ದೆಹಲಿ: ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಪೂರ್ವ ಯುರೋಪಿನ ದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಯುದ್ಧ ಪೀಡಿತ ಉಕ್ರೇನ್‌ನಲ್ಲಿರುವ (Ukraine) ಭಾರತೀಯ ರಾಯಭಾರ ಕಚೇರಿಯನ್ನು(Embassy) ತಾತ್ಕಾಲಿಕವಾಗಿ ನೆರೆಯ ಪೋಲೆಂಡ್‌ಗೆ (Poland) ಸ್ಥಳಾಂತರಿಸಲಾಗಿದೆ ಎಂದು ಭಾರತ ಸರ್ಕಾರ ಭಾನುವಾರ ತಿಳಿಸಿದೆ. ಉಕ್ರೇನ್‌ನಲ್ಲಿ ವೇಗವಾಗಿ ಕ್ಷೀಣಿಸುತ್ತಿರುವ ಭದ್ರತಾ ಪರಿಸ್ಥಿತಿ, ದೇಶದ ಪಶ್ಚಿಮ ಭಾಗಗಳಲ್ಲಿ ದಾಳಿಗಳು ಸೇರಿದಂತೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಪೋಲೆಂಡ್‌ನಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಮುಂದಿನ ಬೆಳವಣಿಗೆಯನ್ನು ನೋಡಿಕೊಂಡು ಪರಿಸ್ಥಿತಿಯನ್ನು ಮರು ಮೌಲ್ಯಮಾಪನ ಮಾಡಲಾಗುವುದು” ಎಂದು ಸರ್ಕಾರ ಹೇಳಿದೆ. ಕೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಗಮನಾರ್ಹ ಸಂಖ್ಯೆಯ ಅಧಿಕಾರಿಗಳು ಈಗಾಗಲೇ ಕಳೆದ ಕೆಲವು ದಿನಗಳಿಂದ ಲಿವೀವ್ ನಲ್ಲಿರುವ ಅದರ ಶಿಬಿರ ಕಚೇರಿಯಿಂದ ಕೆಲಸ ಮಾಡುತ್ತಿದ್ದಾರೆ. ಲಿವೀವ್ ಪಶ್ಚಿಮ ಉಕ್ರೇನ್‌ನಲ್ಲಿರುವ ಒಂದು ನಗರವಾಗಿದ್ದು ಅದು ಪೋಲೆಂಡ್‌ನ ಗಡಿಯಿಂದ 70 ಕಿಲೋಮೀಟರ್ ದೂರದಲ್ಲಿದೆ. ರಾಜಧಾನಿ ಕೈವ್ ಸೇರಿದಂತೆ ಪ್ರಮುಖ ಉಕ್ರೇನಿಯನ್ ನಗರಗಳು ಮತ್ತು ಪಟ್ಟಣಗಳಲ್ಲಿ ರಷ್ಯಾದ ಪಡೆಗಳು ಮುನ್ನುಗ್ಗುತ್ತಿರುವುದರಿಂದ ಈ ನಿರ್ಧಾರವು ಬಂದಿದೆ.
In view of the rapidly deteriorating security situation in Ukraine, including attacks in the western parts of the country, it has been decided that the Indian Embassy in Ukraine will be temporarily relocated in Poland.
Press Release➡️ https://t.co/tVkxNSDJmN
— Arindam Bagchi (@MEAIndia) March 13, 2022
ಭಾನುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭದ್ರತಾ ಸನ್ನದ್ಧತೆ ಮತ್ತು ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಉಕ್ರೇನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಪ್ರಾರಂಭಿಸಲಾದ ಆಪರೇಷನ್ ಗಂಗಾ – ಮಿಷನ್‌ನ ವಿವರಗಳನ್ನು ಒಳಗೊಂಡಂತೆ ಉಕ್ರೇನ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರಧಾನಿ ಮೋದಿ ಅವರಿಗೆ ವಿವರಿಸಲಾಯಿತು ಎಂದು ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಫೆಬ್ರವರಿ 24 ರಂದು, ಉಕ್ರೇನ್ ಸೈನ್ಯದ ಆಕ್ರಮಣವನ್ನು ಎದುರಿಸಲು ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್‌ಗಳ ಸಹಾಯಕ್ಕಾಗಿ ಕರೆಗಳಿಗೆ ಪ್ರತಿಕ್ರಿಯಿಸಿದ ರಷ್ಯಾ, ಉಕ್ರೇನ್ ಅನ್ನು ಸಶಸ್ತ್ರೀಕರಣಗೊಳಿಸಲು ಮತ್ತು “ಡಿನಾಝಿಫೈ” (ನಾಝಿ ಪ್ರಭಾವ ಮುಕ್ತ)ಮಾಡಲು ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ವಿಶೇಷ ಕಾರ್ಯಾಚರಣೆಯು ಉಕ್ರೇನಿಯನ್ ಮಿಲಿಟರಿ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಮತ್ತು ನಾಗರಿಕರಿಗೆ ಅಪಾಯವಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಮಾಸ್ಕೋ ಪದೇ ಪದೇ ಒತ್ತಿಹೇಳಿದೆ.
ಸುಮಾರು ಎರಡು ವಾರಗಳ ಆಕ್ರಮಣದಲ್ಲಿ 1,500 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳುತ್ತದೆ. ಈ ಯುದ್ಧದಲ್ಲಿ ನೀರು, ಆಹಾರವಿಲ್ಲದೆ ನಗರಗಳು ಖಾಲಿಯಾಗಿದೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ಇದನ್ನೂ ಓದಿ: ಭಾರತದಲ್ಲಿ ಮಿಲಿಟರಿ ಸನ್ನದ್ಧತೆ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ; ಪ್ರಮುಖ ವಿಷಯಗಳ ಚರ್ಚೆ
Published On - 7:31 pm, Sun, 13 March 22