Adultery: ಅತ್ತೆ ಜೊತೆ 22 ವರ್ಷಗಳಿಂದ ಸುದೀರ್ಘವಾದ ಅಕ್ರಮ ಸಂಬಂಧ, ಅವರಿಬ್ಬರೂ ಪಲ್ಲಂಗದಾಟದಲ್ಲಿ ತೊಡಗಿದ್ದಾಗ ಪತ್ನಿಗೆ ಸಿಕ್ಕಿಬಿದ್ದ! ಈಗೇನಾಯ್ತು?

|

Updated on: May 27, 2023 | 12:35 PM

Illicit Relation: ಇಬ್ಬರೂ ನನಗೆ ಕೆಟ್ಟದಾಗಿ, ಅಸಹ್ಯಕರವಾಗಿ ಮೋಸ ಮಾಡಿದ್ದಾರೆ. ಅದಲ್ಲದೆ, ಅಮ್ಮ-ಗಂಡನ ಅಕ್ರಮ ಸಂಬಂಧದ ಫಲವಾಗಿ ಮಕ್ಕಳೂ ಜನಿಸಿವೆ. ಈ ವಿಚಾರವೂ ಸಂತ್ರಸ್ತ ಮಹಿಳೆಗೆ ಈಗ ಗೊತ್ತಾಗಿದೆ!

Adultery: ಅತ್ತೆ ಜೊತೆ 22 ವರ್ಷಗಳಿಂದ ಸುದೀರ್ಘವಾದ ಅಕ್ರಮ ಸಂಬಂಧ, ಅವರಿಬ್ಬರೂ ಪಲ್ಲಂಗದಾಟದಲ್ಲಿ ತೊಡಗಿದ್ದಾಗ ಪತ್ನಿಗೆ ಸಿಕ್ಕಿಬಿದ್ದ! ಈಗೇನಾಯ್ತು?
ಅತ್ತೆ ಜೊತೆ 22 ವರ್ಷಗಳಿಂದ ಸುದೀರ್ಘವಾದ ಅಕ್ರಮ ಸಂಬಂಧ!
Follow us on

ವಿವಾಹೇತರ ಸಂಬಂಧಗಳು (Adultery) ಎಂದಿಗೂ ಟ್ರಾಜಿಡಿಯೇ. ಅಕ್ರಮ ಸಂಬಂಧಗಳು (Illicit Relation) ಕುಟುಂಬಗಳನ್ನು ನಾಶ ಮಾಡುತ್ತವೆ. ಕೆಲವು ಸಂದರ್ಭಗಳಲ್ಲಿ ಅವರು ಜೀವವನ್ನೇ ಕಳೆದುಕೊಳ್ಳುತ್ತಾರೆ. ಈ ಅಕ್ರಮ ಸಂಬಂಧಗಳಿಂದಾಗಿ ಅನೇಕ ಮಕ್ಕಳು ಅನಾಥರಾಗುತ್ತಿರುವ ದಾಖಲೆಗಳಿವೆ. ಇಬ್ಬರ ಸಂಸಾರದಲ್ಲಿ ಮೂರನೇ ವ್ಯಕ್ತಿ ತೂರಿದಾಗ ಮಾನವ ಸಂಬಂಧಗಳು ಕುಸಿದು ಬೀಳುತ್ತವೆ. ಇಂತಹ ಘಟನೆಗಳು ಪ್ರಪಂಚದಾದ್ಯಂತ ಸಾಮಾನ್ಯವಾಗಿದೆ.

ಇತ್ತೀಚೆಗೆ, ಅಂತಹ ಆಘಾತಕಾರಿ ಸಂಬಂಧದ ಸುದ್ದಿಯೊಂದು ಮಹತ್ವ ಪಡೆದುಕೊಂಡಿದೆ. ಒಬ್ಬ ವ್ಯಕ್ತಿ ತನ್ನ ವಿವಾಹಿತ ಹೆಂಡತಿಯ ತಾಯಿಯೊಂದಿಗೆ ಸಂಬಂಧವನ್ನು ಹೊಂದಿದ್ದಾನೆ. ಅದೇನೆಂದರೆ.. ಅವನು ತನ್ನ ಹೆಂಡತಿಯ ಚಿಕ್ಕಮ್ಮನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ. ಒಂದಲ್ಲ.. ಎರಡಲ್ಲ.. 22 ವರ್ಷಗಳಿಂದ ಅವರಿಬ್ಬರ ಮಧ್ಯೆ ಸುದೀರ್ಘವಾದ ಅಕ್ರಮ ಸಂಬಂಧ ನಡೆದಿದೆ.

ಆದರೆ, ತಾಜಾ ವಿಷಯ ಏನೆಂದರೆ… ಅದೆಲ್ಲಾ ಪತ್ನಿಗೆ ಕೊನೆಗೂ ತಿಳಿಯಿತು. ಅದೂ ಅವರಿಬ್ಬರೂ ಪಲ್ಲಂಗದಾಟದಲ್ಲಿ ತೊಡಗಿದ್ದಾಗ! ಆ ನಂತರ, ಪರಿಸ್ಥಿತಿ ಸಾಮಾನ್ಯವಾಗಿರಲಿಲ್ಲ. ಆ ವಿಷಯವನ್ನು ಸಂತ್ರಸ್ತೆ ಸ್ವತಃ ಇಂದಿನ ಕ್ರಾಂತಿಕಾರಿ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ವಿಷಯ ಬಹಿರಂಗಪಡಿಸಿದಾಗ ಅದು ಬೆಳಕಿಗೆ ಬಂದಿದೆ. ವಿವರಗಳು ಈ ಕೆಳಗಿನಂತಿವೆ ಓದಿಕೊಳ್ಳೀ.

ಬ್ರಿಟನ್ ನ ಮಹಿಳೆಯೊಬ್ಬರು.. ‘ನನ್ನ ಪತಿ ಹಾಗೂ ನನ್ನ ತಾಯಿ 22 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಷಯ ಬಹಳ ದಿನಗಳಿಂದ ಬಹಿರಂಗವಾಗದೆ ಗುಟ್ಟಾಗಿ ಉಳಿದಿದೆ’ ಎಂದು ಮ್ಲಾನವದನರಾಗಿ ಹೇಳಿಕೊಂಡಿದ್ದಾರೆ. 40 ವರ್ಷದ ಬಾಧಿತ ಮಹಿಳೆ ತಮ್ಮ ದುಃಖವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ.

‘ನಾನು ತುಂಬಾ ಮೋಸ ಹೋಗಿದ್ದೇನೆ. ಇದು ನನ್ನ ಜೀವನದುದ್ದಕ್ಕೂ ನನ್ನನ್ನು ಕಾಡಿದೆ/ ಮುಂದೆಯೂ ಕಾಡುತ್ತದೆ. ಪತಿ ಮತ್ತು ತಾಯಿ ಒಟ್ಟಿಗೆ ಮೋಸ ಮಾಡುವುದನ್ನು ನಾನು ಹೇಗೆ ಜೀರ್ಣಿಸಿಕೊಳ್ಳಲಿ? ಈ ವಿಷಯ ಮೊದಲೇ ತಿಳಿದಿದ್ದರೆ ನಾನೇ ಒಂದು ನಿರ್ಧಾರಕ್ಕೆ ಬರುತ್ತಿದ್ದೆ. ಆದರೆ, ಇಬ್ಬರೂ ನನಗೆ ಕೆಟ್ಟದಾಗಿ, ಅಸಹ್ಯಕರವಾಗಿ ಮೋಸ ಮಾಡಿದ್ದಾರೆ’ ಎಂದು ತಮ್ಮ ದುಃಖ ತೋಡಿಕೊಂಡಿದ್ದಾರೆ. ಇದಲ್ಲದೆ, ಅವರ ಅಕ್ರಮ ಸಂಬಂಧದ ಫಲವಾಗಿ ಮಕ್ಕಳು ಸಹ ಜನಿಸಿವೆ. ಈ ವಿಚಾರವೂ ಸಂತ್ರಸ್ತ ಮಹಿಳೆಗೆ ಈಗ ಗೊತ್ತಾಗಿದೆ!

ಬ್ರಿಟನ್‌ನ ಈ ಮಹಿಳೆ ತನ್ನ 18ನೇ ವಯಸ್ಸಿನಲ್ಲಿ ತನ್ನ ಗೆಳೆಯನನ್ನು ಮದುವೆಯಾದಳು. ಬಳಿಕ ಗಂಡನ ಮನೆಗೆ ಶಿಫ್ಟ್ ಆಗಿದ್ದಳು. ಆದರೆ, ಆ ವೇಳೆಗಾಗಲೇ ಪತಿ ಹಾಗೂ ತಾಯಿ ನಡುವೆ ಸಂಬಂಧ ಶುರುವಾಗಿದ್ದು, ಹೊರಗೆ ಹೋಗುವುದಾಗಿ ಹೇಳಿ ತಾಯಿಯನ್ನು ಭೇಟಿಯಾಗುತ್ತಿದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಆದರೆ, ಇತ್ತೀಚೆಗೆ ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

ಸಂತ್ರಸ್ತೆ ಇತ್ತೀಚೆಗೆ ರಜೆಯ ಮೇಲೆ ತೆರಳಿದ್ದರು. ಅಲ್ಲಿಂದ ವಾಪಸಾದ ನಂತರ ನೇರವಾಗಿ ಅಮ್ಮನ ಮನೆಗೆ ಹೋದಳು. ಆದರೆ, ಅಲ್ಲಿ ಅವಳು ತನ್ನ ಗಂಡ ಮತ್ತು ತಾಯಿ ಇಬ್ಬರನ್ನೂ ನೋಡಬಾರದ ಸ್ಥಿತಿಯಲ್ಲಿ ನೋಡಿದ್ದಾಳೆ. ಅದರೊಂದಿಗೆ ಇಡೀ ವಿಷಯ ಬಯಲಾಯಿತು. ಅದನ್ನು ಸಹಿಸಲಾಗದೆ ಮಹಿಳೆ, ತನ್ನ ಮಕ್ಕಳನ್ನು ಕರೆದುಕೊಂಡು ಪತಿ ಮತ್ತು ತಾಯಿಯಿಂದ ದೂರ ಹೋಗಿದ್ದಾಳೆ. ಸ್ವತಂತ್ರವಾಗಿ ದುಡಿದು ಬದುಕುತ್ತೇನೆ ಎಂದಿದ್ದಾರೆ.

 

Published On - 12:31 pm, Sat, 27 May 23