‘ಮಾತುಕತೆಗೆ ನಾವು ಬರೋದಿಲ್ಲ..’-ಮತ್ತೆ ಜಮ್ಮುಕಾಶ್ಮೀರದ ಬಗ್ಗೆ ಅಲವತ್ತುಕೊಂಡ ಪಾಕಿಸ್ತಾನ ಪ್ರಧಾನಿ
ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾಹ್ ಮಹಮ್ಮೂದ್ ಖುರೇಷಿ ಕೂಡ ಇತ್ತೀಚೆಗೆ ಇದನ್ನೇ ಉಚ್ಛರಿಸಿದ್ದರು. 2019ರಲ್ಲಿ ಜಮ್ಮುಕಾಶ್ಮೀರದಿಂದ ತೆಗೆಯಲಾದ ಆರ್ಟಿಕಲ್ 370ನ್ನು ಪುನಃಸ್ಥಾಪಿಸಿದರೆ ಮಾತ್ರ ನಾವು ಭಾರತದೊಟ್ಟಿಗೆ ಮಾತುಕತೆ ನಡೆಸುತ್ತೇವೆ ಎಂದಿದ್ದರು.
ಇಸ್ಲಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಿರುದ್ಧ ಮತ್ತೊಮ್ಮೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಮ್ಮು-ಕಾಶ್ಮೀರದಿಂದ ರದ್ದುಗೊಳಿಸಲಾದ ಆರ್ಟಿಕಲ್ 370ನ್ನು ವಾಪಸ್ ಹೇರುವವರೆಗೆ ನಾವು ಯಾವುದೇ ವಿಚಾರದಲ್ಲೂ ಭಾರತದೊಂದಿಗೆ ಮಾತುಕತೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ.
2019ರ ಆಗಸ್ಟ್ 5ರಂದು ಭಾರತ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದೆ. ಈ ನಿರ್ಧಾರವನ್ನು ಅದು ಹಿಂಪಡೆಯಬೇಕು. ಅಲ್ಲಿಯವರೆಗೆ ಪಾಕಿಸ್ತಾನ ಭಾರತದೊಂದಿಗೆ ಮಾತುಕತೆಗೆ ಸಿದ್ಧವಾಗುವುದಿಲ್ಲ ಎಂದು ಆ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ. ವಿಶ್ವಸಂಸ್ಥೆಯ ಅಜೆಂಡಾದಲ್ಲಿ ಉಲ್ಲೇಖವಾಗಿರುವಂತೆ ಜಮ್ಮು-ಕಾಶ್ಮೀರ ಎಂದಿಗೂ ಭಾರತದ ಆಂತರಿಕ ಸಮಸ್ಯೆಯಾಗಲು ಸಾಧ್ಯವಿಲ್ಲ. ಹಲವು ಭದ್ರತಾ ಮಂಡಳಿಯ ನಿರ್ಣಯಗಳನ್ನು ಒಳಗೊಂಡಿದೆ ಎಂದೂ ಇಮ್ರಾನ್ ಖಾನ್ ಉಲ್ಲೇಖಿಸಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾಹ್ ಮಹಮ್ಮೂದ್ ಖುರೇಷಿ ಕೂಡ ಇತ್ತೀಚೆಗೆ ಇದನ್ನೇ ಉಚ್ಛರಿಸಿದ್ದರು. 2019ರಲ್ಲಿ ಜಮ್ಮುಕಾಶ್ಮೀರದಿಂದ ತೆಗೆಯಲಾದ ಆರ್ಟಿಕಲ್ 370ನ್ನು ಪುನಃಸ್ಥಾಪಿಸಿದರೆ ಮಾತ್ರ ನಾವು ಭಾರತದೊಟ್ಟಿಗೆ ಮಾತುಕತೆ ನಡೆಸುತ್ತೇವೆ. ಉಳಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಚರ್ಚೆಗೆ ಸಿದ್ಧರಾಗುತ್ತೇವೆ ಎಂದಿದ್ದರು.
ಇದನ್ನೂ ಓದಿ: ಚೀನಾ ಆಪ್ ಮೂಲಕ ಸಾರ್ವಜನಿಕರಿಗೆ ವಂಚನೆ ಪ್ರಕರಣ; 76.67 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ
ಕರ್ನಾಟಕದಲ್ಲಿ ಈವರೆಗೆ ಎಷ್ಟು ಜನರಿಗೆ ಲಸಿಕೆ ಹಾಕಲಾಗಿದೆ ಎಂಬ ಮಾಹಿತಿ ಹಂಚಿಕೊಂಡ ಸಚಿವ ಡಾ.ಸುಧಾಕರ್