಂಗ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು ಎನ್ನಲಾಗಿದೆ. ದಂಗಾಗಿ ಕುಳಿತಿದ್ದ ಅಧಿಕಾರಿಗಳ ಮುಂದೆಯೇ ಪುರಿ ಅವರನ್ನು ಉದ್ದೇಶಿಸಿ ಮಾತನಾಡಿದ ಜೆನ್ಸನ್ ಹುವಾಂಗ್, “ನಿನಗೆ ಜ್ವರ ಬರಲಿ ಎಂದು ನಾನು ಆಶಿಸುತ್ತೇನೆ. ಜ್ವರ ಬಂದು ನೀನು ಸಾಯುತ್ತೀಯ, ನಮ್ಮೆಲ್ಲರನ್ನೂ ಈ ಸಂಕಟದಿಂದ ಪಾರು ಮಾಡುತ್ತೀಯ ಎಂದು ನಾನು ಆಶಿಸುತ್ತೇನೆ” ಎಂದು ನೀರಿನ ಬಾಟಲ್ ಎಸೆದು ಹುವಾಂಗ್ ಕೂಗಾಡಿದ್ದರು. ಅಂದು ಪುರಿ ತಮ್ಮ ಸಹೋದ್ಯೋಗಿಗಳ ಮುಂದಾದ ಅವಮಾನವನ್ನು ಮೌನವಾಗಿ ಸಹಿಸಿಕೊಂಡಿದ್ದರು. ನಂತರ ಅವರನ್ನು ಎನ್‌ವಿಡಿಯಾದ ಹಿರಿಯ ಸಲಹೆಗಾರರ ಹುದ್ದೆಗೆ ಬದಲಾಯಿಸಲಾಯಿತು.

ಇದನ್ನೂ ಓದಿ: ಚೀನಾದ ಗೂಢಚಾರಿಣಿ ಸೇರಿ ಇಬ್ಬರ ಜತೆ ವಿವಾಹೇತರ ಸಂಬಂಧದ ಆರೋಪ, ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್‌ ಕುರ್ಚಿಗೆ ಕಂಟಕ

ಹುವಾಂಗ್ ಅವರ ಇಂತಹ ಕೋಪದ ವರ್ತನೆಗಳು ಎನ್‌ವಿಡಿಯಾದಲ್ಲಿ ಎಷ್ಟರಮಟ್ಟಿಗೆ ಸಾಮಾನ್ಯವಾಗಿದ್ದವೆಂದರೆ, ಅವರ ಸಾರ್ವಜನಿಕ ಪತನಕ್ಕೂ ಮುನ್ನವೇ ಈ ವಿಚಾರಗಳು ಏಕೆ ಸೋರಿಕೆಯಾಗಲಿಲ್ಲ ಎಂದು ಕೆಲವು ಉದ್ಯೋಗಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. 2025ರಲ್ಲಿ 40 ಸಿಬ್ಬಂದಿಗಳ ಜೊತೆ ನಡೆದ 3 ಗಂಟೆಗಳ ಸಭೆಯಲ್ಲಿ ಹಿರಿಯ ಮಾರಾಟ ನಾಯಕರೊಬ್ಬರ ಮೇಲೆ ಸಿಡಿದಿದ್ದ ಹುವಾಂಗ್, ಅಸಭ್ಯ ಪದಗಳನ್ನು ಬಳಸಿ ನಿಂದಿಸಿದ್ದರು.

ಕ್ಯಾಲಿಫೋರ್ನಿಯಾದ ಎನ್‌ವಿಡಿಯಾ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಹುವಾಂಗ್ ಉನ್ನತ ಅಧಿಕಾರಿಯೊಬ್ಬರ ಮೇಲೆ ನೀರಿನ ಬಾಟಲಿಯನ್ನು ಎಸೆದಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ, ಮೊದಲ ಬಾರಿಗೆ ತಮ್ಮೊಂದಿಗೆ ಸಭೆಗೆ ಹಾಜರಾಗಿದ್ದ ಹಿರಿಯ ನಾಯಕರೊಬ್ಬರ ಮೇಲೆ ಕೋಪಗೊಂಡು, “ನೀನು ನನ್ನನ್ನು ನೋಡಿ ವ್ಯಂಗ್ಯವಾಗಿ ನಗುತ್ತಿದ್ದೀಯಾ? ನನಗೆ ಇಲ್ಲಿ ಸತ್ತ ಮುಖಗಳೇ ಕಾಣುತ್ತಿವೆ… ಹೊರಗೆ ಹೋಗು!” ಎಂದು ಕಿರುಚಿದ್ದರು ಎನ್ನಲಾಗಿದೆ.

ವಿವಾಹೇತರ ಸಂಬಂಧಗಳ ತನಿಖೆ ಮತ್ತು ರಾಜೀನಾಮೆ:

ತಮ್ಮ ಪತ್ನಿಗೆ ದ್ರೋಹ ಬಗೆದಿರುವುದಾಗಿ ಒಪ್ಪಿಕೊಂಡ ಬೆನ್ನಲ್ಲೇ ವಿವಾಹೇತರ ಸಂಬಂಧಗಳ ವರದಿಗಳ ನಡುವೆ ಹುವಾಂಗ್ ಎನ್‌ವಿಡಿಯಾ ಸಿಇಒ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕಂಪನಿಯ ಆಡಳಿತ ಮಂಡಳಿಯು ಕಾಯಂ ಉತ್ತರಾಧಿಕಾರಿಯ ಹುಡುಕಾಟ ನಡೆಸುತ್ತಿರುವ ಬೆನ್ನಲ್ಲೇ, ಮುಖ್ಯ ಹಣಕಾಸು ಅಧಿಕಾರಿ (CFO) ಕೊಲೆಟ್ ಕ್ರೆಸ್ ಮಧ್ಯಂತರ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರೇಮ ಪ್ರಕರಣದ ವಿವಾದ: ಜೆನ್ಸನ್ ಹುವಾಂಗ್ ಮಾತ್ರವಲ್ಲ,ಈ 4 ಕಂಪನಿಗಳ ಸಿಇಒಗಳೂ ಹುದ್ದೆ ಕಳೆದುಕೊಂಡಿದ್ದರು

ಹುವಾಂಗ್ ಅವರ ಜೀವನಚರಿತ್ರೆ ‘ದಿ ಥಿಂಕಿಂಗ್ ಮೆಷಿನ್’ ಕೃತಿಯ ಲೇಖಕ ಸ್ಟೀಫನ್ ವಿಟ್ ಅವರ ಪ್ರಕಾರ, ಎನ್‌ವಿಡಿಯಾ ಸಹ-ಸಂಸ್ಥಾಪಕ ತಮ್ಮನ್ನು ತಾವು ಒಬ್ಬ ಆದರ್ಶ ಕುಟುಂಬಸ್ಥನಂತೆ ಬಿಂಬಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ, ವಾಸ್ತವದಲ್ಲಿ ಅವರು ಸಾಕಷ್ಟು ಅಹಂಕಾರಿ ಆಗಿದ್ದರು ಮತ್ತು ಸಣ್ಣ ವಿರೋಧಕ್ಕೂ ತೀವ್ರವಾಗಿ ಸಿಡಿಯುವ ಸ್ವಭಾವ ಹೊಂದಿದ್ದರು.

ಅಮೆರಿಕದ ಅಧಿಕಾರಿಗಳಿಂದ ಚೀನಾದ ಗುಪ್ತಚರ ಇಲಾಖೆಯೊಂದಿಗೆ ನಂಟು ಹೊಂದಿರುವ ಶಂಕೆಗೆ ಒಳಗಾಗಿರುವ ಚೀನಾದ ಉದ್ಯಮಿ ಆಲಿಸ್ ಹುವಾಂಗ್ ಅವರೊಂದಿಗೆ ಹಾಗೂ ಎನ್‌ವಿಡಿಯಾದ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷೆ ಕಿಂಬರ್ಲಿ ಪೊವೆಲ್ ಸೇರಿದಂತೆ ಕನಿಷ್ಠ ಇಬ್ಬರು ಉದ್ಯೋಗಿಗಳೊಂದಿಗೆ ಹುವಾಂಗ್ ಸಂಬಂಧ ಹೊಂದಿದ್ದರು ಎಂಬ ವರದಿಗಳು ಸಂಚಲನ ಮೂಡಿಸಿದ್ದವು. ತಮ್ಮ ಪತ್ನಿಗೆ ದ್ರೋಹ ಬಗೆದಿದ್ದಕ್ಕಾಗಿ ಮತ್ತು ಕಂಪನಿಗೆ ನಿರಾಸೆ ಮೂಡಿಸಿದ್ದಕ್ಕಾಗಿ ಹುವಾಂಗ್ ಈ ಹಿಂದೆ ಕ್ಷಮೆಯಾಚಿಸಿದ್ದರು. ಪ್ರಸ್ತುತ ಎನ್‌ವಿಡಿಯಾ ಆಡಳಿತ ಮಂಡಳಿಯು ಕಾಯಂ ಸಿಇಒ ಹುಡುಕಾಟದಲ್ಲಿದ್ದು, ಈ ಹೊಸ ಆರೋಪಗಳ ಕುರಿತು ಪ್ರತಿಕ್ರಿಯಿಸಲು ಹುವಾಂಗ್ ವಕ್ತಾರರು ನಿರಾಕರಿಸಿದ್ದಾರೆ.

ಜೆನ್ಸನ್ ಹುವಾಂಗ್ ತಮ್ಮ ಪತ್ನಿ ಲೋರಿ ಹುವಾಂಗ್ ಅವರನ್ನು ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳಾಗಿದ್ದಾಗ ಭೇಟಿಯಾಗಿದ್ದು, 40ಕ್ಕೂ ಹೆಚ್ಚು ವರ್ಷಗಳ ದಾಂಪತ್ಯ ಜೀವನ ನಡೆಸಿದ್ದಾರೆ. ದಂಪತಿಗೆ 30 ವರ್ಷದ ಇಬ್ಬರು ಮಕ್ಕಳಿದ್ದು, ಇಬ್ಬರೂ ಎನ್‌ವಿಡಿಯಾ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ