ಇಸ್ರೇಲ್(Israel) ಮತ್ತು ಹಮಾಸ್(Hamas) ನಡುವೆ ನಡೆಯುತ್ತಿರುವ ಯುದ್ಧ 34ನೇ ದಿನಕ್ಕೆ ಕಾಲಿಟ್ಟಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಳಿಕ ಸಂಘರ್ಷ ಮುಂದುವರೆದಿದೆ. ಗಾಜಾ(Gaza)) ಪಟ್ಟಿಯಲ್ಲಿ ಇಸ್ರೇಲ್ ವಾಯು ಮತ್ತು ನೆಲದ ದಾಳಿಯನ್ನು ಮುಂದುವರೆಸಿದೆ ಮತ್ತು ಭಯೋತ್ಪಾದಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ.
ಏತನ್ಮಧ್ಯೆ ಇಸ್ರೇಲ್ ರಕ್ಷಣಾ ಪಡೆಗಳು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿವೆ. ಈ ವಿಡಿಯೋದಲ್ಲಿ ಸುರಂಗವೊಂದು ಕಂಡುಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಇಸ್ರೇಲಿ ಸೇನೆ ಈ ಸುರಂಗಗಳಲ್ಲಿ ಹಮಾಸ್ ಉಗ್ರರು ಅಡಗಿಕೊಂಡಿದ್ದಾರೆ ಎಂದು ಹೇಳಿಕೊಂಡಿದೆ.
ಸುರಂಗಗಳಲ್ಲಿ ನೀರು ಹಾಗೂ ಆಮ್ಲಜನಕದ ನಿಕ್ಷೇಪಗಳಿವೆ, ಅದನ್ನು ನೋಡಿದರೆ ದೀರ್ಘಕಾಲ ಉಗ್ರರು ಇಲ್ಲಿಯೇ ಉಳಿದುಕೊಳ್ಳಲು ಯೋಜನೆ ರೂಪಿಸಿದಂತೆ ಕಾಣುತ್ತದೆ ಎಂದಿದ್ದಾರೆ.
ಮತ್ತಷ್ಟು ಓದಿ: ಹಮಾಸ್ ಉಗ್ರರಿಗೆ ಜಯ ಸಿಗಲಿ ಎಂದ ಮಂಗಳೂರಿನ ಝಾಕಿರ್; ವಿಡಿಯೋ ವೈರಲ್
ಯುದ್ಧದ ಆರಂಭದಿಂದಲೂ 130 ಸುರಂಗಗಳು ನಾಶವಾಗಿವೆ, ಈ ಹಿಂದೆ ಇಸ್ರೇಲ್ ರಕ್ಷಣಾ ಪಡೆಗಳು ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಮತ್ತು ಹಮಾಸ್ ಉಗ್ರರು ಶಾಲೆಗಳು, ಮಸೀದಿಗಳನ್ನು ರಾಕೆಟ್ ಉಡಾವಣಾ ಕೇಂದ್ರಗಳಾಗಿ ಬಳಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಇಸ್ರೇಲಿ ಸೇನೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸೈನಿಕರೊಬ್ಬರು ಶಾಲಾ ಕಟ್ಟಡವನ್ನು ತೋರಿಸುತ್ತಿರುವುದನ್ನು ನೋಡಬಹುದು. ಗೋಡೆಗಳ ಮೇಲೆ ಮಕ್ಕಳ ಚಿತ್ರಗಳಿವೆ.
IDF combat engineers are currently working to expose and destroy Hamas terrorist infrastructure in Gaza, including tunnels. Water and oxygen storage discovered inside the tunnels indicates Hamas’ preparations for prolonged stays underground.
130 tunnel entrances have been… pic.twitter.com/McuxQHc1b2
— Israel Defense Forces (@IDF) November 9, 2023
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದರು, ಅದಾದ ಬಳಿಕ ಇಸ್ರೇಲ್ ಪ್ರತಿಯಾಗಿ ಗಾಜಾ ಮೇಲೆ ದಾಳಿ ನಡೆಸಿತ್ತು. 10 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ನಾವು ಯುದ್ಧ ಪ್ರಾರಂಭಿಸಿಲ್ಲ ಆದರೆ ನಾವೇ ಅಂತ್ಯಗೊಳಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ