ಇಂಡೋನೇಷ್ಯಾ: ಇಂಡೋನೇಷ್ಯಾದ ಸುಮಾತ್ರಾ ದ್ವೀಪದ (Sumatra island) ಪಶ್ಚಿಮ ಕರಾವಳಿಯ ಒಳನಾಡಿನಲ್ಲಿ ಇಂದು (ಶುಕ್ರವಾರ) 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದ ಇಬ್ಬರು ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಂಡೋನೇಷ್ಯಾ ಮಾತ್ರವಲ್ಲದೆ ನೆರೆಯ ಸಿಂಗಾಪುರ ಮತ್ತು ಮಲೇಷ್ಯಾದಲ್ಲಿ ಕೂಡ ಕಂಪನದ ಅನುಭವವಾಗಿದೆ. ಭೂಕಂಪದಿಂದ (Earthquake) ಪಶ್ಚಿಮ ಸುಮಾತ್ರಾ ಪ್ರಾಂತ್ಯದ ಪಡಂಗ್ ನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನಿವಾಸಿಗಳು ತಮ್ಮ ಕಟ್ಟಡಗಳಿಂದ ಬೇರೆಡೆಗೆ ಶಿಫ್ಟ್ ಆಗಿದ್ದಾರೆ.
ಇಂದು ಬೆಳಗ್ಗೆ 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಸರ್ಕಾರಿ ಕಚೇರಿ, ಮನೆಗಳು ಮತ್ತು ಬ್ಯಾಂಕ್ ಸೇರಿದಂತೆ ಕೆಲವು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಇಂಡೋನೇಷ್ಯಾದ ವಿಪತ್ತು ತಗ್ಗಿಸುವ ಏಜೆನ್ಸಿ ಮುಖ್ಯಸ್ಥ ಸುಹರ್ಯಾಂತೋ ಹೇಳಿದ್ದಾರೆ.
ಭೂಕಂಪ ಸಂಭವಿಸುತ್ತಿದ್ದಂತೆ ಸುತ್ತಮುತ್ತಲಿನ ಜನರು ತಮ್ಮ ಮನೆಗಳು ಮತ್ತು ಆಫೀಸಿನ ಹೊರಗೆ ಜಮಾಯಿಸಿದರು. ಮಲೇಷ್ಯಾದಲ್ಲಿ ರಾಜಧಾನಿ ಕೌಲಾಲಂಪುರ್‌ನಲ್ಲಿರುವ ಅಗ್ನಿಶಾಮಕ ಇಲಾಖೆಯು ನಗರದಲ್ಲಿ ಸಂಭವಿಸಿದ ಕಂಪನದ ಕುರಿತು ಹಲವಾರು ಕರೆಗಳನ್ನು ಸ್ವೀಕರಿಸಿದೆ. ಇಂಡೋನೇಷ್ಯಾದಲ್ಲಿ ಆಗಾಗ ಭೂಕಂಪಗಳು ಉಂಟಾಗುತ್ತಿರುತ್ತದೆ.
2004ರಲ್ಲಿ ಸುಮಾತ್ರ ದ್ವೀಪದ ಉತ್ತರ ತುದಿಯಲ್ಲಿರುವ ಪ್ರಾಂತ್ಯದ 9.1 ತೀವ್ರತೆಯ ಭೂಕಂಪ ಉಂಟಾಗಿತ್ತು. ಇಂಡೋನೇಷ್ಯಾ, ಶ್ರೀಲಂಕಾ, ಭಾರತ, ಥೈಲ್ಯಾಂಡ್ ಮತ್ತು ಇತರ 9 ದೇಶಗಳಲ್ಲಿ ಈ ಭೂಕಂಪವು 226,000 ಜನರನ್ನು ಕೊಂದಿತು.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಇಂದು ಮುಂಜಾನೆ ಭೂಕಂಪ; ರಿಕ್ಟರ್ ಮಾಪಕದಲ್ಲಿ 3.2ರಷ್ಟು ತೀವ್ರತೆ ದಾಖಲು
Video: ಅಫ್ಘಾನಿಸ್ತಾನದಲ್ಲಾದ ಭೂಕಂಪದ ರಭಸಕ್ಕೆ ಜಮ್ಮು-ಕಾಶ್ಮೀರ, ದೆಹಲಿಯಲ್ಲೂ ನಡುಗಿದ ಭೂಮಿ
Published On - 4:56 pm, Fri, 25 February 22