AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್-ರಷ್ಯಾ ಯುದ್ಧದಿಂದ ಹೆಚ್ಚು ಲಾಭ ಮಾಡುತ್ತಿರೋದು ಭಾರತವಲ್ಲ, ಚೀನಾವಲ್ಲ; ಅಮೆರಿಕಕ್ಕೆ ಹಣದ ಹೊಳೆ?

Ukraine Russia war becomes cash cow for US: ರಷ್ಯಾದಿಂದ ಕಡಿಮೆ ಬೆಲೆಗೆ ತೈಲವನ್ನು ಭಾರತ ಖರೀದಿಸುತ್ತಿದೆ ಎಂದು ಅಮೆರಿಕ ಇನ್ನಿಲ್ಲದಂತೆ ಕಾಡುತ್ತಿದೆ. ಆದರೆ, ವಾಸ್ತವದಲ್ಲಿ ಉಕ್ರೇನ್ ಯುದ್ಧದಿಂದ ಅತಿಹೆಚ್ಚು ಲಾಭ ಮಾಡುತ್ತಿರುವುದು ಅಮೆರಿಕವೇ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಅಮೆರಿಕದ ಡಿಫೆನ್ಸ್ ಕಂಪನಿಗಳು ಕಳೆದ ಮೂರು ವರ್ಷದಲ್ಲಿ ಸಿಕ್ಕಾಪಟ್ಟೆ ಬ್ಯುಸಿನೆಸ್ ಮಾಡುತ್ತಿವೆ.

ಉಕ್ರೇನ್-ರಷ್ಯಾ ಯುದ್ಧದಿಂದ ಹೆಚ್ಚು ಲಾಭ ಮಾಡುತ್ತಿರೋದು ಭಾರತವಲ್ಲ, ಚೀನಾವಲ್ಲ; ಅಮೆರಿಕಕ್ಕೆ ಹಣದ ಹೊಳೆ?
ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 12, 2025 | 12:07 PM

Share

ನವದೆಹಲಿ, ಸೆಪ್ಟೆಂಬರ್ 12: ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ (Russia Ukraine war) ಬೇರೆ ಹಲವು ದೇಶಗಳು ಲಾಭ ಮಾಡಿಕೊಳ್ಳುತ್ತಿರುವುದು ಹೌದು. ಭಾರತ ಮತ್ತು ಚೀನಾ ದೇಶಗಳಿಗೆ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಸಿಗುತ್ತಿದೆ. ಇದೇ ವಿಚಾರಕ್ಕೆ ಅಮೆರಿಕದವರು ಭಾರತದ ಬಗ್ಗೆ ತಗಾದೆ ಎತ್ತುತ್ತಾ ಟ್ಯಾರಿಫ್ ಮೇಲೆ ಟ್ಯಾರಿ ಹೇರಿಕೆ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ, ರಷ್ಯನ್ ತೈಲ ಖರೀದಿಸಿ ಭಾರತ ಮಾಡುತ್ತಿರುವ ಲಾಭ ಅಲ್ಪ. ಇದಕ್ಕೆ ಹೋಲಿಸಿದರೆ ಅಮೆರಿಕವೇ ಅತಿಹೆಚ್ಚು ಲಾಭ ಮಾಡಿಕೊಳ್ಳುತ್ತಿದೆ. ಯೂರೇಷಿಯನ್ ಟೈಮ್ಸ್ ವೆಬ್​ಸೈಟ್​ನಲ್ಲಿ ಈ ಬಗ್ಗೆ ವರದಿಯೊಂದು ಪ್ರಕಟವಾಗಿದೆ.

ಭಾರತಕ್ಕೆ 17 ಬಿಲಿಯನ್ ಡಾಲರ್ ಹಣ ಉಳಿತಾಯ

2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿತು. ಅದಾದ ಬಳಿಕ ಅಮೆರಿಕವು ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿತು. ರಷ್ಯಾಗೆ ಆದಾಯ ಮೂಲ ಕ್ಷೀಣಗೊಂಡಿತು. ತನ್ನಲ್ಲಿದ್ದ ತೈಲವನ್ನು ಕಡಿಮೆ ಬೆಲೆಗೆ ಮಾರಾಟಕ್ಕಿಟ್ಟಿತು. ಕಳೆದ ಮೂರು ವರ್ಷದಲ್ಲಿ ರಷ್ಯಾದಿಂದ ರಫ್ತಾದ ತೈಲದಲ್ಲಿ ಚೀನಾಗೆ ಶೇ. 47, ಭಾರತಕ್ಕೆ ಶೇ. 38ರಷ್ಟು ಹೋಗಿದೆ. ಭಾರತವು ಈ ಮೂರು ವರ್ಷದಲ್ಲಿ ರಷ್ಯನ್ ತೈಲ ಖರೀದಿಯಿಂದಾಗಿ ತೈಲ ಆಮದಿನಲ್ಲಿ 17 ಬಿಲಿಯನ್ ಡಾಲರ್ ಹಣ ಉಳಿಸಿರಬಹುದು ಎನ್ನುವ ಅಂದಾಜಿದೆ.

ಇದನ್ನೂ ಓದಿ: ಚೀನಾದಿಂದ ಬ್ಯಾಕ್ಟೀರಿಯಾ ಬಳಸಿ ಬ್ಯಾಟರಿ; ಭಾರತದಿಂದ ಗಾಳಿಯಿಂದಲೇ ಬ್ಯಾಟರಿ; ಹೊಸ ಆವಿಷ್ಕಾರ?

ಅಮೆರಿಕದ ಡಿಫೆನ್ಸ್ ಕಂಪನಿಗಳಿಗೆ ಭರ್ಜರಿ ಆದಾಯ

ರಷ್ಯಾ ಉಕ್ರೇನ್ ಯುದ್ಧ ಶುರುವಾದಾಗಿನಿಂದ ಅಮೆರಿಕದ ಡಿಫೆನ್ಸ್ ಕಂಪನಿಗಳಿಗೆ ಸಖತ್ ಬ್ಯುಸಿನೆಸ್ ಆಗುತ್ತಿದೆ. ಭರಪೂರ ಲಾಭ ಮಾಡುತ್ತಿವೆ ಎನ್ನಲಾಗಿದೆ. ಅಮೆರಿಕದ ವಿದೇಶೀ ಮಿಲಿಟರಿ ಮಾರಾಟ ವ್ಯವಸ್ಥೆ ಅಡಿ ರಫ್ತಾದ ಶಸ್ತ್ರಾಸ್ತ್ರಗಳ ಮೌಲ್ಯ ನಿಜಕ್ಕೂ ಅಚ್ಚರಿಗೊಳಿಸುತ್ತದೆ.

ಈ ಎಫ್ಎಂಎಸ್ ವ್ಯವಸ್ಥೆಯಲ್ಲಿ 2022ರಲ್ಲಿ 50.9 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಅಮೆರಿಕದ ಕಂಪನಿಗಳು ರಫ್ತು ಮಾಡಿದ್ದವು. 2024ರಲ್ಲಿ ಇದು 117.9 ಬಿಲಿಯನ್ ಡಾಲರ್​ಗೆ ಏರಿದೆ. ಎರಡಕ್ಕೂ ಹೆಚ್ಚು ಪಟ್ಟುಗಳಷ್ಟು ರಫ್ತು ಏರಿದೆ.

ಇನ್ನು, ನೇರ ಕಮರ್ಷಿಯಲ್ ಮಾರಾಟ 2023ರಲ್ಲಿ 157.5 ಬಿಲಿಯನ್ ಡಾಲರ್ ಇದ್ದದ್ದು 2024ರಲ್ಲಿ 200.8 ಬಿಲಿಯನ್ ಡಾಲರ್ ಮುಟ್ಟಿದೆ. ಒಂದು ವರ್ಷದಲ್ಲಿ ಶೇ. 27.6ರಷ್ಟು ಹೆಚ್ಚಳವಾಗಿದೆ.

ಈ ಅವಧಿಯಲ್ಲಿ ಅಮೆರಿಕದಿಂದ ರಫ್ತಾದ ಹೆಚ್ಚಿನ ಶಸ್ತ್ರಾಸ್ತ್ರಗಳು ಉಕ್ರೇನ್ ಹಾಗೂ ಯೂರೋಪಿಯನ್ ಯೂನಿಯನ್​ಗೆ ಹೋಗಿವೆ.

ಇದನ್ನೂ ಓದಿ: ಎಚ್​ಎಎಲ್​ಗೆ ಹೊಸ ಜಿಇ-404 ಎಂಜಿನ್; ಭಾರತೀಯ ಸೇನೆಗೆ ಸದ್ಯದಲ್ಲೇ ಹೊಸ ತೇಜಸ್ ಎಂಕೆ1ಎ ಯುದ್ಧವಿಮಾನಗಳು

ಯೂರೋಪ್​ಗೆ ರಷ್ಯಾದ ಭಯ

ಅಮೆರಿಕ ದೇಶದಿಂದ ಉಕ್ರೇನ್ ಮತ್ತು ಐರೋಪ್ಯ ದೇಶಗಳು ಹಣ ಕೊಟ್ಟು ಶಸ್ತ್ರಾಸ್ತ್ರ ಖರೀದಿಸುತ್ತಿವೆ. ಯೂರೋಪ್​ಗೆ ರಷ್ಯಾದ ಭಯ ಇರುವುದರಿಂದ ಇಷ್ಟ ಬಂದಷ್ಟು ಶಸ್ತ್ರಾಸ್ತ್ರ ಖರೀದಿ ಮಾಡುತ್ತಿದೆ. ಅಮೆರಿಕದ ಟಾಪ್-5 ಡಿಫೆನ್ಸ್ ಕಂಪನಿಗಳಾದ ಲಾಕ್​ಹೀಡ್ ಮಾರ್ಟಿನ್, ಆರ್​ಟಿಎಕ್ಸ್, ಜನರಲ್ ಡೈನಾಮಿಕ್ಸ್, ನಾರ್ಥ್​ರಾಪ್ ಗ್ರುಮನ್ ಮತ್ತು ಬೋಯಿಂಗ್ ಸಾಕಷ್ಟು ಬ್ಯುಸಿನೆಸ್ ಮಾಡಿವೆ. ಇನ್ನೂ ಹಲವು ಹೊಸ ಕಂಪನಿಗಳಿಗೂ ಒಳ್ಳೆಯ ಬ್ಯುಸಿನೆಸ್ ಸಿಕ್ಕಿದೆ.

ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ವರದಿಯೊಂದರ ಪ್ರಕಾರ, 2023ರಲ್ಲಿ ಅಮೆರಿಕದ ಖಾಸಗಿ ಡಿಫೆನ್ಸ್ ಗುತ್ತಿಗೆ ಕಂಪನಿಗಳು ವಿದೇಶಗಳಿಗೆ ಮಾರಾಟ ಮಾಡಿದ ಉಪಕರಣಗಳ ಮೌಲ್ಯ 238.4 ಬಿಲಿಯನ್ ಡಾಲರ್ ಇತ್ತು. 2024ರಲ್ಲಿ ಇದು 318.7 ಬಿಲಿಯನ್ ಡಾಲರ್​ಗೆ ಏರಿದೆ. ರಷ್ಯಾ ಉಕ್ರೇನ್ ಯುದ್ಧದಿಂದ ಯಾವ ದೇಶ ಅತಿಹೆಚ್ಚು ಲಾಭ ಮಾಡಿದೆ ಎಂಬುದು ಈ ಮೇಲಿನ ಅಂಕಿ ಅಂಶ ಸ್ಪಷ್ಟವಾಗಿ ತಿಳಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!