ದುಬೈ: ದುಬೈನ (Dubai) ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ 16 ಮಂದಿ ಸಾವಿಗೀಡಾಗಿದ್ದಾರೆ. ಸಾವಿಗೀಡಾದವರವಲ್ಲಿ ಕೇರಳ (Kerala) ಮೂಲದ ರಿಜೇಶ್ ಕಲಾಂಗಡನ್ (38) ಮತ್ತು ಅವರ ಪತ್ನಿ ಜೇಶಿ ಕಂದಮಂಗಲತ್ (32) ಇದ್ದಾರೆ. ದುರಂತ ಸಂಭವಿಸಿದ ಹೊತ್ತಲ್ಲಿ ಈ ಭಾರತೀಯ ದಂಪತಿಗಳು ತಮ್ಮ ನೆರೆಹೊರೆಯವರಿಗಾಗಿ ಇಫ್ತಾರ್ (Iftar) ಕೂಟವನ್ನು ಸಿದ್ಧಪಡಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.ಶನಿವಾರ ಸಂಜೆ ತಮ್ಮ ಮುಸ್ಲಿಂ ನೆರೆಹೊರೆಯವರ ಉಪವಾಸವನ್ನು ಅಂತ್ಯಗೊಳಿಸಲು ರಿಜೇಶ್ ದಂಪತಿ ವಿಷು ಸದ್ಯ ಸಿದ್ಧಪಡಿಸುತ್ತಿದ್ದರು ಎನ್ನಲಾಗಿದೆ ಅಲ್ ರಾಸ್ ಪ್ರದೇಶದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಕಟ್ಟಡದ ಭದ್ರತೆ ಮತ್ತು ಸುರಕ್ಷತಾ ಅಗತ್ಯತೆಗಳ ಕೊರತೆಯಿಂದ ಈ ದುರಂತ ಸಂಭವಿಸಿದೆ.
ರಿಜೇಶ್ ಕಲಾಂಗಡನ್ ಅವರು ಪ್ರಯಾಣ ಮತ್ತು ಪ್ರವಾಸೋದ್ಯಮ ಕಂಪನಿಯೊಂದಿಗೆ ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕರಾಗಿದ್ದರೆ, ಅವರ ಪತ್ನಿ ಶಾಲಾ ಶಿಕ್ಷಕಿ ಆಗಿದ್ದರು.ಈ ದಂಪತಿ ಶನಿವಾರ ವಿಷು ಆಚರಿಸುತ್ತಿದ್ದರು. ಇದಾದ ನಂತರ ತಮ್ಮ ಮುಸ್ಲಿಂ ನೆರೆಹೊರೆಯವರಾದ ಕೇರಳದ ಬ್ಯಾಚುಲರ್ ಗುಂಪನ್ನು ಇಫ್ತಾರ್‌ಗೆ ಆಹ್ವಾನಿಸಿದ್ದ ಇವರು, ಅದಕ್ಕಾಗಿ ವಿಷು ಸದ್ಯ ಸಿದ್ಧತೆಯಲ್ಲಿ ತೊಡಗಿದ್ದರು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಅಪಾರ್ಟ್‌ಮೆಂಟ್ ಸಂಖ್ಯೆ 409 ರಲ್ಲಿ ಏಳು ಕೊಠಡಿ ಸಹವಾಸಿಗಳೊಂದಿಗೆ ವಾಸಿಸುತ್ತಿದ್ದ ರಿಯಾಸ್ ಕೈಕಂಬಮ್, ಈ ದಂಪತಿ ಅಪಾರ್ಟ್‌ಮೆಂಟ್ ಸಂಖ್ಯೆ 406 ರಲ್ಲಿ ವಾಸಿಸುತ್ತಿದ್ದರು. ಫ್ಲಾಟ್ 405ಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಈ ದಂಪತಿ ತಮ್ಮ ಹಬ್ಬಗಳ ಸಂದರ್ಭದಲ್ಲಿ ನೆರೆಹೊರೆಯವರನ್ನು ಹಬ್ಬದೂಟಕ್ಕೆ ಆಹ್ವಾನಿಸುತ್ತಿದ್ದರು ಎಂದಿದ್ದಾರೆ.
ಈ ಹಿಂದೆಯೂ ಓಣಂ ಮತ್ತು ವಿಷು ಹಬ್ಬದ ಸಮಯದಲ್ಲಿ ಅವರು ನಮ್ಮನ್ನು ಆಹ್ವಾನಿಸಿದ್ದರು. ಈ ಬಾರಿ ರಂಜಾನ್ ಆಗಿರುವುದರಿಂದ ಇಫ್ತಾರ್‌ಗೆ ಬರಲು ಹೇಳಿದರು. ಟೀಚರ್ ಅಳುತ್ತಿರುವುದನ್ನು ನಾನು ನೋಡಿದೆ ಎಂದು ರಿಯಾಸ್ ಹೇಳಿದ್ದಾರೆ. ನಂತರ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮಧ್ಯಾಹ್ನ 12.35ಕ್ಕೆ ವಾಟ್ಸಾಪ್‌ನಲ್ಲಿ ರಿಜೇಶ್ ಕೊನೆಯದಾಗಿ ಹಾಕಿದ್ದ ಸ್ಟೇಟಸ್ ನೋಡಿದೆ. ಭಾನುವಾರದಂದು ನನ್ನ ವಿಮಾನ ಟಿಕೆಟ್ ಕಾಯ್ದಿರಿಸಲು ಸಹಾಯ ಮಾಡಿದ ವ್ಯಕ್ತಿ, ಇಫ್ತಾರ್‌ಗೆ ನನ್ನನ್ನು ಆಹ್ವಾನಿಸಿದ ವ್ಯಕ್ತಿ (ಅವನ ಹೆಂಡತಿಯೊಂದಿಗೆ) ಹೋಗಿದ್ದಾನೆ ಎಂದು ನಾನು ನಂಬಲು ಸಾಧ್ಯವಿಲ್ಲ ಎಂದು ಅಗ್ನಿ ದುರಂತದ ಸಮಯದಲ್ಲಿ ಮನೆಯಲ್ಲಿಲ್ಲದ ಅವರ ರೂಮ್‌ಮೇಟ್ ಸುಹೇಲ್ ಕೋಪ ಹೇಳಿದ್ದಾರೆ.
ನಮ್ಮ ನೆರೆಹೊರೆಯವರನ್ನು ಕಳೆದುಕೊಂಡಿರುವ ಬಗ್ಗೆ ನಾನು ದುಃಖಿತರಾಗಿದ್ದಾರೆ. ಅವರು ನಾವು ಪ್ರತಿದಿನ ಭೇಟಿಯಾಗಿ ಮಾತನಾಡುತ್ತಿದ್ದ ಜನರು. ನಾವು 16 ನೆರೆಹೊರೆಯವರನ್ನು ಕಳೆದುಕೊಂಡ ಅದೇ ಸ್ಥಳದಲ್ಲಿ ವಾಸಿಸಲು ಯೋಚಿಸುವುದು ನೋವಿನ ಸಂಗತಿ. ಅವರಲ್ಲಿ ಕೆಲವರು ನಮಗೆ ಆಪ್ತರಾಗಿದ್ದರು ಎಂದಿದ್ದಾರೆ ಅವರು. ಶನಿವಾರ ಮಧ್ಯಾಹ್ನ 12.35 ಕ್ಕೆ ದುಬೈ ನಾಗರಿಕ ರಕ್ಷಣಾ ಕಾರ್ಯಾಚರಣೆ ಕೊಠಡಿಗೆ ಬೆಂಕಿ ತಗುಲಿರುವ ಬಗ್ಗೆ ಸುದ್ದಿ ಸಿಕ್ಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:Bathinda: ಮಿಲಿಟರಿ ಸ್ಟೇಷನ್ ಮೇಲೆ ಗುಂಡಿನ ದಾಳಿ ಪ್ರಕರಣ: ತಪ್ಪೊಪ್ಪಿಕೊಂಡ ಯೋಧನ ಬಂಧನ
ದುಬೈ ಸಿವಿಲ್ ಡಿಫೆನ್ಸ್ ಪ್ರಧಾನ ಕಚೇರಿಯ ತಂಡವು ಬೆಂಕಿಯ ಸ್ಥಳಕ್ಕೆ ಆಗಮಿಸಿ ಕಟ್ಟಡದಿಂದ ನಿವಾಸಿಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಿತು. ಪೋರ್ಟ್ ಸಯೀದ್ ಅಗ್ನಿಶಾಮಕ ಠಾಣೆ ಮತ್ತು ಹಮ್ರಿಯಾ ಅಗ್ನಿಶಾಮಕ ಠಾಣೆಯ ತಂಡಗಳನ್ನು ಸಹ ಕರೆಸಲಾಯಿತು.
ಮಧ್ಯಾಹ್ನ 2:42ಕ್ಕೆ (ಸ್ಥಳೀಯ ಕಾಲಮಾನ) ಬೆಂಕಿ ನಂದಿಸಲಾಯಿತು ಎಂದು ಪತ್ರಿಕೆ ತಿಳಿಸಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಿವಿಲ್ ಡಿಫೆನ್ಸ್ ತಂಡ ಮೂರನೇ ಮಹಡಿಯಲ್ಲಿದ್ದವರನ್ನು ಕ್ರೇನ್‌ಗಳ ಮೂಲಕ ರಕ್ಷಿಸಿತು.ಖಲೀಜ್ ಟೈಮ್ಸ್ ಪತ್ರಿಕೆಯ ಪ್ರಕಾರ, ಪ್ರತ್ಯಕ್ಷದರ್ಶಿಗಳು ಕಟ್ಟಡದಿಂದ ಬೆಂಕಿ ಜ್ವಾಲೆ ಹೊರಹೊಮ್ಮುತ್ತಿರುವುದನ್ನು ನೋಡಿದ್ದಾರೆಂದು ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ