ಕಾಬೂಲ್​ನಲ್ಲಿ ತಾಲಿಬಾನ್ ಸರ್ಕಾರದ 1 ವರ್ಷದ ಸಂಭ್ರಮಾಚರಣೆ; ಮಹಿಳೆಯರಿಗೆ ಮಾತ್ರ ಪ್ರವೇಶವಿಲ್ಲ!

| Updated By: ಸುಷ್ಮಾ ಚಕ್ರೆ

Updated on: Aug 16, 2022 | 8:24 AM

ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು ನೂರಾರು ತಾಲಿಬಾನ್ ಹೋರಾಟಗಾರರು ಕಾಬೂಲ್‌ನ ಬೀದಿಗಳಲ್ಲಿ ತೆರೆದ ವಾಹನಗಳಲ್ಲಿ ಸವಾರಿ ಮಾಡಿದರು.

ಕಾಬೂಲ್​ನಲ್ಲಿ ತಾಲಿಬಾನ್ ಸರ್ಕಾರದ 1 ವರ್ಷದ ಸಂಭ್ರಮಾಚರಣೆ; ಮಹಿಳೆಯರಿಗೆ ಮಾತ್ರ ಪ್ರವೇಶವಿಲ್ಲ!
ಕಾಬೂಲ್​ನಲ್ಲಿ ತಾಲಿಬಾನ್ ಹೋರಾಟಗಾರರ ಸಂಭ್ರಮಾಚರಣೆ
Follow us on

ಕಾಬೂಲ್: ತಾಲಿಬಾನಿಗರು ಅಫ್ಘಾನಿಸ್ತಾನವನ್ನು (Afghanistan) ಸ್ವಾಧೀನಪಡಿಸಿಕೊಂಡು 1 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು ನೂರಾರು ತಾಲಿಬಾನ್ (Taliban) ಹೋರಾಟಗಾರರು ಕಾಬೂಲ್‌ನ (Kabul) ಬೀದಿಗಳಲ್ಲಿ ತೆರೆದ ವಾಹನಗಳಲ್ಲಿ ಸವಾರಿ ಮಾಡಿದರು. ಕೈಯಲ್ಲಿ ಬಂದೂಕುಗಳನ್ನು ಹಿಡಿದುಕೊಂಡು ತಾಲಿಬಾನ್​ನ ಬಿಳಿ ಮತ್ತು ಕಪ್ಪು ಧ್ವಜಗಳನ್ನು ಬೀಸಿದರು.

ತಾಲಿಬಾನ್ ಹಿರಿಯ ನಾಯಕರ ಧೈರ್ಯ, ಸಾಧನೆಯ ಬಗ್ಗೆ ಭಾರತೀಯ ರಾಯಭಾರ ಕಚೇರಿಗೆ ಸಮೀಪವಿರುವ ಹೈ-ಸೆಕ್ಯುರಿಟಿ ಗ್ರೀನ್ ಝೋನ್‌ನಲ್ಲಿರುವ ಸಭಾಂಗಣದಲ್ಲಿ ಭಾಷಣ ನಡೆಸಲಾಯಿತು. ಆದರೆ, ಈ ಕಾರ್ಯಕ್ರಮದಲ್ಲಿ ಕೆಲವು ನಾಗರಿಕರು ಮಾತ್ರ ಪಾಲ್ಗೊಂಡಿದ್ದರು. ಮಹಿಳೆಯರಿಗೆ ಈ ಸಮಾರಂಭಕ್ಕೆ ಪ್ರವೇಶವಿರಲಿಲ್ಲ.

ಆದರೂ, ಮಹಿಳೆಯರ ಒಂದು ಸಣ್ಣ ಗುಂಪು ತಮ್ಮ ಪ್ರತಿಭಟನೆಯ ಬಗ್ಗೆ ಚರ್ಚಿಸಲು ಕಾಬೂಲ್‌ನ ಮನೆಯೊಂದರಲ್ಲಿ ರಹಸ್ಯವಾಗಿ ಭೇಟಿಯಾದರು. ಅಲ್ಲಿ ತಾಲಿಬಾನ್ ವಿರುದ್ಧ ತಮ್ಮ ಪ್ರತಿರೋಧವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದರು. ಕಾಬೂಲ್​ನ ಬೀದಿಗಳಲ್ಲಿ ಅಹ್ಮದ್ ಷಾ ಮಸ್ಸೌದ್ ಹೆಸರಿನ ಪ್ರಮುಖ ವೃತ್ತದಲ್ಲಿ ತಾಲಿಬಾನ್ ಹೋರಾಟಗಾರರು ದಿನವಿಡೀ ಜಮಾಯಿಸಿ ಸಂಭ್ರಮಾಚರಿಸಿದರು.

ಇದನ್ನೂ ಓದಿ: ಕಾಬೂಲ್‌ನಲ್ಲಿ ಆತ್ಮಾಹುತಿ ದಾಳಿ: ಅಫ್ಘಾನಿಸ್ತಾನದ ತಾಲಿಬಾನ್ ನಾಯಕ ಶೇಖ್ ರಹೀಮುಲ್ಲಾ ಹಕ್ಕಾನಿ ಸಾವು

ನಾವು ಅಮೆರಿಕವನ್ನು ಸೋಲಿಸಿದ್ದೇವೆ, ನಮ್ಮ ಸ್ವಾತಂತ್ರ್ಯವನ್ನು ಗೆದ್ದಿದ್ದೇವೆ. ಅದನ್ನೇ ನಾವು ಇಲ್ಲಿ ಆಚರಿಸುತ್ತಿದ್ದೇವೆ ಎಂದು ಕಾಬೂಲ್‌ನ ದಕ್ಷಿಣದಲ್ಲಿರುವ ಲಗ್‌ಮನ್ ಪ್ರಾಂತ್ಯದ ಅಬ್ದುಲ್ ಕಹರ್ ಅಘಾ ಜನ್ ಹೇಳಿದ್ದಾರೆ. ಅವರು ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಅಮೆರಿಕಾ ರಾಯಭಾರ ಕಚೇರಿಗೆ ಸಮೀಪವಿರುವ ಮಸ್ಸೂದ್ ವೃತ್ತದಲ್ಲಿ ಸಭೆ ಸೇರುವ ನಿರ್ಧಾರವು ತಾಲಿಬಾನ್ ಈಗ ಅಫ್ಘಾನಿಸ್ತಾನವನ್ನು ಆಳುತ್ತಿದೆ ಎಂಬ ಸಂದೇಶವಾಗಿದೆ ಎಂದು ಅವರು ಹೇಳಿದ್ದಾರೆ. ನಾವು ಅಧಿಕಾರದಲ್ಲಿದ್ದೇವೆ. ಈ ಸ್ಥಳವು ಎಲ್ಲಾ ಆಫ್ಘನ್ನರಿಗೆ ಸೇರಿದೆ. ನಾವು ಇತರ ಮುಜಾಹಿದ್ದೀನ್‌ಗಳು ಮತ್ತು ಅಹ್ಮದ್ ಶಾ ಮಸೂದ್ ಅವರ ಕುಟುಂಬದ ಸದಸ್ಯರು ಇಲ್ಲಿಗೆ ಬಂದು ನಮ್ಮೊಂದಿಗೆ ಶಾಂತಿಯಿಂದ ಬದುಕುತ್ತಾರೆ ಎಂದು ಹೇಳಲು ಬಯಸುತ್ತೇವೆ ಎಂದು ಅಘಾ ಜಾನ್ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ