ರಷ್ಯಾ ಮತ್ತು ಉಕ್ರೇನ್ ಯುದ್ಧ (Russia Ukraine War) ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಭಾರತ ಯುದ್ಧಪೀಡಿತ ಸ್ಥಳಗಳಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ರಷ್ಯಾದ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದ. ಈ ಘಟನೆಯ ಬೆನ್ನಲ್ಲೇ ಇಂದು ಮತ್ತೋರ್ವ ವಿದ್ಯಾರ್ಥಿಗೆ ಗುಂಡು ತಗುಲಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವರಾಗಿರುವ ಜನರಲ್ (ನಿವೃತ್ತ) ವಿಕೆ ಸಿಂಗ್ (General VK Singh) ಮಾಹಿತಿ ನೀಡಿದ್ದಾರೆ. ಪೋಲಂಡ್ನಲ್ಲಿ ಅವರು ಎಎನ್ಐನೊಂದಿಗೆ ಮಾತನಾಡಿದರು. ‘ಕೀವ್‌ನಿಂದ ಬರುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಗುಂಡು ತಗುಲಿದ್ದು, ಆತ ಮಾರ್ಗ ಮಧ್ಯದಲ್ಲಿ ವಾಪಸ್ಸಾಗಿದ್ದಾರೆ. ಅವರನ್ನು ಕೀವ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ವಿಕೆ ಸಿಂಗ್ ಹೇಳಿದ್ದಾರೆ.
‘ಭಾರತದ ರಾಯಭಾರ ಕಚೇರಿಯು ಈ ಹಿಂದೆ ಕೀವ್ ತೊರೆಯಬೇಕು ಎಂದು ತಿಳಿಸಿತ್ತು. ಯುದ್ಧದ ಸಂದರ್ಭದಲ್ಲಿ ಧರ್ಮ, ಜಾತೀಯತೆಯನ್ನು ನೋಡುವುದಿಲ್ಲ’ ಎಂದು ವಿಕೆ ಸಿಂಗ್ ಹೇಳಿದ್ದಾರೆ. ಪ್ರಸ್ತುತ ಉಕ್ರೇನ್ನಲ್ಲಿನ ವಿದ್ಯಾರ್ಥಿಗಳು ಗಡಿ ಪ್ರದೇಶಗಳತ್ತ ತೆರಳಲು ಯತ್ನಿಸುತ್ತಿದ್ದಾರೆ. ನಾಲ್ವರು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ — ಉಕ್ರೇನ್ ಗಡಿ ದೇಶಗಳಲ್ಲಿ ಆಪರೇಷನ್ ಗಂಗಾದ ಜವಾಬ್ದಾರಿ ಹೊತ್ತಿದ್ದಾರೆ.
ಈ ಕುರಿತು ಎಎನ್ಐ ಟ್ವೀಟ್ ಇಲ್ಲಿದೆ:
I received info today that a student coming from Kyiv got shot and was taken back midway. We’re trying for maximum evacuation in minimum loss: MoS Civil Aviation Gen (Retd) VK Singh, in Poland#RussiaUkraine pic.twitter.com/cggVEsqfEj
— ANI (@ANI) March 4, 2022
ನಿನ್ನೆ ಭಾರತವು ಮಾಹಿತಿ ನೀಡಿ ಉಕ್ರೇನ್ನಲಿದ್ದ 20,000 ಭಾರತದ ನಾಗರಿಕರಲ್ಲಿ 17,000 ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ ಎಂದು ಹೇಳಿತ್ತು. ಗಡಿ ಪ್ರದೇಶ ತಲುಪಿದ ಭಾರತದ ವಿದ್ಯಾರ್ಥಿಗಳನ್ನು ‘ಆಪರೇಷನ್ ಗಂಗಾ’ ಯೋಜನೆಯ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಇದಕ್ಕೆ ಭಾರತೀಯ ವಾಯುಪಡೆಯೂ ಕೈಜೋಡಿಸಿದೆ.
ರಷ್ಯಾ- ಉಕ್ರೇನ್ ಕದನದ ಲೈವ್ ಅಪ್ಡೇಟ್ಸ್ ಇಲ್ಲಿ ಲಭ್ಯವಿದೆ: Russia Ukraine War Live: ಯುರೋಪ್ ಸುರಕ್ಷತೆಗೆ ಪುಟಿನ್ ಬೆದರಿಕೆ; ಪರಮಾಣು ಸ್ಥಾವರದ ಮೇಲೆ ದಾಳಿ ಬೆನ್ನಲ್ಲೇ ಇಂಗ್ಲೆಂಡ್ ಪ್ರಧಾನಿ ಆಕ್ರೋಶ
ಇದನ್ನೂ ಓದಿ:
ಫ್ರೆಂಚ್ ಅಧ್ಯಕ್ಷರ ಪ್ರಕಾರ ಪುಟಿನ್ ಯುದ್ಧ ನಿಲ್ಲಿಸುವ ಸೂಚನೆಯೇ ಇಲ್ಲ, ಮುಂಬರುವ ದಿನಗಳು ಇನ್ನಷ್ಟು ಭೀಕರವಾಗಿರಲಿವೆ!
Published On - 9:07 am, Fri, 4 March 22