AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Janaushadhi centres: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಜನೌಷಧಿ ಕೇಂದ್ರಗಳಿಗೆ ನಿಯಮ ಸಡಿಲ

PM Janaushadhi Kendras: ಎರಡು ಜನೌಷಧಿ ಕೇಂದ್ರಗಳ ನಡುವೆ ಕನಿಷ್ಠ ಒಂದು ಕಿಮೀ ಅಂತರ ಇರಬೇಕು ಎನ್ನುವ ನಿಯಮ ಇದೆ. ಆದರೆ, ಬೆಂಗಳೂರು ಸೇರಿದಂತೆ 50ಕ್ಕೂ ಹೆಚ್ಚು ನಗರಗಳಲ್ಲಿ ಈ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ. ಒಂದು ಜನೌಷಧಿ ಕೇಂದ್ರ ಸ್ಥಾಪನೆಯಾಗಿ ಕನಿಷ್ಠ ಎರಡು ವರ್ಷವಾಗಿದ್ದರೆ ಸಮೀಪದಲ್ಲೇ ಮತ್ತೊಂದು ಮಳಿಗೆ ಸ್ಥಾಪಿಸಬಹುದು.

Janaushadhi centres: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಜನೌಷಧಿ ಕೇಂದ್ರಗಳಿಗೆ ನಿಯಮ ಸಡಿಲ
ಜನೌಷಧಿ ಕೇಂದ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 12, 2025 | 3:56 PM

Share

ಬೆಂಗಳೂರು, ಸೆಪ್ಟೆಂಬರ್ 12: ಹೆಚ್ಚು ಬಳಕೆಯ ಔಷಧಗಳನ್ನು ಅಗ್ಗದ ಬೆಲೆಗೆ ಮಾರಲಾಗುವ ಜನೌಷಧಿ ಕೇಂದ್ರಗಳ (Jan Aushadhi Kendra) ಸ್ಥಾಪನೆಗೆ ಇದ್ದ ಕೆಲ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದೆ. ಬೆಂಗಳೂರು ಸೇರಿದಂತೆ ಏಳು ಮೆಟ್ರೋಪೊಲಿಟನ್ ನಗರಗಳು ಹಾಗೂ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಈ ನಿಯಮ ಸಡಿಲಿಕೆ ಮಾಡಲಾಗಿದೆ. ನ್ಯೂಸ್18 ವರದಿ ಪ್ರಕಾರ ಈ ನಗರಗಳಲ್ಲಿ ಎರಡು ಜನೌಷಧಿ ಕೇಂದ್ರಗಳ ನಡುವೆ ಕನಿಷ್ಠ ಒಂದು ಕಿಮೀ ಅಂತರ ಇರಬೇಕು ಎನ್ನುವ ನಿಯಮವನ್ನು ತೆಗೆಯಲಾಗಿದೆ.

ಎರಡು ಜನೌಷಧಿ ಕೇಂದ್ರಗಳ ಮಧ್ಯೆ ಯಾವುದೇ ಅಂತರ ಇರುವ ಅವಶ್ಯಕತೆ ಇಲ್ಲವಾದರೂ, ಎರಡು ವರ್ಷ ಪೂರೈಸದ ಜನೌಷಧಿ ಕೇಂದ್ರದಿಂದ 1 ಕಿಮೀ ಅಂತರದೊಳಗೆ ಮತ್ತೊಂದನ್ನು ಸ್ಥಾಪಿಸುವಂತಿಲ್ಲ. ಈ ಒಂದು ಷರತ್ತನ್ನು ಮಾತ್ರ ಹಾಕಲಾಗಿದೆ.

ಇದನ್ನೂ ಓದಿ: ಉಕ್ರೇನ್-ರಷ್ಯಾ ಯುದ್ಧದಿಂದ ಹೆಚ್ಚು ಲಾಭ ಮಾಡುತ್ತಿರೋದು ಭಾರತವಲ್ಲ, ಚೀನಾವಲ್ಲ; ಅಮೆರಿಕಕ್ಕೆ ಹಣದ ಹೊಳೆ?

ಯಾವ್ಯಾವ ನಗರಗಳಲ್ಲಿ ಈ ವಿನಾಯಿತಿ?

ಎಲ್ಲಾ ಏಳು ಮೆಟ್ರೋಪೊಲಿಟನ್ ನಗರಗಳು, ಹಾಗೂ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 46 ನಗರ ಮತ್ತು ಪಟ್ಟಣಗಳಲ್ಲಿ ಈ ನಿಯಮ ಸಡಿಲಿಕೆ ಮಾಡಲಾಗಿದೆ. ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಅಹ್ಮದಾಬಾದ್ ಮೆಟ್ರೋಪೊಲಿಟನ್ ನಗರಗಳಾಗಿವೆ.

ಪುಣೆ, ಕೊಚ್ಚಿ, ಕಾನಪುರ್, ಲಕ್ನೋ, ಇಂದೋರ್, ಕೊಯಮತ್ತೂರು ಮೊದಲಾದ ನಗರಗಳು 2011ರ ಸೆನ್ಸಸ್ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿವೆ. ಈ 46 ನಗರ ಮತ್ತು ಪಟ್ಟಣಗಳಲ್ಲೂ ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಹೆಚ್ಚು ಸ್ವಾತಂತ್ರ್ಯ ನೀಡಲಾಗಿದೆ.

ಇನ್ನುಳಿದ ಪ್ರದೇಶಗಳಲ್ಲಿ ಜನೌಷಧಿ ಕೇಂದ್ರಗಳ ನಡುವೆ ಎಂದಿನಂತೆ ಒಂದು ಕಿಮೀ ಅಂತರ ಇರಬೇಕೆನ್ನುವ ನಿಯಮ ಮುಂದುವರಿಯುತ್ತದೆ. ಜನೌಷಧಿ ಕೇಂದ್ರಗಳ ವ್ಯಾಪ್ತಿ ಹೆಚ್ಚಿಸಲು ಈ ನಿಯಮ ಸಡಿಲಿಕೆ ಮಾಡಲಾಗಿದೆ.

ಇದನ್ನೂ ಓದಿ: ತಿಂಗಳಿಗೆ 1 ಲಕ್ಷ ರೂ ಆದಾಯ ಪಡೆಯಲು ಎಷ್ಟು ಹೂಡಿಕೆ ಅಗತ್ಯ?

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಅಡಿಯಲ್ಲಿ ನಡೆಸಲಾಗುವ ಈ ಸ್ಕೀಮ್ ಅನ್ನು ನಿರ್ವಹಿಸುವ ಪಿಎಂಬಿಐ (ಫಾರ್ಮಾಸ್ಯೂಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಬ್ಯೂರೋ) ಪ್ರಕಟಿಸಿದ ಆಂತರಿಕ ದಾಖಲೆಯಲ್ಲಿ ಈ ಕ್ರಮವನ್ನು ಸೂಚಿಸಲಾಗಿದೆ.

ಭಾರತದಾದ್ಯಂತ ಒಟ್ಟು 11,000ಕ್ಕೂ ಅಧಿಕ ಜನೌಷಧಿ ಕೇಂದ್ರಗಳಿವೆ. ಇಲ್ಲಿ ಜೆನರಿಕ್ ಔಷಧಿಗಳನ್ನು ಕಡಿಮೆ ಬೆಲೆಗೆ ಮಾರಲಾಗುತ್ತದೆ. ಬೇರೆ ಬ್ರ್ಯಾಂಡ್ ಔಷಧಕ್ಕೂ ಈ ಜನರಿಕ್ ಔಷಧಕ್ಕೂ ಅರ್ಧಕರ್ಧ ಬೆಲೆ ವ್ಯತ್ಯಾಸ ಕಾಣಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ