ಆಗಸ್ಟ್ 15. ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ದಿನ. ದೇಶಾದ್ಯಂತ ಸ್ವಾತಂತ್ರ್ಯೋತ್ಸವವನ್ನ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತೆ. ಹಬ್ಬ, ಉತ್ಸವದಂತೆ ಒಂದು ತಿಂಗಳ ಮೊದಲೇ ಪ್ಲಾನ್ ಮಾಡ್ಕೊಂಡು ಸ್ವಾತಂತ್ರ್ಯೋತ್ಸವವನ್ನ ಆಚರಣೆ ಮಾಡ್ತಾರೆ. ಆದ್ರೆ ಕೊರೊನಾದಿಂದಾಗಿ ಈ ಬಾರಿ ಅದು ಸಾಧ್ಯವಾಗಿಲ್ಲ. ಸರಳವಾಗಿ ಎಲ್ಲೆಡೆ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಬೇಕಾಯಿತು.
ಆದರೆ, ಇತ್ತ ಕೆನಡಾ ದೇಶದಲ್ಲಿಯೂ ಸಹ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲಾಯಿತು. ಅಲ್ಲಿನ ಅತಿದೊಡ್ಡ ಜಲಪಾತವಾದ ನಯಾಗರಾ ಫಾಲ್ಸ್ನ ಭಾರತದ ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಪ್ರಕಾಶಿಸಲಾಯಿತು. ತ್ರಿವರ್ಣಮಯವಾದ ಜಲಪಾತವು ನೋಡುಗರಲ್ಲಿ ವಿಸ್ಮಯ ಹಾಗೂ ಅಲ್ಲಿನ ಅನಿವಾಸಿ ಭಾರತೀಯರಲ್ಲಿ ತಮ್ಮ ಮಾತೃಭೂಮಿಯನ್ನ ನೆನಪು ಮಾಡಿಕೊಳ್ಳುವಂತೆ ಮಾಡಿತು.
#WATCH Canada: Niagara Falls illuminated in colours of Indian national flag. #IndiaIndependenceDay
(Video source: Consulate General of India in Toronto, Canada) pic.twitter.com/FIfLYjSLvV
— ANI (@ANI) August 16, 2020
ಜೊತೆಗೆ, ಗುರುಕುಲ್ ಕೆನಡಾ ಮತ್ತು ಫ್ರೆಂಡ್ಸ್ ಆಫ್ ಇಂಡಿಯಾ ತಂಡಗಳು ಆಯೋಜಿಸಿದ ಕಾರ್ ಱಲಿಯಲ್ಲಿ ಭಾರತ ಹಾಗೂ ಕೆನಡಾ ದೇಶಗಳ ರಾಷ್ಟ್ರೀಯ ಧ್ವಜಗಳನ್ನ ಹೊತ್ತು ಮೆರವಣಿಗೆ ನಡೆಸಲಾಯಿತು. ಸರ್ರೆಯಿಂದ ವ್ಯಾಂಕೋವರ್ವರೆಗೆ ತಿರಂಗಾ ಕಾರ್ ಱಲಿ ಮಾಡಿ ದೇಶ ಭಕ್ತಿ ಮೆರೆಯಲಾಯಿತು.
#WATCH Canada: A 'Tiranga Car Rally' from Surrey to Vancouver organised by 'Gurukul Canada' and 'Friends of India-Canada' to celebrate #IndiaIndependenceDay.
(Video source: Consulate General of India in Vancouver) pic.twitter.com/Axwril0bSZ
— ANI (@ANI) August 16, 2020
Published On - 1:14 pm, Sun, 16 August 20