AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆ. 11ರಂದು ಪತಂಜಲಿ ಫುಡ್ಸ್ ಷೇರುಬೆಲೆ ಶೇ. 63ರಷ್ಟು ಕುಸಿಯಲು ಏನು ಕಾರಣ? ಬೋನಸ್ ಷೇರು ಪರಿಣಾಮ

Patanjali Foods bonus share: ಪತಂಜಲಿ ಫುಡ್ಸ್ 2:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ಬಿಡುಗಡೆ ಮಾಡಿದೆ. ಇದಕ್ಕಾಗಿ ಸೆಪ್ಟೆಂಬರ್ 11, ರೆಕಾರ್ಡ್ ಡೇಟ್ ಎಂದು ನಿಗದಿಯಾಗಿತ್ತು. ಒಂದು ಷೇರಿಗೆ ಎರಡು ಷೇರು ಹೆಚ್ಚುವರಿಯಾಗಿ ಸಿಕ್ಕಿದೆ. 100 ಷೇರು ಹೊಂದಿದ್ದವರು ಈಗ 300 ಷೇರುಗಳ ಒಡೆಯರಾಗುತ್ತಾರೆ. ಬೋನಸ್ ವಿತರಣೆಗೆ ಮೊದಲು ಪತಂಜಲಿ ಫುಡ್ಸ್ ಷೇರುಬೆಲೆ 1,802.25 ರೂ ಇತ್ತು. ರೆಕಾರ್ಡ್ ಡೇಟ್​ನಂದು ಷೇರುಬೆಲೆ 595 ರೂ ಆಗಿದೆ. ಆದರೆ, ಷೇರು ಸಂಖ್ಯೆ ಹೆಚ್ಚಿದೆ.

ಸೆ. 11ರಂದು ಪತಂಜಲಿ ಫುಡ್ಸ್ ಷೇರುಬೆಲೆ ಶೇ. 63ರಷ್ಟು ಕುಸಿಯಲು ಏನು ಕಾರಣ? ಬೋನಸ್ ಷೇರು ಪರಿಣಾಮ
ಪತಂಜಲಿ ಫುಡ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 12, 2025 | 1:13 PM

Share

ನವದೆಹಲಿ, ಸೆಪ್ಟೆಂಬರ್ 12: ನಿನ್ನೆ ಗುರುವಾರ (ಸೆ. 11) ಪತಂಜಲಿ ಫುಡ್ಸ್ ಷೇರುಬೆಲೆ (Patanjali Foods share price) ಶೇ. 60-65ರಷ್ಟು ಕುಸಿತ ಕಂಡಿತು. ಸೆಪ್ಟೆಂಬರ್ 10ರಂದು 1,802.25 ರೂಗೆ ಮುಕ್ತಾಯಗೊಂಡಿದ್ದ ಪತಂಜಲಿ ಷೇರುಬೆಲೆ, ಗುರುವಾರ ಬೆಳಗ್ಗೆ 595 ರೂಗೆ ಆರಂಭಗೊಂಡಿತ್ತು. ಇದಕ್ಕೆ ಕಾರಣ ಬೋನಸ್ ಷೇರುಗಳು. ಪತಂಜಲಿ ಫುಡ್ಸ್ ಸಂಸ್ಥೆ 2:1 ಬೋನಸ್ ಷೇರು ನೀಡಿದೆ. ಒಂದು ಷೇರಿಗೆ ಪ್ರತಿಯಾಗಿ ಎರಡು ಹೆಚ್ಚುವರಿ ಷೇರುಗಳನ್ನು ವಿತರಿಸಲಾಗುತ್ತಿದೆ. ನಿಮ್ಮ ಬಳಿ ಪತಂಜಲಿ ಫುಡ್ಸ್​ನ 100 ಷೇರು ಇದ್ದರೆ, ಬೋನಸ್ ಷೇರುಗಳ ವಿತರಣೆ ಬಳಿಕ ನಿಮ್ಮ ಷೇರುಗಳ ಸಂಖ್ಯೆ 300 ಆಗಿರುತ್ತದೆ.

ನಿನ್ನೆ ಗುರುವಾರಕ್ಕೆ ಬೋನಸ್ ವಿತರಣೆಗೆ ದಾಖಲು ದಿನವಾಗಿ (ರೆಕಾರ್ಡ್ ಡೇಟ್) ನಿಗದಿ ಮಾಡಲಾಗಿತ್ತು. ಈ ದಿನಾಂಕದಲ್ಲಿ ಯಾರು ಷೇರು ಮಾಲಕತ್ವ ಹೊಂದಿರುತ್ತಾರೋ ಅವರಿಗೆ ಬೋನಸ್ ಷೇರುಗಳು ಸಿಗುತ್ತವೆ. ಸೆಪ್ಟೆಂಬರ್ 11ರ ಬೆಳಗ್ಗೆ ಯಾರ ಡೀಮ್ಯಾಟ್ ಅಕೌಂಟ್​ಗಳಲ್ಲಿ ಪತಂಜಲಿ ಷೇರುಗಳು ಜಮೆ ಆಗಿರುತ್ತದೋ ಅವರಿಗೆ ಮಾತ್ರವೇ ಬೋನಸ್ ಷೇರು ಸಿಗುವುದು.

ಇದನ್ನೂ ಓದಿ: ಚರ್ಮದ ಆರೈಕೆಗೆ ಪತಂಜಲಿಯ ದಿವ್ಯ ಕಾಯಕಲ್ಪ ತೈಲಕ್ಕಿಂತ ಉತ್ತಮ ಮದ್ದು ಇನ್ನೊಂದಿಲ್ಲ

ಬೋನಸ್ ಷೇರು ಸಿಕ್ಕಿದರೂ ಒಟ್ಟಾರೆ ಷೇರು ಮೌಲ್ಯದಲ್ಲಿ ಬದಲಾವಣೆ ಆಗುವುದಿಲ್ಲ ಎಂಬುದು ಗಮನಾರ್ಹ. ಒಂದು ಷೇರು ಮೂರು ಷೇರುಗಳಾಗಿ ವಿಭಜನೆಯಾದಂತೆ. 1,800 ರೂ ಮೌಲ್ಯದ ಒಂದು ಷೇರು ತಲಾ 600 ರೂ ಮೌಲ್ಯದ ಮೂರು ಷೇರುಗಳಾಗುತ್ತವೆ. ಮೂರು ಷೇರುಗಳಿದ್ದರೂ ಒಟ್ಟಾರೆ ಷೇರುಗಳ ಮೌಲ್ಯ 1,800 ರೂ ಆಗಿರುತ್ತದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಪತಂಜಲಿ ಫುಡ್ಸ್ ಷೇರುಗಳ ಮೌಲ್ಯ ಕಡಿಮೆ ಆದರೂ ಅದರ ಫೇಸ್​ವ್ಯಾಲ್ಯೂ ಎರಡೂನಲ್ಲೇ ಮುಂದುವರಿಯುತ್ತದೆ. ಡಿವಿಡೆಂಡ್ ಪ್ರಕಟವಾಗುವಾಗ ಹೂಡಿಕೆದಾರರಿಗೆ ಹೆಚ್ಚಿನ ಲಾಭ ಸಿಗಲು ಸಾಧ್ಯವಾಗುತ್ತದೆ. ಹಾಗೆಯೇ, ಬೋನಸ್ ಷೇರುಗಳ ವಿತರಣೆಯಿಂದ ಕಂಪನಿಗೆ ಆಗುವ ಅನುಕೂಲ ಎಂದರೆ, ಷೇರುಗಳ ಸಂಖ್ಯೆ ಹೆಚ್ಚುತ್ತದೆ ಎಂಬುದು ಒಂದು ಸಂಗತಿ. ಹಾಗೆಯೇ, ಷೇರುಗಳ ಬೆಲೆ ಕಡಿಮೆ ಇದ್ದಾಗ ರೀಟೇಲ್ ಹೂಡಿಕೆದಾರರಿಗೆ ಆಕರ್ಷಕ ಎನಿಸುತ್ತದೆ ಎಂಬುದು ಮತ್ತೊಂದು ಸಂಗತಿ. ಇದರಿಂದ ಖರೀದಿ ಆಕರ್ಷಣೆ ಹೆಚ್ಚುತ್ತದೆ.

ಪತಂಜಲಿ ಸಂಸ್ಥೆಯ ಹಣಕಾಸು ಸ್ಥಿತಿ ಉತ್ತಮ

ಬೋನಸ್ ಷೇರುಗಳನ್ನು ನೀಡಿದ ನಂತರ, ಪತಂಜಲಿ ಫುಡ್ಸ್‌ನ ಒಟ್ಟು ಷೇರು ಬಂಡವಾಳ 108.75 ಕೋಟಿ ಷೇರುಗಳಿಗೆ ಏರಿದೆ. ಕಂಪನಿಯು ಒಟ್ಟು 72.50 ಕೋಟಿ ಬೋನಸ್ ಷೇರುಗಳನ್ನು ನೀಡಿದೆ. ಜೂನ್ 30, 2025 ರ ಹೊತ್ತಿಗೆ, ಪ್ರೊಮೋಟರ್​ಗಳು ಹೊಂದಿರುವ ಷೇರು ಮಾಲಕತ್ವ ಪ್ರಮಾಣ 36.70% ರಷ್ಟಾಗಿದೆ. ಪಬ್ಲಿಕ್ ಷೇರುದಾರರ ಪಾಲು 31.17% ಇದೆ. ಪ್ರಮುಖ ಸಾಂಸ್ಥಿಕ ಹೂಡಿಕೆದಾರರಲ್ಲಿ, ಎಲ್‌ಐಸಿ 9.14%, ಮ್ಯೂಚುವಲ್ ಫಂಡ್‌ಗಳು 1.72% ಮತ್ತು ಜಿಕ್ಯೂಜಿ ಪಾಲುದಾರರು 4.56% ಪಾಲನ್ನು ಹೊಂದಿದ್ದಾರೆ. ಇದಲ್ಲದೆ, ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಮತ್ತು ಇತರ ಗ್ರೂಪ್ ಕಂಪನಿಗಳು ಸಹ ಇದರಲ್ಲಿ ಗಮನಾರ್ಹ ಪಾಲನ್ನು ಹೊಂದಿವೆ.

ಇದನ್ನೂ ಓದಿ: ಪತಂಜಲಿ ಉತ್ಪನ್ನದ ಸಹಾಯದಿಂದ ಬರೋಬ್ಬರಿ 70 ಕೆಜಿ ತೂಕ ಇಳಿಸಿಕೊಂಡ ಯುವತಿ

2019 ರಲ್ಲಿ, ಪತಂಜಲಿ ಗ್ರೂಪ್ ಸಂಸ್ಥೆಯು ರುಚಿ ಸೋಯಾ ಎನ್ನುವ ಎಫ್​ಎಂಸಿಜಿ ಕಂಪನಿಯನ್ನು ಖರೀದಿಸಿತು. ನಂತರದ ದಿನಗಳಲ್ಲಿ ಅದನ್ನು ಪತಂಜಲಿ ಫುಡ್ಸ್ ಎಂದು ಮರು ನಾಮಕರಣ ಮಾಡಿತು. ಉತ್ಪನ್ನಗಳ ಸಂಖ್ಯೆ ಹೆಚ್ಚಿಸಿ, ಕ್ರಮೇಣವಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Fri, 12 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ