AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ತನ್ನ ನರ್ಸ್​​ ಪತ್ನಿಯನ್ನು 17 ಬಾರಿ ಚುಚ್ಚಿ ಚುಚ್ಚಿ ಸಾಯಿಸಿ, ಆಕೆಯ ಮೇಲೆ ಕಾರು ಓಡಿಸಿದ್ದ ಕೇರಳದ ವ್ಯಕ್ತಿಗೆ ಶಿಕ್ಷೆಯಾಯಿತು!

Indian, Husband, Stabbing, Wife, Car, Parking, Jail, Life Imprisonment

ಅಮೆರಿಕದಲ್ಲಿ ತನ್ನ ನರ್ಸ್​​ ಪತ್ನಿಯನ್ನು 17 ಬಾರಿ ಚುಚ್ಚಿ ಚುಚ್ಚಿ ಸಾಯಿಸಿ, ಆಕೆಯ ಮೇಲೆ ಕಾರು ಓಡಿಸಿದ್ದ ಕೇರಳದ ವ್ಯಕ್ತಿಗೆ ಶಿಕ್ಷೆಯಾಯಿತು!
ನರ್ಸ್​​ ಪತ್ನಿಯನ್ನು 17 ಬಾರಿ ಚುಚ್ಚಿ ಚುಚ್ಚಿ ಸಾಯಿಸಿದ್ದ ಕೇರಳ ವ್ಯಕ್ತಿಗೆ ಶಿಕ್ಷೆಯಾಯಿತು!
ಸಾಧು ಶ್ರೀನಾಥ್​
|

Updated on: Nov 09, 2023 | 10:31 AM

Share

ಹೂಸ್ಟನ್: ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ (US state of Florida) 2020ರಲ್ಲಿ ನರ್ಸ್ ಆಗಿ (nurse) ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಪತ್ನಿಯನ್ನು (wife) ಭೀಕರವಾಗಿ ಹತ್ಯೆ ಮಾಡಿದ ಭಾರತೀಯ ವ್ಯಕ್ತಿಗೆ ಜೀವಾವಧಿ ಶಿಕ್ಷೆ (life imprisonment) ವಿಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದಂಪತಿಯ ಮಧ್ಯೆ ಸಂಬಂಧ ಹಳಿಸಿದ್ದರಿಂದ ಅದರಿಂದ ಪಾರಾಗಲು ಪತ್ನಿ ಮೆರಿನ್ ಜಾಯ್ ಯೋಜಿಸಿದ್ದಳು. ಅದರಿಂದ ರೊಚ್ಚಿಗೆದ್ದು ಸಾಯಿಸಿದೆ. ಅದು ಮೊದಲ ಹಂತದ ಕೊಲೆ ಎಂಬುದನ್ನು ಒಪ್ಪುವೆ ಎಂದು ಪತಿ ಫಿಲಿಪ್ ಮ್ಯಾಥ್ಯೂ ಸ್ವತಃ ಒಪ್ಪಿಕೊಂಡಿದ್ದಾರೆ. ಅದರಿಂದ ಶಿಕ್ಷೆಯನ್ನು ತಗ್ಗಿಸುವ ಮನವಿ ಒಪ್ಪಂದಕ್ಕೆ ಅಂಕಿತವಾಗಿದ್ದು, ಅವರನ್ನು ಮರಣದಂಡನೆ ಶಿಕ್ಷೆ (death sentence) ಸಾಧ್ಯತೆಯಿಂದ ಪಾರು ಮಾಡಿದೆ ಎಂದು ವರದಿಗಳು ತಿಳಿಸಿವೆ.

2020 ರಲ್ಲಿ, ಬ್ರೋವರ್ಡ್ ಹೆಲ್ತ್ ಕೋರಲ್ ಸ್ಪ್ರಿಂಗ್ಸ್‌ನಲ್ಲಿ ನರ್ಸ್ ಆಗಿದ್ದ 26 ವರ್ಷದ ಜಾಯ್ ಅವರನ್ನು 17 ಬಾರಿ ಇರಿಯಲಾಗಿತ್ತು (stabbed). ಸಾಲದು ಅಂತಾ ಮ್ಯಾಥ್ಯೂ ತನ್ನ ಕಾರನ್ನು ಅಡ್ಡಗಟ್ಟಿ, ಪತ್ನಿಯ ದೇಹದ ಮೇಲೆ ಚಾಲನೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಸಹೋದ್ಯೋಗಿಯೊಬ್ಬರು ನಂತರ ಹೇಳಿದಂತೆ ಮ್ಯಾಥ್ಯೂ ಪಾರ್ಕಿಂಗ್​ ಲಾಟ್​​ನಲ್ಲಿ ತನ್ನ ಪತ್ನಿಯನ್ನು ಸ್ಪೀಡ್ ಬಂಪ್ ರೂಪದಲ್ಲಿ ಕಂಡು ಅವಳ ಮೇಲೆ ಕಾರನ್ನು ಮತ್ತೆ ಮತ್ತೆ ಓಡಿಸಿದ್ದ ಎಂದು ಹೇಳಿದ್ದಾರೆ. ಉದ್ಯೋಗಿಗಳು ಅವಳ ಸಹಾಯಕ್ಕೆ ಧಾವಿಸಿದಾಗ, ಜಾಯ್ ಅಳುತ್ತಾ ಇದ್ದಳು… ನನಗೆ ಮಗು ಇದೆ ಬೇಡಿಕೊಳ್ಳುತ್ತಿದ್ದಳು. ಸಾಯುವ ಮುನ್ನ ಜಾಯ್​​ ತನ್ನ ಮೇಲೆ ದಾಳಿ ನಡೆಸಿದವರ ಗುರುತನ್ನು ಬಹಿರಂಗಪಡಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ತಾನು ತನ್ನ ಪತ್ನಿಯನ್ನು ಮಾರಣಾಂತಿಕ ಆಯುಧದಿಂದ ಹಲ್ಲೆ ಮಾಡಿ ಸಾಯಿಸಿದ್ದೆ ಎಂದು ತನ್ನ ತಪ್ಪನ್ನು ತನ್ನ ಅಪರಾಧವನ್ನು ಮ್ಯಾಥ್ಯೂ ಸ್ವತಃ ಒಪ್ಪಿಕೊಂಡಿದ್ದ. ಹಾಗಾಗಿ ಬಿಡುಗಡೆಯ ಯಾವುದೇ ಸಾಧ್ಯತೆಯಿಲ್ಲದೆ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು, ಜೊತೆಗೆ ಮಾರಣಾಂತಿಕ ಆಯುಧದಿಂದ ಆಕ್ರಮಣ ನಡೆಸಿದ್ದಕ್ಕಾಗಿ ಗರಿಷ್ಠ ಐದು ವರ್ಷಗಳ ಶಿಕ್ಷೆಯೂ ವಿಧಿಸಲಾಗಿದೆ ಎಂದು ಪೊಲೀಸ್​​ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Also read: ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ವಿಳಂಬ: 3 ಕೊಲೆ ಮಾಡಿದ್ದ ಕಲಬುರಗಿಯ ಪಾತಕಿ ನೇಣು ಕುಣಿಕೆಯಿಂದ ಬಚಾವ್

ಈ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಯ ಖಚಿತವಾಗುವ ಸಾಧ್ಯತೆಯಿದ್ದುದ್ದರಿಂದ ಪ್ರತಿವಾದಿಯು ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಬಿಟ್ಟುಕೊಟ್ಟರು. ಹಾಗಾಗಿ ಮರಣದಂಡನೆಯನ್ನು ಮಾಫಿ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ವಕೀಲರ ಕಚೇರಿಯ ವಕ್ತಾರೆ ಪೌಲಾ ಮೆಕ್ ಮಹೊನ್ ಸ್ಪಷ್ಟಪಡಿಸಿದ್ದಾರೆ.

ಮಗಳು ಜಾಯ್ ಸಾವಿನಿಂದ ಅವರ ಕುಟುಂಬವು ಭಾವನಾತ್ಮಕವಾಗಿ ಛಿದ್ರಗೊಂಡಿದೆ. ಜಾಯ್ ಅವರ ಕುಟುಂಬದ ಸೋದರ ಸಂಬಂಧಿ, ಟ್ಯಾಂಪಾದಲ್ಲಿ ವಾಸಿಸುವ ಜೋಬಿ ಫಿಲಿಪ್ ಅವರು Zoom ನಲ್ಲಿ ವರ್ಚುಯಲ್ ವಿಚಾರಣೆಯನ್ನು ವೀಕ್ಷಿಸಿದರು. ನಂತರ ತೀರ್ಪನ್ನು ಅವರ ಕುಟುಂಬದ ಇತರರಿಗೆ ಅನುವಾದಿಸಿ, ತಿಳಿಸಿದರು.

ಜಾಯ್ ಅವರ ತಾಯಿ “ತನ್ನ ಮಗಳನ್ನು ಕೊಂದ ವ್ಯಕ್ತಿಯು ಜೀವಿತಾವಧಿ ಜೈಲಿನಲ್ಲಿ ಉಳಿಯುತ್ತಾನೆ ಎಂದು ತಿಳಿದು ಸಂತೋಷವಾಗಿದೆ, ಇದರೊಂದಿಗೆ ಕಾನೂನು ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದು ತಿಳಿದು ನಿರಾಳಗೊಂಡಿರುವೆ ಎಂದು ಹೇಳಿದ್ದಾರೆ.

ನಿಮ್ಮ ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು