AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​ಎಎಲ್​ಗೆ ಹೊಸ ಜಿಇ-404 ಎಂಜಿನ್; ಭಾರತೀಯ ಸೇನೆಗೆ ಸದ್ಯದಲ್ಲೇ ಹೊಸ ತೇಜಸ್ ಎಂಕೆ1ಎ ಯುದ್ಧವಿಮಾನಗಳು

HAL receives 3rd GE engine for its Tejas Mk-1A: ತೇಜಸ್ ಯುದ್ಧವಿಮಾನದ ಡೆಲಿವರಿ ಕೊಡಲು ವಿಳಂಬ ಮಾಡುತ್ತಿದ್ದ ಎಚ್​ಎಎಲ್ ಬಗ್ಗೆ ಭಾರತೀಯ ಸೇನೆ ಅಸಮಾಧಾನಗೊಂಡಿತು. ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದ್ದ ಎಂಜಿನ್ ಸಮಸ್ಯೆ ನಿವಾರಣೆ ಆಗಿದೆ. ಅಮೆರಿಕದ ಜಿಇ ಕಂಪನಿಯು ಎಂಜಿನ್ ಡೆಲಿವರಿ ಕೊಡಲು ಆರಂಭಿಸಿದೆ.

ಎಚ್​ಎಎಲ್​ಗೆ ಹೊಸ ಜಿಇ-404 ಎಂಜಿನ್; ಭಾರತೀಯ ಸೇನೆಗೆ ಸದ್ಯದಲ್ಲೇ ಹೊಸ ತೇಜಸ್ ಎಂಕೆ1ಎ ಯುದ್ಧವಿಮಾನಗಳು
ಎಲ್​ಸಿಎ ತೇಜಸ್ ಏರ್​ಕ್ರಾಫ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 11, 2025 | 6:58 PM

Share

ಬೆಂಗಳೂರು, ಸೆಪ್ಟೆಂಬರ್ 11: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿಯ ಮಾನ ಮರ್ಯಾದೆಯ ಪ್ರಶ್ನೆಯಾಗಿದ್ದ ಎಲ್​ಸಿಎ ತೇಜಸ್ ಎಂಕೆ1ಎ ಯುದ್ಧ ವಿಮಾನಗಳ (LCA Tejas fighter jet) ಒಂದೊಂದೇ ತಯಾರಿಕೆ ಮತ್ತು ಡೆಲಿವರಿ ಸದ್ಯದಲ್ಲೇ ಶುರುವಾಗುವಂತೆ ತೋರುತ್ತಿದೆ. ತೇಜಸ್ ವಿಮಾನದ ತಯಾರಿಕೆಗೆ ಇದ್ದ ಅಡಚಣೆಯೊಂದು ನಿವಾರಣೆಯಾಗುತ್ತಿದೆ. ಈ ವಿಮಾನಕ್ಕೆ ಬೇಕಾಗಿರುವ ಎಂಜಿನ್ ಅನ್ನು ಅಮೆರಿಕದ ಜಿಇ ಸಂಸ್ಥೆ ಸರಬರಾಜು ಮಾಡುತ್ತಿದೆ. ಇಂದು ಗುರುವಾರ ಎಚ್​ಎಎಲ್ ಮೂರನೇ ಜಿಇ-404 ಎಂಜಿನ್ (GE 404 engine) ಅನ್ನು ಪಡೆದಿದೆ.

ಸೆಪ್ಟೆಂಬರ್ ಕೊನೆಯಲ್ಲಿ ನಾಲ್ಕನೇ ಎಂಜಿನ್ ಸರಬರಾಜಾಗಲಿದೆ ಎಂದು ಎಚ್​ಎಎಲ್ ಹೇಳಿಕೊಂಡಿದೆ. ಇದರೊಂದಿಗೆ, ಎಲ್​ಸಿಎ ಎಂಕೆ1ಎ ಯುದ್ಧ ವಿಮಾನಗಳ ಡೆಲಿವರಿ ಕಾರ್ಯ ಸುಗಮಗೊಳ್ಳಲಿದೆ.

ಇದನ್ನೂ ಓದಿ: ಭಾರತದ 15 ವರ್ಷದ ಭರ್ಜರಿ ಡಿಫೆನ್ಸ್ ಪ್ಲಾನ್; ಯುದ್ಧವೆಂದರೆ ಬಾಹ್ಯಾಕಾಶಕ್ಕೂ ಸೈ, ಎಐಗೂ ಸೈ

ಮಹಾರಾಷ್ಟ್ರದ ನಾಶಿಕ್​ನಲ್ಲಿ ಎಚ್​ಎಎಲ್ ತನ್ನ ಎಲ್​ಸಿಎ ತೇಜಸ್ ಎಂಕೆ1ಎ ಯುದ್ಧ ವಿಮಾನದ ತಯಾರಿಕೆಗೆ ಹೊಸ ಘಟಕ ನಿರ್ಮಿಸಿದೆ. ಇದರಲ್ಲಿ ಜುಲೈನಲ್ಲೇ ಮೊದಲ ವಿಮಾನ ತಯಾರಿಕೆಗೊಂಡು ಬಿಡುಗಡೆ ಆಗಬೇಕಿತ್ತು. ಇನ್ನೂ ಆಗಿಲ್ಲ. ಎಂಜಿನ್ ಸಿಕ್ಕದೇ ಇರುವುದು, ದೇಶೀಯ ರಾಡಾರ್ ಅಳವಡಿಕೆಯಲ್ಲಿ ವಿಳಂಬ ಆಗಿರುವುದು, ಇದರಿಂದ ವಿಮಾನ ಬಿಡುಗಡೆ ನಿರೀಕ್ಷಿತ ದಿನದಂದು ಸಾಧ್ಯವಾಗಿಲ್ಲ.

ಈಗ ಮೂರನೇ ಜಿಇ ಎಂಜಿನ್ ಬಂದಿರುವುದರಿಂದ ಶೀಘ್ರದಲ್ಲೇ ತೇಜಸ್ ವಿಮಾನ ತಯಾರಾಗಿ ಹೊರಗೆ ಬರುವ ನಿರೀಕ್ಷೆ ಇದೆ. ಎಚ್​ಎಎಲ್ ಬೆಂಗಳೂರಿನಲ್ಲಿ ಎರಡು, ಮತ್ತು ನಾಶಿಕ್​ನಲ್ಲಿ ಒಂದು ಎಲ್​ಸಿಎ ತಯಾರಿಕಾ ಘಟಕ ಹೊಂದಿದೆ. ನಾಶಿಕ್​ನಲ್ಲಿ ವರ್ಷಕ್ಕೆ ಎಂಟು ಯುದ್ಧ ವಿಮಾನ ತಯಾರಾಗುವ ಸಾಮರ್ಥ್ಯದ ಘಟಕ ನಿರ್ಮಿಸಲಾಗಿದೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಅಗ್ನಿ-5; ಅಮೆರಿಕವನ್ನೂ ತಲುಪಬಲ್ಲುದು ಈ ಮಿಸೈಲ್

ಎಲ್ ಅಂಡ್ ಟಿ ಸೇರಿದಂತೆ ಖಾಸಗಿ ಸಂಸ್ಥೆಗಳನ್ನೂ ತೇಜಸ್ ಯುದ್ದ ವಿಮಾನ ತಯಾರಿಕೆಗೆ ಎಚ್​ಎಎಲ್ ಬಳಸಿಕೊಳ್ಳುತ್ತಿದೆ. ಇದರೊಂದಿಗೆ, ಎಚ್​ಎಎಲ್​ಗೆ ವರ್ಷಕ್ಕೆ 30 ತೇಜಸ್ ವಿಮಾನ ತಯಾರಿಸುವ ಸಾಮರ್ಥ್ಯ ಹೊಂದಿದೆ.

ಎಲ್​ಸಿಎ ತೇಜಸ್ ಎಂಕೆ1 ವಿಮಾನಗಳಿಗೆ ಅಮೆರಿಕದ ಜಿಇ ಸಂಸ್ಥೆ ಎಂಜಿನ್ ಒದಗಿಸುತ್ತದೆ. ಒಟ್ಟು 99 ಎಂಜಿನ್​ಗಳಿಗೆ ಎಚ್​ಎಎಲ್ ಆರ್ಡರ್ ನೀಡಿದೆ. ಜಿಇ ಈಗಾಗಲೇ ಮೂರು ಎಂಜಿನ್ ನೀಡಿದೆ. ಈ ಹಣಕಾಸು ವರ್ಷದಲ್ಲಿ 12 ಎಂಜಿನ್ ಡೆಲಿವರಿ ನೀಡುವ ನಿರೀಕ್ಷೆ ಇದೆ. ಎಚ್​ಎಎಲ್ ಈಗಾಗಲೇ ಲಭ್ಯ ಇರುವ ಎಂಜಿನ್​ಗಳನ್ನೇ ಬಳಸಿ ಈ ವರ್ಷ 12 ವಿಮಾನಗಳನ್ನು ತಯಾರಿಸುವ ಗುರಿ ಇಟ್ಟುಕೊಂಡಿದೆ. ತೇಜಸ್ ಎಲ್​ಸಿಎ ಎಂಕೆ1 ಯುದ್ಧವಿಮಾನದ ಸುಧಾರಿತ ಆವೃತ್ತಿ ಎಂಕೆ1ಎ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ