ಹಿಂದೂ ಎಂಬ ಕಾರಣಕ್ಕೆ ಲಂಡನ್ ಸ್ಕೂಲ್ ಆಫ್​ ಎಕನಾಮಿಕ್ಸ್​ ಚುನಾವಣೆಯಿಂದ ಅನರ್ಹಗೊಳಿಸಿದರು; ಭಾರತೀಯ ವಿದ್ಯಾರ್ಥಿ ಅಳಲು

ಲಂಡನ್​ ಸ್ಕೂಲ್ ಆಫ್​ ಎಕನಾಮಿಕ್ಸ್​​ನಲ್ಲಿ ಭಾರತ ವಿರೋಧಿ ಅಭಿಯಾನ ನಡೆಯುತ್ತಿದೆ ಎಂದು ಭಾರತ ಮೂಲದ ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.

ಹಿಂದೂ ಎಂಬ ಕಾರಣಕ್ಕೆ ಲಂಡನ್ ಸ್ಕೂಲ್ ಆಫ್​ ಎಕನಾಮಿಕ್ಸ್​ ಚುನಾವಣೆಯಿಂದ ಅನರ್ಹಗೊಳಿಸಿದರು; ಭಾರತೀಯ ವಿದ್ಯಾರ್ಥಿ ಅಳಲು
ಕರಣ್ ಕಟಾರಿಯಾImage Credit source: Twitter
Follow us
Ganapathi Sharma
|

Updated on: Apr 04, 2023 | 3:58 PM

ಲಂಡನ್: ಲಂಡನ್​ ಸ್ಕೂಲ್ ಆಫ್​ ಎಕನಾಮಿಕ್ಸ್​​ನಲ್ಲಿ (London School Of Economics) ಭಾರತ ವಿರೋಧಿ ಅಭಿಯಾನ ನಡೆಯುತ್ತಿದೆ ಎಂದು ಭಾರತ ಮೂಲದ ವಿದ್ಯಾರ್ಥಿಯೊಬ್ಬರು (Indian Student) ಆರೋಪಿಸಿದ್ದಾರೆ. ಭಾರತದ ವ್ಯಕ್ತಿ ಮತ್ತು ಹಿಂದೂ ಎಂಬ ಕಾರಣಕ್ಕಾಗಿ ಲಂಡನ್​ ಸ್ಕೂಲ್ ಆಫ್​ ಎಕನಾಮಿಕ್ಸ್​​ನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ತಮ್ಮನ್ನು ಅನರ್ಹಗೊಳಿಸಲಾಗಿದೆ ಎಂದು ಕರಣ್ ಕಟಾರಿಯಾ ಎಂಬ ಹರಿಯಾಣ ಮೂಲದ ವಿದ್ಯಾರ್ಥಿ ದೂರಿದ್ದಾರೆ. ಕಟಾರಿಯಾ ಸದ್ಯ ಲಂಡನ್​ ಸ್ಕೂಲ್ ಆಫ್​ ಎಕನಾಮಿಕ್ಸ್​​ನಲ್ಲಿ ಕಾನೂನು ವಿಯಷದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಪಾಲಕರ ಪ್ರೋತ್ಸಾಹದಿಂದ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಲು ಮುಂದಾಗಿದ್ದೆ. ಆದರೆ, ಆಧಾರರಹಿತ ಆರೋಪಗಳನ್ನು ಪರಿಗಣಿಸಿ ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದುರದೃಷ್ಟವಶಾತ್, ಭಾರತೀಯ-ಹಿಂದೂಗಳು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನ ವಿದ್ಯಾರ್ಥಿ ಸಂಘದ ನೇತೃತ್ವ ವಹಿಸುವುದನ್ನು ಕೆಲವು ವ್ಯಕ್ತಿಗಳು ಸಹಿಸಲಿಲ್ಲ. ಪರಿಣಾಮವಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದರು ಎಂದು ಕಟಾರಿಯಾ ಹೇಳಿದ್ದಾರೆ.

ಸ್ನಾತಕೋತ್ತರ ಅಧ್ಯಯನವನ್ನು ಪ್ರಾರಂಭಿಸಿದ ಸಂದರ್ಭದಲ್ಲಿ, ವಿದ್ಯಾರ್ಥಿ ಕಲ್ಯಾಣಕ್ಕಾಗಿ ಶ್ರಮಿಸಲು ಹಾಗೂ ಮತ್ತಷ್ಟು ಕೊಡುಗೆ ನೀಡಲು ಪ್ರಾಮಾಣಿಕವಾಗಿ ಆಶಿಸಿದ್ದೆ. ಆದರೆ ಭಾರತೀಯ ಮತ್ತು ಹಿಂದೂ ಎಂಬ ಗುರುತಿನಿಂದಾಗಿ ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಯೋಜಿತ ಅಭಿಯಾನವನ್ನು ಮಾಡಲಾಯಿತು. ಇದರಿಂದ ನನ್ನ ಕನಸುಗಳು ಭಗ್ನಗೊಂಡವು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಮಧ್ಯಂತರ ಜಾಮೀನು

22 ವರ್ಷದ ಕರಣ್ ಕಟಾರಿಯಾ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯುಳ್ಳಬವರಾಗಿದ್ದು, ಅವರ ಕುಟುಂಬದಲ್ಲೇ ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣ ಪಡೆಯುತ್ತಿರುವ ಮೊದಲಿಗರಾಗಿದ್ದಾರೆ.

ದೇಶದ ಎಲ್ಲ ವಿದ್ಯಾರ್ಥಿಗಳಿಂದ ಹೆಚ್ಚಿನ ಬೆಂಬಲವನ್ನು ಪಡೆದಿದ್ದರೂ ಸಹ, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚುನಾವಣೆಯಿಂದ ನನ್ನನ್ನು ಅನರ್ಹಗೊಳಿಸಲಾಯಿತು. ನನ್ನ ವಿರುದ್ಧ ಹೋಮೋಫೋಬಿಕ್, ಇಸ್ಲಾಮೋಫೋಬಿಕ್, ಕ್ವೀರ್ಫೋಬಿಕ್ ಮತ್ತು ಹಿಂದೂ ರಾಷ್ಟ್ರೀಯವಾದಿ ಎಂಬುದಾಗಿ ನನ್ನ ವಿರುದ್ಧ ಆರೋಪಗಳನ್ನು ಮಾಡಲಾಯಿತು ಎಂದು ಅವರು ಹೇಳಿದ್ದಾರೆ. ಈ ದ್ವೇಷದ ಅಭಿಯಾನವನ್ನು ಆರಂಭಿಸಿದ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸುವ ಬದಲು ನನ್ನನ್ನೇ ಬಲಿಪಶು ಮಾಡಲಾಯಿತು ಎಂದು ಅವರು ಅಲವತ್ತುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ