ಮುಂದಿನ ಅನೇಕ ದಶಕಗಳು ಭಾರತದ ಪಾರಮ್ಯಕ್ಕೆ ಅವಕಾಶ: ಮಾರುತಿ ಸುಜುಕಿ ಸಿಇಒ
Maruti Suzuki India CEO Hisashi Takeuchi compares Indian growth trajectory to Japan: ಮುಂದಿನ ಅನೇಕ ದಶಕಗಳು ಭಾರತಕ್ಕೆ ಸೇರಿದ್ದಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಸಿಇಒ ಹಿಸಾಶಿ ಟಕ್ಯೂಚಿ ಹೇಳಿದ್ದಾರೆ. ಭಾರತದ ನೀತಿಗಳಲ್ಲಿ ಸ್ಥಿರತೆ ಸಾಧನೆಯಾದರೆ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಮುಂದಿನ ಪವರ್ ಎನಿಸಲಿದೆ ಎಂಬುದು ಅವರ ಅನಿಸಿಕೆ. 2ನೇ ವಿಶ್ವ ಮಹಾಯುದ್ಧದ ನಂತರ ಜಪಾನ್ ಪ್ರಬಲ ಆರ್ಥಿಕತೆಯ ದೇಶವಾಗಿ ಬೆಳೆದಂತೆ ಭಾರತವೂ ಬೆಳೆಯಲಿದೆ ಎಂದಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 12: ಭಾರತದ ಆರ್ಥಿಕ ಪ್ರಯಾಣ ಈಗ ನಿರ್ಣಾಯಕ ಹಂತ ಪ್ರವೇಶಿಸುತ್ತಿದೆ. ಮ್ಯಾನುಫ್ಯಾಕ್ಚರಿಂಗ್ನಲ್ಲಿ ವಿಶ್ವದ ಮುಂದಿನ ಸೂಪರ್ ಪವರ್ ಆಗುವ ಅವಕಾಶ ಭಾರತಕ್ಕೆ ಬಂದೊದಗಿದೆ ಎಂದು ಮಾರುತಿ ಸುಜುಕಿಯ ಭಾರತ ವಿಭಾಗದ ಸಿಇಒ ಮತ್ತು ಎಂಡಿ ಹಿಸಾಶಿ ಟಕ್ಯೂಚಿ (Hisashi Takeuchi) ಅಭಿಪ್ರಾಯಪಟ್ಟಿದ್ದಾರೆ. ಭಾರತದ ಆಟೊಮೋಟಿವ್ ಬಿಡಿಭಾಗ ತಯಾರಕ ಸಂಘದ ವಾರ್ಷಿಕ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಜಪಾನ್ ಮೂಲದ ಹಿರಿಯ ಅಧಿಕಾರಿಯು, ಮುಂಬರುವ ದಶಕಗಳು ಭಾರತಕ್ಕೆ ಸೇರಿದ್ದು ಎಂದಿದ್ದಾರೆ.
ನೀತಿಯಲ್ಲಿ ಸ್ಥಿರತೆ ಕಾಯ್ದುಕೊಂಡರೆ ಮುಂಬರುವ ಅನೇಕ ದಶಕಗಳು ಭಾರತ ಪಾರಮ್ಯ ಸಾಧಿಸುವ ಅವಕಾಶ ಹೊಂದಿದೆ ಎಂದು ಹಿಸಾಶಿ ಟಕ್ಯೂಚಿ ತಿಳಿಸಿದ್ದಾರೆ. ಜಾಗತಿಕವಾಗಿ ವಿವಿಧ ಪ್ರದೇಶಗಳು ಹೇಗೆ ನಿರ್ದಿಷ್ಟ ಕಾಲಾವಧಿಯವರೆಗೆ ಆರ್ಥಿಕವಾಗಿ ಪ್ರಾಬಲ್ಯ ಸಾಧಿಸಿದ್ದವು ಎಂಬುದನ್ನು ಸಾದೋಹರಣೆ ಸಮೇತ ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಭಾರತದ ಹಣದುಬ್ಬರ ಆಗಸ್ಟ್ನಲ್ಲಿ ಶೇ. 2.07ಕ್ಕೆ ಏರಿಕೆ; ತಾಳಿಕೆ ಮಿತಿಗಿಂತ ಬಹಳ ಕಡಿಮೆ
ಅಮೆರಿಕ, ಯೂರೋಪ್ನಿಂದ ಹಿಡಿದು ಜಪಾನ್ವರೆಗೆ ವಿವಿಧ ದೇಶಗಳು ನಿರ್ದಿಷ್ಟ ಕಾಲಾವಧಿಯವರೆಗೆ ಆರ್ಥಿಕ ಪ್ರಾಬಲ್ಯ ಹೊಂದಿದ್ದವು. ಇತ್ತೀಚೆಗೆ, ಚೀನಾ ವಿಶ್ವದ ಫ್ಯಾಕ್ಟರಿ ಎನ್ನುವ ಸ್ಥಾನ ಪಡೆದಿದೆ. ಈಗ ಆ ಸ್ಥಾನಕ್ಕೆ ಭಾರತದ ಸರದಿ ಬಂದಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಸಿಇಒ ಅಭಿಪ್ರಾಯಪಟ್ಟಿದ್ದಾರೆ.
ಜಪಾನ್ ಬೆಳೆದ ಮಾರ್ಗದಲ್ಲಿ ಭಾರತ…
ಹಿಸಾಶಿ ಟೆಕ್ಯೂಚಿ ಅವರು ಭಾರತದ ಬೆಳವಣಿಗೆ ಕ್ರಮವನ್ನು ವಿಶ್ವ ಮಹಾಯುದ್ಧದ ನಂತರ ಜಪಾನ್ ಕಂಡ ಬೆಳವಣಿಗೆಗೆ ಹೋಲಿಕೆ ಮಾಡಿದ್ದಾರೆ.
ಜಪಾನ್ ಸರ್ಕಾರದ ನೀತಿಗಳು ಕೈಗಾರಿಕೆಗಳ ನಿರ್ಮಾಣಕ್ಕೆ ಪೂರಕವಾಗಿದ್ದವು. ಜಾಗತಿಕವಾಗಿ ವಿಸ್ತರಣೆ ಹೊಂದಲು ಸಹಾಯಕವಾಗಿದ್ದವು. ಭಾರತದಲ್ಲೂ ಅದೇ ಸಂಕೇತ ಗೋಚರಿಸಿದೆ ಎಂದಿದ್ದಾರೆ ಅವರು.
ಇದನ್ನೂ ಓದಿ: ಉಕ್ರೇನ್-ರಷ್ಯಾ ಯುದ್ಧದಿಂದ ಹೆಚ್ಚು ಲಾಭ ಮಾಡುತ್ತಿರೋದು ಭಾರತವಲ್ಲ, ಚೀನಾವಲ್ಲ; ಅಮೆರಿಕಕ್ಕೆ ಹಣದ ಹೊಳೆ?
ಭಾರತಕ್ಕೆ ಅನುಕೂಲವಾಗುವ ಸಂಗತಿಗಳನ್ನು ತಿಳಿಸಿದ ಹಿಸಾಶಿ
ಭಾರತದಲ್ಲಿ ಕಾರ್ಮಿಕ ವಯೋಮಾನದ ಜನಸಂಖ್ಯೆ ವಿಶ್ವದಲ್ಲೇ ಅತಿಹೆಚ್ಚಿದೆ. ಭಾರತದ್ದು ನಾಲ್ಕು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದೆ. ಸರ್ಕಾರ ಕೂಡ ಉದ್ಯಮಕ್ಕೆ ಬೆಂಬಲವಾಗಿ ನಿಂತಿದೆ. ಕಾರ್ಪೊರೇಟ್ ಟ್ಯಾಕ್ಸ್ ಕಡಿಮೆ ಮಾಡಿರುವುದು, ಪಿಎಲ್ಐ ಸ್ಕೀಮ್ ಮತ್ತು ಮೇಕ್ ಇನ್ ಇಂಡಿಯಾ ಸ್ಕೀಮ್ಗಳನ್ನು ನಡೆಸುತ್ತಿರುವುದು, ಜಿಎಸ್ಟಿ ಕಡಿತಗೊಳಿಸಿರುವುದು ಇವೇ ಮುಂತಾದ ಸಂಗತಿಗಳು ಭಾರತದ ಅಭಿವೃದ್ಧಿಗೆ ಪುಷ್ಟಿ ಕೊಡಬಹುದು ಎನ್ನುವುದು ಮಾರುತಿ ಸುಜುಕಿ ಇಂಡಿಯಾದ ಎಂಡಿಯೂ ಆಗಿರುವ ಹಿಸಾಶಿ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:38 pm, Fri, 12 September 25




