Masood Azhar: ಪರಿಹಾರ ನಿಧಿಯಿಂದ ಉಗ್ರ ಮಸೂದ್​ ಅಜರ್​ಗೆ 14 ಕೋಟಿ ರೂ. ಕೊಡುತ್ತಾ ಪಾಕ್ ಸರ್ಕಾರ?

ಉಗ್ರ ಮಸೂದ್​ ಅಜರ್​ಗೆ ಪಾಕಿಸ್ತಾನ ಸರ್ಕಾರವು 14 ಕೋಟಿ ರೂ. ಪರಿಹಾರ ನೀಡಲಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಸರ್ಕಾರವು ಭಾರತೀಯ ದಾಳಿಯಲ್ಲಿ ಮೃತರಾದ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. ಈ ಯೋಜನೆಯ ಅತಿದೊಡ್ಡ ಫಲಾನುಭವಿ ಮಸೂದ್ ಅಜರ್ ಆಗಿದ್ದಾರೆ. ಭಾರತವು ಮಸೂದ್ ನ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ನ ಬಹಾವಲ್ಪುರ್ ಪ್ರಧಾನ ಕಚೇರಿಯ ಮೇಲೆ ಭಾರತ ವಾಯುದಾಳಿ ನಡೆಸಿತ್ತು.

Masood Azhar: ಪರಿಹಾರ ನಿಧಿಯಿಂದ ಉಗ್ರ ಮಸೂದ್​ ಅಜರ್​ಗೆ 14 ಕೋಟಿ ರೂ. ಕೊಡುತ್ತಾ ಪಾಕ್ ಸರ್ಕಾರ?
ಮಸೂದ್ ಅಜರ್

Updated on: May 14, 2025 | 2:14 PM

ಇಸ್ಲಾಮಾಬಾದ್, ಮೇ 14: ಪಾಕಿಸ್ತಾನ(Pakistan) ಸರ್ಕಾರವು ತನ್ನ ಪರಿಹಾರ ನಿಧಿಯಿಂದ ಉಗ್ರ ಮಸೂದ್​ ಅಜರ್​(Masood Azhar)ಗೆ 14 ಲಕ್ಷ ರೂ. ನೀಡುತ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಉಗ್ರರನ್ನು ಮಟ್ಟ ಹಾಕಲು ಭಾರತವು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ನಡೆಸಿದ್ದ ದಾಳಿಯಲ್ಲಿ ಉಗ್ರ ಮಸೂದ್​ ಅಜರ್​​ ಕುಟುಂಬದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ, ಹಾಗೆಯೇ ಆತನ ನಾಲ್ವರು ಆಪ್ತರು ಕೂಡ ಸಾವನ್ನಪ್ಪಿದ್ದಾರೆ.

ಪಾಕಿಸ್ತಾನ ಸರ್ಕಾರವು ಭಾರತೀಯ ದಾಳಿಯಲ್ಲಿ ಮೃತರಾದ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. ಈ ಯೋಜನೆಯ ಅತಿದೊಡ್ಡ ಫಲಾನುಭವಿ ಮಸೂದ್ ಅಜರ್ ಆಗಿದ್ದಾರೆ. ಭಾರತವು ಮಸೂದ್ ನ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ನ ಬಹಾವಲ್ಪುರ್ ಪ್ರಧಾನ ಕಚೇರಿಯ ಮೇಲೆ ಭಾರತ ವಾಯುದಾಳಿ ನಡೆಸಿತ್ತು.

ಈ ರೀತಿಯಾಗಿ, ಪಾಕಿಸ್ತಾನ ಸರ್ಕಾರವು ಸಹಾಯದ ಹೆಸರಿನಲ್ಲಿ ಬಿಡುಗಡೆ ಮಾಡುವ ಹಣವು ಭಯೋತ್ಪಾದಕರು ಮತ್ತು ಅವರ ಕುಟುಂಬಗಳಿಗೆ ನೇರವಾಗಿ ಸಹಾಯ ಮಾಡುತ್ತದೆ. ಪಾಕಿಸ್ತಾನದ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, 1 ಕೋಟಿ ರೂಪಾಯಿಗಳ ಸಹಾಯವನ್ನು ಘೋಷಿಸಲಾಗಿದೆ. ಸಹಾಯದ ಹೆಸರಿನಲ್ಲಿ ಬಿಡುಗಡೆಯಾದ ಈ ಮೊತ್ತದ ನೇರ ಲಾಭವನ್ನು ಈಗ ಮಸೂದ್ ಅಜರ್ ಮಾತ್ರ ಪಡೆಯುತ್ತಾನೆ.

ಮತ್ತಷ್ಟು ಒದಿ: ಸ್ಯಾಟಲೈಟ್ ಫೋಟೋಗಳು ಲಭ್ಯವಿದೆ; ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದೇವೆಂದ ಪಾಕಿಸ್ತಾನದ ಹೇಳಿಕೆ ತಳ್ಳಿಹಾಕಿದ ಭಾರತ

ಆಪರೇಷನ್ ಸಿಂಧೂರ್ ಅಡಿಯಲ್ಲಿ , ಭಾರತವು ಮುರಿಡ್ಕೆಯಲ್ಲಿರುವ ಹಫೀಜ್ ಸಯೀದ್ ಅಡಗುತಾಣಗಳ ಮೇಲೆ ಮತ್ತು ನಂತರ ಬಹಾವಲ್ಪುರದಲ್ಲಿರುವ ಜೈಶ್ ಅಡಗುತಾಣಗಳ ಮೇಲೆ ಬೃಹತ್ ದಾಳಿಗಳನ್ನು ನಡೆಸಿತ್ತು. ಲಾಹೋರ್‌ನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಬಹಾವಲ್ಪುರದ ಮೇಲೆ ಭಾರತ ನಡೆಸಿದ ಈ ಭೀಕರ ದಾಳಿಯು ಭಯೋತ್ಪಾದಕ ಯಜಮಾನರನ್ನು ಸಹ ಬೆಚ್ಚಿಬೀಳಿಸಿತು.
ಜೈಶ್ ನ ಈ ಪ್ರಧಾನ ಕಚೇರಿಯನ್ನು ಉಸ್ಮಾನ್ ಅಲಿ ಕಾಂಪ್ಲೆಕ್ಸ್ ಎಂದೂ ಕರೆಯುತ್ತಾರೆ. ಪಾಕಿಸ್ತಾನವು ಭಾರತದ ಮೇಲೆ ಆರೋಪ ಹೊರಿಸಿದ್ದ ದಾಳಿಯಲ್ಲಿ ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಕೂಡ ಇಲ್ಲೇ ಇದೆ.

ಆಪರೇಷನ್ ಸಿಂಧೂರ್ ಅಡಿಯಲ್ಲಿ ನಡೆಸಲಾದ ಭಾರತೀಯ ವಾಯುದಾಳಿಗಳು ಬಹಾವಲ್ಪುರದ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡವು. ಇದು ಪಾಕಿಸ್ತಾನದ 12 ನೇ ದೊಡ್ಡ ನಗರ ಮತ್ತು ಜೈಶ್-ಎ-ಮೊಹಮ್ಮದ್‌ನ ಮುಖ್ಯ ನೆಲೆಯಾಗಿದೆ. ಮೃತರಲ್ಲಿ ತನ್ನ ಅಕ್ಕ ಮತ್ತು ಆಕೆಯ ಪತಿ, ಸೋದರಳಿಯ ಮತ್ತು ಅವರ ಪತ್ನಿ, ಸೊಸೆ ಮತ್ತು ಕುಟುಂಬದ ಐದು ಮಕ್ಕಳು ಸೇರಿದ್ದಾರೆ ಎಂದು ಅಜರ್ ದೃಢಪಡಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಅಜರ್ ಮಾತ್ರ ಬದುಕುಳಿದಿರುವ ಏಕೈಕ ಕಾನೂನುಬದ್ಧ ಉತ್ತರಾಧಿಕಾರಿಯಾಗುವ ಸಾಧ್ಯತೆಯಿರುವುದರಿಂದ, ಅವರ ಕುಟುಂಬದ 14 ಕೊಲೆಯಾದ ಸದಸ್ಯರಿಗೆ ತಲಾ 1 ಕೋಟಿ ರೂ.ಗಳ ಪರಿಹಾರಕ್ಕೆ ಈಗ ಅವರು ಅರ್ಹರಾಗಬಹುದು, ಇದರಿಂದಾಗಿ ಸರ್ಕಾರದಿಂದ ಒಟ್ಟು ಪರಿಹಾರ 14 ಕೋಟಿ ರೂ.ಗಳಿಗೆ ತಲುಪಬಹುದು ಎಂದು ಹೇಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ 9 ಉಗ್ರರ ನೆಲೆ ಮೇಲೆ ದಾಳಿ ಮಾಡಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ