
ಡಲ್ಲಾಸ್, ಸೆಪ್ಟೆಂಬರ್ 12: ಅಮೆರಿಕದ ಡಲ್ಲಾಸ್ನಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ(Murder) ಮಾಡಲಾಗಿದೆ. ಅವರು ಕರ್ನಾಟಕದವರು ಎನ್ನಲಾಗಿದೆ. ಪೊಲೀಸರ ಪ್ರಕಾರ, ಈ ಘಟನೆ ಸೆಪ್ಟೆಂಬರ್ 10 ರಂದು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ನಡೆದಿದೆ. ಭಾರತ ಮೂಲದ 50 ವರ್ಷದ ಚಂದ್ರಮೌಳಿ ನಾಗಮಲ್ಲಯ್ಯ ಅವರನ್ನು ಅವರ ಪತ್ನಿ ಮತ್ತು ಮಗನ ಎದುರೇ ರುಂಡ ಕತ್ತರಿಸಿ ಕೊಲೆ ಮಾಡಲಾಗಿದೆ.
ಡಲ್ಲಾಸ್ ಪೊಲೀಸರು ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ ಅವರನ್ನು ಕೊಲೆ ಪ್ರಕರಣದಲ್ಲಿ ಶಂಕಿತ ಎಂದು ಗುರುತಿಸಿದ್ದು ಆತನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಜೈಲು ದಾಖಲೆಗಳ ಪ್ರಕಾರ, ಆರೋಪಿಗೆ ಬಾಂಡ್ ರಹಿತ ಬಂಧನ ಆದೇಶ ಹೊರಡಿಸಲಾಗಿದೆ.
ನಾಗಮಲ್ಲಯ್ಯ, ತನ್ನ ಸಹೋದ್ಯೋಗಿ ಯೋರ್ದಾನಿಸ್ ಕೋಬೋಸ್-ಮಾರ್ಟಿನೆಜ್ ಜೊತೆ ಒಡೆದ ವಾಷಿಂಗ್ ಮೆಷಿನ್ ಬಗ್ಗೆ ನಡೆದ ವಾಗ್ವಾದದ ನಂತರ ಹತ್ಯೆ ಮಾಡಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಕೋಬೋಸ್-ಮಾರ್ಟಿನೆಜ್ ಚಾಕುವನ್ನು ಹೊರತೆಗೆದು ನಾಗಮಲ್ಲಯ್ಯ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.
ಮತ್ತಷ್ಟು ಓದಿ:
ಪಾರ್ಕಿಂಗ್ ವಿವಾದ, ಉತ್ತರ ಪ್ರದೇಶದಲ್ಲಿ ಶಿಕ್ಷಕನ ಬರ್ಬರ ಹತ್ಯೆ, ಮೂವರ ಬಂಧನ
ನಾಗಮಲ್ಲಯ್ಯ ಅವರು ತನ್ನ ಹೆಂಡತಿ ಮತ್ತು 18 ವರ್ಷದ ಮಗ ಇದ್ದ ಮೋಟೆಲ್ ಕಚೇರಿಗೆ ಓಡಿಹೋದರು, ಶಂಕಿತನು ಅವರನ್ನು ಹಿಂಬಾಲಿಸಿ ಅವನ ಮೇಲೆ ಹಲ್ಲೆ ಮಾಡಿದ್ದಾನೆ. ಕೋಬೋಸ್-ಮಾರ್ಟಿನ್ ಹೂಸ್ಟನ್‌ನಲ್ಲಿ ವಾಹನ ಕಳ್ಳತನ ಮತ್ತು ಹಲ್ಲೆ ಸೇರಿದಂತೆ ಅಪರಾಧ ಇತಿಹಾಸವನ್ನು ಹೊಂದಿದ್ದಾನೆ. ನಾಗಮಲ್ಲಯ್ಯ ತುಂಬಾ ಮೃದು ಸ್ವಭಾವದವರಾಗಿದ್ದರು. ಈ ಊಹಿಸಲಾಗದ ಘಟನೆ ಹಠಾತ್ ಮಾತ್ರವಲ್ಲ, ಇದು ಅತ್ಯಂತ ಆಘಾತ ಉಂಟು ಮಾಡಿದೆ ಎಂದು ಸ್ನೇಹಿತರು ಹೇಳಿದ್ದಾರೆ.
ವಿಡಿಯೋ
🚨 A man was beheaded over a washing machine in Dallas.
50-year-old Indian-American, Chandra Nagamallaiah, lost his life to cold-blooded racism.Inhuman. Heartless. Unforgivable.
And yet, some Indians will a find a way to justify this https://t.co/gDF0USzMea
— Aagastya_Thaker (@aagastyat) September 11, 2025
ಹೆಂಡತಿ ಮತ್ತು ಮಗ ಮಧ್ಯಪ್ರವೇಶಿಸಲು ಓಡಿಹೋಗಿದ್ದಾರೆ , ಆದರೆ ಆರೋಪಿ ಅವರನ್ನು ಪಕ್ಕಕ್ಕೆ ತಳ್ಳಿದ್ದಾನೆ . ನಾಗಮಲ್ಲಯ್ಯ ಅವರ ಶಿರಚ್ಛೇದ ಮಾಡಿದ್ದಾನೆ ಮತ್ತು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಎಲ್ಲವೂ ದಾಖಲಾಗಿದೆ. ಡಲ್ಲಾಸ್ ಅಗ್ನಿಶಾಮಕ ದಳದ ಸಿಬ್ಬಂದಿ ಆರೋಪಿಯನ್ನು ಬೆನ್ನಟ್ಟಿದ್ದರು. ಪೊಲೀಸರು ಬಂದಾಗ, ಆರೋಪಿಯನ್ನು ಸ್ಥಳದಲ್ಲೇ ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಕೊಬೊಸ್-ಮಾರ್ಟಿನೆಜ್ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ದಾಳಿ ಪೂರ್ವಯೋಜಿತವೋ ಅಥವಾ ಹಠಾತ್ ಕೋಪವೋ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:14 am, Fri, 12 September 25