AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರೇಡಿಂಗ್ ತುಂಬಾ ಗೋಜಲು ಅನಿಸುತ್ತಾ? ನಿತಿನ್ ಕಾಮತ್ ಅವರ ಈ ಟ್ರಿಕ್ ಉಪಯೋಗಿಸಿ

Benefits of creating separate demat accounts for trading and long term investment: ಷೇರುಗಳ ಟ್ರೇಡಿಂಗ್ ಬೇರೆ, ಷೇರುಗಳ ಮೇಲಿನ ಹೂಡಿಕೆ ಬೇರೆ. ಎರಡನ್ನೂ ಒಂದೇ ರೀತಿಯಲ್ಲಿ ನೋಡುವುದು ತಪ್ಪು. ಹಲವು ಜನರು ಅಲ್ಪಾವಧಿ ಹೂಡಿಕೆ ಮತ್ತು ದೀರ್ಘಾವಧಿ ಹೂಡಿಕೆಯ ಷೇರುಗಳನ್ನು ಒಂದೇ ಡೀಮ್ಯಾಟ್ ಅಕೌಂಟ್​ನಲ್ಲಿಟ್ಟು ತಪ್ಪು ಮಾಡುತ್ತಾರೆ. ಝೀರೋಧ ಸಹ-ಸಂಸ್ಥಾಪಕ ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಈ ಬಗ್ಗೆ ಸಲಹೆ ನೀಡಿದ್ದಾರೆ.

ಟ್ರೇಡಿಂಗ್ ತುಂಬಾ ಗೋಜಲು ಅನಿಸುತ್ತಾ? ನಿತಿನ್ ಕಾಮತ್ ಅವರ ಈ ಟ್ರಿಕ್ ಉಪಯೋಗಿಸಿ
ಟ್ರೇಡಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 12, 2025 | 4:48 PM

Share

ಷೇರುಗಳ ನಿಯಮಿತ ವಹಿವಾಟುಗಳೇ ಬೇರೆ, ಹೂಡಿಕೆಯೇ ಬೇರೆ. ಹಲವರು ಎರಡನ್ನೂ ಒಂದೇ ತಕ್ಕಡಿಯಲ್ಲಿ ನೋಡುತ್ತಾರೆ. ಇದು ತಪ್ಪು, ಮಾತ್ರವಲ್ಲ, ಟ್ಯಾಕ್ಸ್ ವಿಚಾರದಲ್ಲಿ ಹಿನ್ನಡೆಯೂ ಆಗಬಹುದು. ಅನೇಕ ಹೂಡಿಕೆದಾರರ ಪೋರ್ಟ್​ಫೋಲಿಯೋದಲ್ಲಿ ಅಲ್ಪಾವಧಿ ಹೂಡಿಕೆ (short term investment) ಮತ್ತು ದೀರ್ಘಾವಧಿ ಹೂಡಿಕೆಯ (long term investment) ಷೇರುಗಳು ಬೆರೆತು ಹೋಗಿರುತ್ತವೆ. ಹೂಡಿಕೆದಾರರು ಕೂಡ ಯಾವ ಷೇರನ್ನು ಉಳಿಸಿಕೊಳ್ಳಬೇಕು, ಯಾವುದನ್ನು ಮಾರಬೇಕು ಎಂದು ಗೊಂದಲ ಪಡುವುದುಂಟು. ಭಾರತದ ಅಗ್ರಮಾನ್ಯ ಬ್ರೋಕರ್ ಸಂಸ್ಥೆಯಾದ ಝೀರೋಧದ ಸಿಇಒ ನಿತಿನ್ ಕಾಮತ್ (Nithin Kamath) ಅವರು ಈ ಗೊಂದಲಕ್ಕೆ ಒಂದು ಸರಳ ಪರಿಹಾರ ಸೂಚಿಸಿದ್ದಾರೆ.

ಹೂಡಿಕೆದಾರರು ಟ್ರೇಡಿಂಗ್​ಗೆ ಒಂದು, ದೀರ್ಘಾವಧಿ ಹೂಡಿಕೆಗೆ ಒಂದು, ಹೀಗೆ ಎರಡು ಪ್ರತ್ಯೇಕ ಡೀಮ್ಯಾಟ್ ಅಕೌಂಟ್ ಹೊಂದುವುದು ಉತ್ತಮ ಎಂದು ಕಾಮತ್ ಸಲಹೆ ನೀಡಿದ್ದಾರೆ. ದೀರ್ಘಾವಧಿ ಹೂಡಿಕೆಗೆ ಸೆಕೆಂಡರಿ ಡೀಮ್ಯಾಟ್ ಅಕೌಂಟ್ ರಚಿಸಬೇಕು ಎಂಬುದು ಅವರ ಸಲಹೆ. ಹೀಗೆ ಮಾಡಿದರೆ, ತೆರಿಗೆ ಉಳಿತಾಯ ಕೂಡ ಸಾಧ್ಯವಂತೆ. ನಿತಿನ್ ಕಾಮತ್ ಝೀರೋಧ ಸ್ಥಾಪಿಸುವ ಮೊದಲು ಈ ಅಂಶವನ್ನು ಪಾಲಿಸುತ್ತಿದ್ದರಂತೆ.

‘ನಾನು ಸಕ್ರಿಯವಾಗಿ ಟ್ರೇಡಿಂಗ್ ಮಾಡುತ್ತಿದ್ದಾಗ ಆಫ್​ಲೈನ್ ಡೀಮ್ಯಾಟ್ ಅಕೌಂಟ್ ಹೊಂದಿದ್ದೆ. ಇದರಲ್ಲಿ ನನ್ನ ಎಲ್ಲಾ ಹೂಡಿಕೆಗಳಿದ್ದವು. ನನ್ನ ಟ್ರೇಡ್​ಗಳಿಗೆ ಒಂದು ಆನ್​ಲೈನ್ ಅಕೌಂಟ್ ಮಾಡಿದ್ದೆ. ಹೂಡಿಕೆಗಳನ್ನು ಟ್ರೇಡ್ ಮಾಡುವ ಸಂದರ್ಭವನ್ನು ಇದು ನಿಗ್ರಹಿಸುತ್ತದೆ’ ಎಂದು ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Janaushadhi centres: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಜನೌಷಧಿ ಕೇಂದ್ರಗಳಿಗೆ ನಿಯಮ ಸಡಿಲ

ದೀರ್ಘಾವಧಿ ಮತ್ತು ಅಲ್ಪಾವಧಿ ಹೂಡಿಕೆಗಳು ಪ್ರತ್ಯೇಕವಾಗಿದ್ದರೆ ಏನು ಅನುಕೂಲ?

ಹೂಡಿಕೆಗೆಂದು ಖರೀದಿಸಲಾಗುವ ಷೇರುಗಳನ್ನು ಪ್ರತ್ಯೇಕ ಡೀಮ್ಯಾಟ್ ಅಕೌಂಟ್​ನಲ್ಲಿ ಇರಿಸುವುದು ಉತ್ತಮ. ಇವು ದೀರ್ಘಾವಧಿ ಇದ್ದರೆ ಉತ್ತಮ ರಿಟರ್ನ್ಸ್ ಕೊಡುವ ಸಾಧ್ಯತೆ ಹೆಚ್ಚು. ಕೆಲ ದಿನಗಳಿಗೋ, ಅಥವಾ ವಾರಗಳಿಗೋ ಇರಿಸಿಕೊಂಡು ಲಾಭಕ್ಕೆ ಮಾರುವ ಉದ್ದೇಶ ಇದ್ದರೆ ಅವನ್ನು ಪ್ರತ್ಯೇಕ ಡೀಮ್ಯಾಟ್ ಅಕೌಂಟ್​ನಲ್ಲಿ ಇಡಬೇಕು. ಇದರಿಂದ ಟ್ಯಾಕ್ಸ್ ಕೂಡ ಉಳಿಸಲು ಸಾಧ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Fri, 12 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ