Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಅಧ್ಯಕ್ಷ ಸ್ಥಾನಕ್ಕೆ ಕ್ಸಿ ಜಿನ್‌ಪಿಂಗ್ ಮೂರನೇ ಬಾರಿ ಆಯ್ಕೆಯಾಗುವುದು ಅನುಮಾನ

Xi Jinping: ಜಿ 7 ಒಕ್ಕೂಟ ಕಳೆದ ವಾರ ಕ್ಸಿ ಅವರಿಗೆ ಕರೆ ಮಾಡಿ ತೈವಾನ್‌ನ ಮೇಲಿನ ಕ್ರಮಗಳು, ಸೈಬರ್‌ ಸ್ಪೇಸ್​ನಲ್ಲಿನ ಆಕ್ರಮಣಗಳು, ಮಾನವ ಹಕ್ಕುಗಳ ಉಲ್ಲಂಘನೆ, ಪರಿಸರಕ್ಕೆ ಮಾರಕ ಎನ್ನಲಾಗುವ ಬೆಲ್ಟ್ ಆಂಡ್ ರೋಡ್ ಯೋಜನೆ ಬಗ್ಗೆ ಮಾತುಕತೆ ನಡೆಸಿದೆ.

ಚೀನಾ ಅಧ್ಯಕ್ಷ ಸ್ಥಾನಕ್ಕೆ ಕ್ಸಿ ಜಿನ್‌ಪಿಂಗ್ ಮೂರನೇ ಬಾರಿ ಆಯ್ಕೆಯಾಗುವುದು ಅನುಮಾನ
ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್​
Follow us
ರಶ್ಮಿ ಕಲ್ಲಕಟ್ಟ
|

Updated on: May 12, 2021 | 3:48 PM

ಬೀಜಿಂಗ್: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಕಠಿಣ ನೀತಿಗಳು ಬೀಜಿಂಗ್‌ನ ಮೃದು ಶಕ್ತಿಯನ್ನು ಹಾಳು ಮಾಡುತ್ತಿರುವುದರಿಂದ, ಕ್ಸಿ ಮೂರನೇ ಅವಧಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವ ಬಗ್ಗೆ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಜಿ 7 ಒಕ್ಕೂಟ ಕಳೆದ ವಾರ ಕ್ಸಿ ಅವರಿಗೆ ಕರೆ ಮಾಡಿ ತೈವಾನ್‌ನ ಮೇಲಿನ ಕ್ರಮಗಳು, ಸೈಬರ್‌ ಸ್ಪೇಸ್​ನಲ್ಲಿನ ಆಕ್ರಮಣಗಳು, ಮಾನವ ಹಕ್ಕುಗಳ ಉಲ್ಲಂಘನೆ, ಪರಿಸರಕ್ಕೆ ಮಾರಕ ಎನ್ನಲಾಗುವ ಬೆಲ್ಟ್ ಆಂಡ್ ರೋಡ್ ಯೋಜನೆ ಬಗ್ಗೆ ಮಾತುಕತೆ ನಡೆಸಿದೆ. ಅದೇ ವಾರ, ಹಾಂಗ್ ಕಾಂಗ್ ಕಾರ್ಯಕರ್ತ ಜೋಶುವಾ ವಾಂಗ್ ಅವರು 2019 ರ ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕಗ್ಕಾಗಿ ಹೆಚ್ಚುವರಿ 10 ತಿಂಗಳ ಜೈಲು ಶಿಕ್ಷೆಯನ್ನು ಪಡೆದರು ಎಂದು ನಿಕ್ಕೈ ಏಷ್ಯಾದ ವಿಲಿಯಂ ಪೆಸೆಕ್ ವರದಿ ಮಾಡಿದ್ದಾರೆ.

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮೊರಿಸನ್​ರನ್ನು ಶೀತಲ ಸಮರದ ಮನಸ್ಥಿತಿ ಮತ್ತು ಸೈದ್ಧಾಂತಿಕ ತಾರತಮ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದ ಚೀನಾ ಕ್ಯಾನ್ಬೆರಾದೊಂದಿಗೆ ಸಚಿವಾಲಯದ ಆರ್ಥಿಕ ಸಂವಾದವನ್ನು ಸ್ಥಗಿತಗೊಳಿಸಿದೆ.

ಮೊರಿಸನ್ ಅವರ ಪ್ರಶ್ನೆಗಳ ಬಗ್ಗೆ ಚೀನಾದ ಆಂತರಿಕ ವಲಯವು ಸಿಡಿದೆದ್ದಿದೆ. ಕೊವಿಡ್ -19 ಹೊತ್ತಲ್ಲಿ ಜಿ7ನಲ್ಲಿ ಸ್ಥಾನಕ್ಕಾಗಿ ಬೇಡಿಕೆಯೊಡ್ಡುವುದು ಬೇಜವಾಬ್ದಾರಿತನ ಎಂದು  ಪ್ರತಿಯೊಬ್ಬರೂ ಕೇಳಬೇಕಾಗಿದೆ ಎಂದು ಪೆಸೆಕ್ ಬರೆದಿದ್ದಾರೆ.

ದಕ್ಷಿಣ ಏಷ್ಯಾದ ಬಹುಪಾಲು ಜನರು ಕ್ಸಿಯವರರ ಸಿಡುಕಿನ ಮುಖ ನೋಡಲು ಇಷ್ಟಪಡುವುದಿಲ್ಲ . ಅಮೆರಿಕ ವಿನ್ಯಾಸಗೊಳಿಸಿದ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಅಥವಾ THAAD, ಕ್ಷಿಪಣಿ-ರಕ್ಷಣಾ ವ್ಯವಸ್ಥೆಯನ್ನು ದಕ್ಷಿಣ ಕೊರಿಯಾ ಸ್ವಾಗತಿಸಿದ ನಂತರ, ಸಿಯೋಲ್ ಗೆ ಚೀನಾದ ಪ್ರವಾಸೋದ್ಯಮ ಹರಿವು ಕಣ್ಮರೆಯಾಯಿತು.

ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ವ್ಯಾಪಾರ ಯುದ್ಧಗಳ ಮಧ್ಯೆ ಅಮೆರಿಕದ ವೆಚ್ಚದಲ್ಲಿ ಬೀಜಿಂಗ್‌ನ ಮೃದು ಶಕ್ತಿಯನ್ನು ಬೆಳೆಸಲು ಕ್ಸಿ ಅವರಿಗೆ ಒಮ್ಮೆ ಅವಕಾಶವಿತ್ತು. ಆದಾಗ್ಯೂ, ಅವರು ಅದನ್ನು ಕಡೆಗಣಿಸಿದ್ದು ಅಂತರರಾಷ್ಟ್ರೀಯ ಚುನಾವಣೆಗಳಲ್ಲಿ ಚೀನಾದ ಅಂತರರಾಷ್ಟ್ರೀಯ ಚಿತ್ರಣವು 2018 ರಿಂದ ಅಸ್ತಿತ್ವ ಕಳೆದುಕೊಂಡಿದೆ.

ಕೊವಿಡ್ -19 ಜಗತ್ತನ್ನು ಧ್ವಂಸಗೊಳಿಸುತ್ತಿದ್ದಂತೆ, ಹಾಂಗ್ ಕಾಂಗ್, ತೈವಾನ್ ಮತ್ತು ಭಾರತದೊಂದಿಗೆ ಗಾಲ್ವಾನ್ ಗಡಿ , ಕೆನಡಾ ಮತ್ತು ಹೆಚ್ಚಿನವುಗಳೊಂದಿಗೆ ಘರ್ಷಣೆ ಮೊದಲಾದವುಗಳು ಕ್ಸಿಯನ್ನು ಸಾಕಷ್ಟು ಆಪಾದನೆಗೊಳಪಡಿಸಿದೆ.

ಏತನ್ಮಧ್ಯೆ, ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡೆನ್ ಚೀನಾ ವಿರುದ್ಧ ಕ್ವಾಡ್ರಿಲ್ಯಾಟರಲ್ ಭದ್ರತಾ ಸಂವಾದವನ್ನು ತಿರುಗಿಸುತ್ತಿದ್ದಾರೆ. ಇದಕ್ಕೆ ಚೀನಾ ಪ್ರಕಿರೋಧ ವ್ಯಕ್ತ ಪಡಿಸಿದೆ.

ಚೀನಾದ ಅಧ್ಯಕ್ಷರು ಜಗತ್ತು ಏನು ಯೋಚಿಸುತ್ತಾರೋ ಅದನ್ನು ಲೆಕ್ಕಿಸುವುದಿಲ್ಲ ಎಂಬ ಸಾಮಾನ್ಯ ಅಭಿಪ್ರಾಯದ ಹೊರತಾಗಿಯೂ, ಚೀನಾದಲ್ಲಿ ಪತ್ರಿಕಾ ಸ್ವಾತಂತ್ರ್ಯವು ತಪ್ಪು ದಿಕ್ಕಿನಲ್ಲಿ ಓಡುತ್ತಿದೆ. ಕ್ಸಿ ಸ್ವತಃ ಗೂಗಲ್ ಮತ್ತು ಫೇಸ್‌ಬುಕ್‌ಗೆ ಹೆದರುತ್ತಿದ್ದಾರೆ ಎಂದು ನಿಕ್ಕೈ ಏಷ್ಯಾದ ಪೆಸೆಕ್ ಬರೆದಿದ್ದಾರೆ.

ಈ ಕ್ರಮಗಳು ಅಭದ್ರತೆ ಮತ್ತು ಬುದ್ಧಿವಂತಿಕೆಯ ಕೊರತೆಯನ್ನು ಸಂಕೇತಿಸುತ್ತದೆ. ಈ ಸಮಯದಲ್ಲಿ ಒಂದು ಪ್ರಮುಖ ಶಕ್ತಿಯು ದುರುಪಯೋಗಪಡಿಸಿಕೊಳ್ಳಬೇಕು.ಯಆದ್ದರಿಂದ ಕ್ಸಿ ಅವರ ಮತ್ತೊಂದು ಅವಧಿಯಲ್ಲಿ ಮುಂದುವರಿಯುತ್ತಾರೆ ಎಂಬುದು ಅನುಮಾನ ಅಂತಾರೆ ಪೆಸೆಕ್.

ಇದನ್ನೂ ಓದಿ: ಜಗತ್ತಿನ ವಿರುದ್ಧ ಜೈವಿಕ ಅಸ್ತ್ರವಾಗಿ ಕೊರೊನಾ ವೈರಸ್ ಬಳಕೆ.. ಬಯಲಾಯ್ತು ಚೀನಾದ ಕುತಂತ್ರ!

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ