AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rate Today Bangalore: ನಿಲ್ಲದ ಚಿನ್ನ, ಬೆಳ್ಳಿ ಬೆಲೆ ಏರಿಕೆ ಓಟ; ಸಾರ್ವಕಾಲಿಕ ದಾಖಲೆ

Bullion Market 2025 September 12th: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಶುಕ್ರವಾರ ಭರ್ಜರಿ ಏರಿಕೆ ಕಂಡಿವೆ. ಎರಡೂ ಕೂಡ ಸಾರ್ವಕಾಲಿಕ ಗರಿಷ್ಠ ಬೆಲೆ ದಾಖಲೆ ಸ್ಥಾಪಿಸಿವೆ. ಆಭರಣ ಚಿನ್ನದ ಬೆಲೆ 10,130 ರೂನಿಂದ 10,200 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 11,128 ರೂಗೆ ಏರಿದೆ. ಬೆಂಗಳೂರು, ಮುಂಬೈ ಮೊದಲಾದ ಕಡೆ ಬೆಳ್ಳಿ ಬೆಲೆ 130 ರೂನಿಂದ 132 ರೂಗೆ ಏರಿದರೆ, ಚೆನ್ನೈ ಮೊದಲಾದೆಡೆ ಬೆಲೆ 142 ರೂಗೆ ಹೆಚ್ಚಿದೆ.

Gold Rate Today Bangalore: ನಿಲ್ಲದ ಚಿನ್ನ, ಬೆಳ್ಳಿ ಬೆಲೆ ಏರಿಕೆ ಓಟ; ಸಾರ್ವಕಾಲಿಕ ದಾಖಲೆ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 12, 2025 | 11:19 AM

Share

ಬೆಂಗಳೂರು, ಸೆಪ್ಟೆಂಬರ್ 12: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರತದಲ್ಲಿ ಮತ್ತೆ ಹೊಸ ದಾಖಲೆ ಬರೆದಿವೆ. ಹೊಸ ಮೈಲಿಗಲ್ಲು ಮುಟ್ಟಿವೆ. ಆಭರಣ ಚಿನ್ನದ ಬೆಲೆ (gold rate) ಇತಿಹಾಸದಲ್ಲೇ ಮೊದಲ ಬಾರಿಗೆ ಗ್ರಾಮ್​ಗೆ 10,200 ರೂ ಗಡಿ ದಾಟಿದೆ. ಅಪರಂಜಿ ಚಿನ್ನವೂ ಕೂಡ 11,100 ರೂ ಗಡಿ ದಾಟಿದೆ. ಬೆಳ್ಳಿ ಬೆಲೆಯೂ 142 ರೂಗಳ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಇಂದು ಶುಕ್ರವಾರ ಚಿನ್ನದ ಬೆಲೆ ಏರಿಕೆ ಆಗಿಲ್ಲ. ಭಾರತದಲ್ಲಿ ಮಾತ್ರ ಭರ್ಜರಿ ಏರಿಕೆ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,02,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,11,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 13,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,02,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 13,200 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 14,200 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 12ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,02,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,11,280 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 82,880 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,320 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,02,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,11,280 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,320 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 1,02,000 ರೂ
  • ಚೆನ್ನೈ: 1,02,000 ರೂ
  • ಮುಂಬೈ: 1,02,000 ರೂ
  • ದೆಹಲಿ: 1,02,150 ರೂ
  • ಕೋಲ್ಕತಾ: 1,02,000 ರೂ
  • ಕೇರಳ: 1,02,000 ರೂ
  • ಅಹ್ಮದಾಬಾದ್: 1,02,050 ರೂ
  • ಜೈಪುರ್: 1,02,150 ರೂ
  • ಲಕ್ನೋ: 1,02,150 ರೂ
  • ಭುವನೇಶ್ವರ್: 1,02,000 ರೂ

ಇದನ್ನೂ ಓದಿ: ಗೋಲ್ಡ್ ಬಾಂಡ್ ಸ್ಕೀಮ್​ನಲ್ಲಿ ಹಣ ಹಾಕಿದವರಿಗೆ ಭರ್ಜರಿ ಲಾಭ; ಎಸ್​ಜಿಬಿ 2019-20 ಸರಣಿಯ ಪ್ರೀಮೆಚ್ಯೂರ್ ರಿಡೆಂಪ್ಷನ್ ಘೋಷಣೆ

ಇದನ್ನೂ ಓದಿ
Image
ಷೇರು, ಚಿನ್ನದ ಮುಂದೆ ರಿಯಲ್ ಎಸ್ಟೇಟ್ ನಗಣ್ಯ?
Image
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
Image
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
Image
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,750 ರಿಂಗಿಟ್ (99,700 ರುಪಾಯಿ)
  • ದುಬೈ: 4,050 ಡಿರಾಮ್ (97,370 ರುಪಾಯಿ)
  • ಅಮೆರಿಕ: 1,130 ಡಾಲರ್ (99,870 ರುಪಾಯಿ)
  • ಸಿಂಗಾಪುರ: 1,448 ಸಿಂಗಾಪುರ್ ಡಾಲರ್ (99,790 ರುಪಾಯಿ)
  • ಕತಾರ್: 4,060 ಕತಾರಿ ರಿಯಾಲ್ (98,440 ರೂ)
  • ಸೌದಿ ಅರೇಬಿಯಾ: 4,130 ಸೌದಿ ರಿಯಾಲ್ (97,290 ರುಪಾಯಿ)
  • ಓಮನ್: 429.50 ಒಮಾನಿ ರಿಯಾಲ್ (98,590 ರುಪಾಯಿ)
  • ಕುವೇತ್: 330.20 ಕುವೇತಿ ದಿನಾರ್ (95,540 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 13,200 ರೂ
  • ಚೆನ್ನೈ: 14,200 ರೂ
  • ಮುಂಬೈ: 13,200 ರೂ
  • ದೆಹಲಿ: 13,200 ರೂ
  • ಕೋಲ್ಕತಾ: 13,200 ರೂ
  • ಕೇರಳ: 14,200 ರೂ
  • ಅಹ್ಮದಾಬಾದ್: 13,200 ರೂ
  • ಜೈಪುರ್: 13,200 ರೂ
  • ಲಕ್ನೋ: 13,200 ರೂ
  • ಭುವನೇಶ್ವರ್: 14,200 ರೂ
  • ಪುಣೆ: 13,200

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ