ವಿದೇಶದಲ್ಲಿ ವಾಸಿಸುವ ಜನರ ಪೈಕಿ ಭಾರತೀಯರೇ ಹೆಚ್ಚಂತೆ!

ವಿದೇಶದಲ್ಲಿ ವಾಸಿಸುವ ಜನರ ಪೈಕಿ ಭಾರತೀಯರೇ ಹೆಚ್ಚಂತೆ!

ವಿದೇಶದಲ್ಲಿ ವಾಸಿಸುವ ಜನರ ಪೈಕಿ ಭಾರತೀಯರೇ ಅತಿ ಹೆಚ್ಚು ಅಂತ ವಿಶ್ವಸಂಸ್ಥೆ ವರದಿ ಹೇಳಿದೆ. ಸುಮಾರು 1.75 ಕೋಟಿ ಭಾರತೀಯರು ಪ್ರಪಂಚದ ನಾನಾ ದೇಶಗಳಲ್ಲಿ ಹಂಚಿ ಹೋಗಿದ್ದಾರೆ ಎಂದಿದೆ. ಒಟ್ಟಾರೆ ಜಗತ್ತಿನ ಸುಮಾರು 27 ಕೋಟಿ ಮಂದಿ ತಮ್ಮ ದೇಶವನ್ನ ತೊರೆದು ವಿದೇಶದಲ್ಲಿ ನೆಲೆಸಿದ್ದಾರೆ ಅಂತ ವಿಶ್ವಸಂಸ್ಥೆ ಹೇಳಿದೆ.

ಹವಾಮಾನ ಬದಲಾವಣೆಯ ಆತಂಕ:
ಹವಾಮಾನ ಬದಲಾವಣೆ ಹಾಗೂ ಅದರ ಪರಿಣಾಮಗಳ ಕುರಿತು ವರದಿಯೊಂದು ಬಿಡುಗಡೆಯಾಗಿದ್ದು, ಕ್ಲೈಮೆಟ್ ಚೆಂಜ್​ನಿಂದ ಆಗ್ತ್ತಿರುವ ಸಮಸ್ಯೆಗಳ ಚಿತ್ರಣವನ್ನ ಹೊರಗೆಡವಲಾಗಿದೆ. ಪ್ರಪಂಚದ ಕೆಲವೆಡೆ ಅತಿವೃಷ್ಟಿ ಉಂಟಾಗುತ್ತಿದ್ರೆ ಮತ್ತೆ ಕೆಲವು ಪ್ರದೇಶಗಳಲ್ಲಿ ತೀವ್ರ ಬರ ಎದುರಾಗಿದೆ. ದೃವ ಪ್ರದೇಶದ ಮಂಜು ಕರಗುತ್ತಿರುವುದೂ ಉಲ್ಲೇಖವಾಗಿದೆ.

ಅತಿವೃಷ್ಟಿಗೆ ತತ್ತರಿಸಿದ ಕ್ಯಾಲಿಫೋರ್ನಿಯಾ:
ಕಂಡು ಕೇಳರಿಯದ ಕಾಡ್ಗಿಚ್ಚಿಗೆ ಸಿಲುಕಿದ್ದ ಅಮೆರಿಕದ ಕ್ಯಾಲಿಫೋರ್ನಿಯಾ, ಈಗ ಅತಿವೃಷ್ಟಿಗೆ ತುತ್ತಾಗಿದೆ. ಬಿರುಗಾಳಿ ಹೊಡೆತಕ್ಕೆ ಕ್ಯಾಲಿಫೋರ್ನಿಯಾದ ಕೆಲವೆಡೆ ವಿಪರೀತ ಮಂಜು ಬೀಳುತ್ತಿದ್ದರೆ ಮತ್ತು ಕೆಲವು ಕಡೆ ಭಾರಿ ಪ್ರಮಾಣದ ಮಳೆಯಾಗಿದೆ. ಮತ್ತೊಂದ್ಕಡೆ ಇಷ್ಟುದಿನ ಮುಚ್ಚಿದ್ದ ಹೈವೇಯನ್ನ ತಾತ್ಕಾಲಿಕವಾಗಿ ಸಂಚಾರಕ್ಕೆ ಮುಕ್ತ ಮಾಡಲಾಗಿದೆ.

ಭೀಕರ ಬರಕ್ಕೆ ಪ್ರಾಣಿಗಳು ಬಲಿ:
ಜಿಂಬಾಬ್ವೆ ಇತಿಹಾಸದಲ್ಲೇ ಅತಿ ಕರಾಳ ಪರಿಸ್ಥಿತಿಯನ್ನ ಎದರಿಸುತ್ತಿದೆ. ಭೀಕರ ಕ್ಷಾಮಕ್ಕೆ ತುತ್ತಾದ ಜಿಂಬಾಬ್ವೆಯಲ್ಲೀಗ ಅರಣ್ಯ ಸಂಪೂರ್ಣ ಒಣಗಿ ಹೋಗಿದೆ. ಇನ್ನು ನೀರಿನ ಮೂಲವೇ ಇಲ್ಲದೆ ಆನೆ, ಕಾಡುಕೋಣ ಸೇರಿದಂತೆ ಹಲವಾರು ಪ್ರಾಣಿಗಳು ಪ್ರಾಣಬಿಟ್ಟಿವೆ. ಪರಿಹಾರ ಕಾರ್ಯಕ್ಕೂ ಹಣವಿಲ್ಲದೆ ಜಿಂಬಾಬ್ವೆ ಸರ್ಕಾರ ಪರದಾಡುತ್ತಿದೆ.

Read Full Article

Click on your DTH Provider to Add TV9 Kannada