‘ಪ್ರೊ ಟ್ರಂಪ್‘ ಹಿಂಸಾಚಾರದಲ್ಲಿ ಇಣುಕಿದ ಭಾರತದ ಧ್ವಜ: ನೆಟ್ಟಿಗರಿಂದ ಖಂಡನೆ

| Updated By: ರಶ್ಮಿ ಕಲ್ಲಕಟ್ಟ

Updated on: Jan 07, 2021 | 7:14 PM

ಡೊನಾಲ್ಡ್ ಟ್ರಂಪ್ ಪರ ನಡೆದ ಪ್ರತಿಭಟನೆಯಲ್ಲಿ ಭಾರತದ ಧ್ವಜ ಕಾಣಿಸಿಕೊಂಡಿದೆ.

‘ಪ್ರೊ ಟ್ರಂಪ್‘ ಹಿಂಸಾಚಾರದಲ್ಲಿ ಇಣುಕಿದ ಭಾರತದ ಧ್ವಜ: ನೆಟ್ಟಿಗರಿಂದ ಖಂಡನೆ
ಅಮೆರಿಕದ ಹಿಂಸಾಚಾರದ ಲ್ಲಿ ಕಾಣಿಸಿಕೊಂಡ ತ್ರಿವರ್ಣಧ್ವಜ
Follow us on

ವಾಷಿಂಗ್ಟನ್ ಡಿ ಸಿ: ನಿಯೋಜಿತ ಅಧ್ಯಕ್ಷ ಜೋ ಬಿಡೈನ್​ಗೆ ಅಧಿಕಾರ ಘೋಷಣೆ ವಿರುದ್ಧ ಡೊನಾಲ್ಡ್ ಟ್ರಂಪ್ ಬೆಂಬಲಿಗರ ಪ್ರತಿಭಟನೆಯಲ್ಲಿ ಭಾರತದ ಧ್ವಜ ಕಾಣಿಸಿಕೊಂಡಿದೆ. ಇದು ಭಾರತೀಯ ನೆಟ್ಟಿಗರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಡೊನಾಲ್ಡ್ ಟ್ರಂಪ್ ಪರ ಪ್ರತಿಭಟನೆಯಲ್ಲಿ ಅನಿವಾಸಿ ಭಾರತೀಯರು ಭಾಗವಹಿಸಿರುವ ಸಾಧ್ಯತೆಯಿದೆ ಎಂಬ ಅನುಮಾನ ಈ ಘಟನೆಯಿಂದ ಉದ್ಭವವಾಗಿದೆ. ಡೊನಾಲ್ಡ್ ಟ್ರಂಪ್​ಗೆ ಕೆಲವೆಡೆ ಅನಿವಾಸಿ ಭಾರತೀಯರ ಬೆಂಬಲವಿದ್ದು, ಈ ವಿಡಿಯೋಗೆ ವಿಷಾದ ವ್ಯಕ್ತಪಡಿಸಿ ಹಲವು ನಾಯಕರು ಟ್ವೀಟ್ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ಪರ ಪ್ರತಿಭಟನೆ ವೇಳೆ ಹಿಂಸಾಚಾರ: ಮಹಿಳೆ ಸೇರಿ ನಾಲ್ವರು ಸಾವು

Published On - 7:13 pm, Thu, 7 January 21