Sign In

By signing in or creating an account, you agree with Associated Broadcasting Company's Terms & Conditions and Privacy Policy.

Nature Fury: ಇಂಡೋನೇಷ್ಯಾ, ಹೈಟಿ ಭೂಕಂಪ; ಈ ಶತಮಾನದಲ್ಲಿ ಕಂಡ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ದುರಂತ

21st Century Biggest Earthquakes- ಸಾವಿನ ಪ್ರಮಾಣ ದೃಷ್ಟಿಯಿಂದ ಈ ಶತಮಾನದ ಅತ್ಯಂತ ಘೋರ ಭೂಕಂಪಗಳೆಂದರೆ 2004ರಲ್ಲಿ ಇಂಡೋನೇಷ್ಯಾದ ಬಂದಾ ಆಚೆ ಹಾಗೂ 2010ರಲ್ಲಿ ಹೈಟಿಯಲ್ಲಿ ಸಂಭವಿಸಿದ ಭೂಕಂಪಗಳನ್ನು ಸೇರಿಸಬಹುದು.

Nature Fury: ಇಂಡೋನೇಷ್ಯಾ, ಹೈಟಿ ಭೂಕಂಪ; ಈ ಶತಮಾನದಲ್ಲಿ ಕಂಡ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ದುರಂತ
ಟರ್ಕಿ ಭೂಕಂಪ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 07, 2023 | 10:40 AM

ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ನಿನ್ನೆ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪಕ್ಕೆ (Turkey earthquake) 4 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಮೂರು ಭೂಕಂಪಗಳು ಮತ್ತು ನೂರಕ್ಕೂ ಹೆಚ್ಚು ಪಶ್ಚಾತ್ ಕಂಪನಗಳಿಂದ ಈ ಎರಡೂ ದೇಶಗಳು ನಲುಗಿಹೋಗಿವೆ. ಟರ್ಕಿಯಲ್ಲಿ 3 ಸಾವಿರ ಮಂದಿ ಮೃತಪಟ್ಟಿದ್ದು, ಸಿರಿಯಾದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ಮಾಹಿತಿ ಮಂಗಳವಾರ ಬೆಳಗ್ಗೆ ಸಿಕ್ಕಿದೆ.

ನೂರಾರು ಕಟ್ಟಡಗಳು ಉರುಳಿಬಿದ್ದಿದ್ದು, ಬಹಳಷ್ಟು ಮಂದಿ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ಸಾವಿನ ಸಂಖ್ಯೆ ಇನ್ನೂ ಬಹಳಷ್ಟು ಏರುವ ನಿರೀಕ್ಷೆ ಇದೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಟರ್ಕಿ ದೇಶಕ್ಕೆ ಸಹಾಯ ಹಸ್ತ ಚಾಚಿವೆ.

ಟರ್ಕಿ ದೇಶದ ಇತಿಹಾಸದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪಗಳಲ್ಲಿ ಇದೂ ಒಂದು. ಮೂವತ್ತರ ದಶಕದ ಬಳಿಕ ಇದು ಅತಿಘೋರ ಭೂಕಂಪವಾಗಿದೆ. ಟರ್ಕಿ ಮತ್ತು ಸಿರಿಯಾ ಪ್ರದೇಶಗಳು ಭೂಕಂಪ ಸೂಕ್ಷ್ಮ ಸ್ಥಳಗಳಲ್ಲಿ ಇರುವುದರಿಂದ ಇಲ್ಲಿ ಭೂಮಿ ಕಂಪಿಸುವುದು ಸಾಮಾನ್ಯ. ಸಾವಿನ ಪ್ರಮಾಣ ದೃಷ್ಟಿಯಿಂದ ಈ ಶತಮಾನದ ಅತ್ಯಂತ ಘೋರ ಭೂಕಂಪಗಳೆಂದರೆ (Deadliest Earthquakes) 2004ರಲ್ಲಿ ಇಂಡೋನೇಷ್ಯಾದ ಬಂದಾ ಆಚೆ ಹಾಗೂ 2010ರಲ್ಲಿ ಹೈಟಿಯಲ್ಲಿ ಸಂಭವಿಸಿದ ಭೂಕಂಪಗಳನ್ನು ಸೇರಿಸಬಹುದು. ಈ ಎರಡು ಸಂದರ್ಭದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದುಂಟು.

ಇದನ್ನೂ ಓದಿ: Turkey Earthquake: 3 ಪ್ರಬಲ ಭೂಕಂಪಗಳಿಂದ ನಲುಗಿದ ಟರ್ಕಿ ಹಾಗೂ ಸಿರಿಯಾ, 4,000 ಕ್ಕೂ ಹೆಚ್ಚು ಮಂದಿ ಸಾವು

ಆಫ್ರಿಕಾ ಖಂಡದ ಹೈಟಿಯಲ್ಲಿ 2010ರಲ್ಲಿ ಭೂಕಂಪಕ್ಕೆ 3 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ರಿಕ್ಟರ್ ಮಾಪಕದಲ್ಲಿ ತೀವ್ರತೆ ಕೇವಲ 7.0 ಮಾತ್ರ ಇದ್ದರೂ ನಗರ ಭಾಗಗಳಲ್ಲಿ ಕಂಪನ ಕೇಂದ್ರಿತವಾದ್ದರಿಂದ ಸಾವು ನೋವು ಅಧಿಕವಾಗಿತ್ತು. ಇನ್ನು 2004ರಲ್ಲಿ ಇಂಡೋನೇಷ್ಯಾದ ಬಂಡಾ ಆಚೆ ಎಂಬಲ್ಲಿ ಸಂಭವಿಸಿದ ಭೂಕಂಪದಿಂದ ಸೃಷ್ಟಿಯಾದ ಅನಾಹುತವನ್ನು ಭಾರತೀಯರು ಮರೆಯಲು ಸಾಧ್ಯವೇ? ತಮಿಳುನಾಡು, ಶ್ರೀಲಂಕಾ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳ ಕಡಲತೀರಗಳಲ್ಲಿ ಸುನಾಮಿ ಅಲೆ ಅಪ್ಪಳಿಸಿ 2 ಲಕ್ಷಕ್ಕೂ ಹೆಚ್ಚು ಜನರು ಸತ್ತಿದ್ದರು. ಭೂಕಂಪಕ್ಕಿಂತ ಸುನಾಮಿ ದಾಳಿ ಹೆಚ್ಚು ಭೀಕರವಾಗಿತ್ತು.

ಈ ಶತಮಾನದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪಗಳ ಪಟ್ಟಿ:

2022, ಜೂನ್ 22: ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಭೂಕಂಪದಿಂದ 1,100 ಮಂದಿ ಬಲಿ

2021, ಆಗಸ್ಟ್ 14: ಆಫ್ರಿಕಾ ಖಂಡದ ಹೈಟಿ ನಗರದಲ್ಲಿ 7.2 ತೀವ್ರತೆಯ ಭೂಕಂಪಕ್ಕೆ 2,200 ಮಂದಿ ಸಾವು

2018, ಸೆ. 28: ಇಂಡೋನೇಷ್ಯಾದಲ್ಲಿ 7.5 ತೀವ್ರತೆಯ ಭೂಕಂಪ; 4,300ಕ್ಕೂ ಹೆಚ್ಚು ಸಾವು

2016, ಆಗಸ್ಟ್ 24: ಇಟಲಿಯಲ್ಲಿ 6.2 ತೀವ್ರತೆಯ ಭೂಕಂಪ; 300ಕ್ಕೂ ಹೆಚ್ಚು ಸಾವು

2015, . 25: ನೇಪಾಳದಲ್ಲಿ 7.8 ತೀವ್ರತೆಯ ಭೂಕಂಪ; 8,800ಕ್ಕೂ ಹೆಚ್ಚು ಸಾವು

2014, ಆಗಸ್ಟ್ 3: ಚೀನಾದ ವೇನ್​ಪಿಂಗ್​ನಲ್ಲಿ 6.2 ತೀವ್ರತೆಯ ಭೂಕಂಪ; 700ಕ್ಕೂ ಹೆಚ್ಚು ಮಂದಿ ಬಲಿ

2013, ಸೆ. 24: ಪಾಕಿಸ್ತಾನದಲ್ಲಿ 7.7 ತೀವ್ರತೆಯ ಭೂಕಂಪ; 800ಕ್ಕೂ ಹೆಚ್ಚು ಮಂದಿ ಸಾವು

2011, ಮಾರ್ಚ್ 11: ಜಪಾನ್​ನಲ್ಲಿ 9 ತೀವ್ರತೆಯ ಭೂಕಂಪ, ಸುನಾಮಿ ಪ್ರವಾಹ; 20 ಸಾವಿರಕ್ಕೂ ಹೆಚ್ಚು ಮಂದಿ ಬಲಿ

2010, ಫೆ. 27: ಚಿಲಿಯಲ್ಲಿ 8.8 ತೀವ್ರತೆಯ ಭೂಕಂಪ, ಸುನಾಮಿ ಸೃಷ್ಟಿ; 524 ಜನರು ಮೃತ

2010, . 12: ಹೈಟಿಯಲ್ಲಿ 7.0 ತೀವ್ರತೆಯ ಭೂಕಂಪಕ್ಕೆ 3 ಲಕ್ಷಕ್ಕೂ ಹೆಚ್ಚು ಜನರು ಬಲಿ

2009, ಸೆ. 30: ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ 7.5 ತೀವ್ರತೆಯ ಭೂಕಂಪ; 1,100ಕ್ಕೂ ಹೆಚ್ಚು ಸಾವು

2009, ಏಪ್ರಿಲ್ 6: ಇಟಲಿಯಲ್ಲಿ 6.3 ತೀವ್ರತೆಯ ಭೂಕಂಪ; 300ಕ್ಕೂ ಹೆಚ್ಚು ಮಂದಿ ಸಾವು

2008, ಮೇ 12: ಚೀನಾದ ಸಿಚುವಾನ್​ನಲ್ಲಿ 7.9 ತೀವ್ರತೆಯ ಭೂಕಂಪ; 87,500 ಮಂದಿ ಸಾವು

2007, ಆಗಸ್ಟ್ 15: ದಕ್ಷಿಣ ಅಮೆರಿಕದ ಪೆರು ದೇಶದಲ್ಲಿ 8.0 ತೀವ್ರತೆಯ ಭೂಕಂಪ; 500ಕ್ಕೂ ಹೆಚ್ಚು ಸಾವು

2006, ಮೇ 26: ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ 6.3 ತೀವ್ರತೆಯ ಭೂಕಂಪ; 5,700 ಜನರ ಸಾವು

2005, ಅಕ್ಟೋಬರ್ 8: ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ 7.6 ತೀವ್ರತೆಯ ಭೂಕಂಪ; 80 ಸಾವಿರಕ್ಕೂ ಹೆಚ್ಚು ಮಂದಿ ಬಲಿ

2005, ಮಾರ್ಚ್ 28: ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ 8.6 ತೀವ್ರತೆಯ ಭೂಕಂಪ; 1,300ಕ್ಕೂ ಹೆಚ್ಚು ಸಾವು

2004, ಡಿ. 26: ಇಂಡೋನೇಷ್ಯಾದಲ್ಲಿ 9.1 ತೀವ್ರತೆ ಭೂಕಂಪ, ಭಾರತ ಸೇರಿ ವಿವಿಧ ದೇಶಗಳ ಕಡಲತೀರಗಳಲ್ಲಿ ಸುನಾಮಿ ಪ್ರವಾಹ; 2.3 ಲಕ್ಷಕ್ಕೂ ಹೆಚ್ಚು ಮಂದಿ ಸಾವು.

2003, ಡಿ. 26: ಇರಾನ್​ನಲ್ಲಿ 6.6 ತೀವ್ರತೆಯ ಭೂಕಂಪ; 50 ಸಾವಿರಕ್ಕೂ ಹೆಚ್ಚು ಮಂದಿ ಸಾವು

2003, ಮೇ 21: ಆಲ್ಜೀರಿಯಾದಲ್ಲಿ 6.8 ತೀವ್ರತೆಯ ಭೂಕಂಪಕ್ಕೆ 2,200ಕ್ಕೂ ಹೆಚ್ಚು ಸಾವು

2002, ಮಾರ್ಚ್ 25: ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಭೂಕಂಪ; ಒಂದು ಸಾವಿರ ಮಂದಿ ಸಾವು

2001, . 26: ಭಾರತದ ಗುಜರಾತ್​ನಲ್ಲಿ 7.7 ತೀವ್ರತೆಯ ಭೂಕಂಪ; 20 ಸಾವಿರ ಮಂದಿ ಬಲಿ

VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ