ಹಿಜಾಬ್ ಕುರಿತು ಅಫ್ಘಾನಿಸ್ತಾನ, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ವಿವಾದಗಳಿವೆ. ಸರಿಯಾಗಿ ಹಿಜಾಬ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕರು 14 ವಿದ್ಯಾರ್ಥಿನಿಯರ ತಲೆ ಬೋಳಿಸಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಶಾಲೆಯ ಮುಖ್ಯ ಶಿಕ್ಷಕರು ಹೇಳುವಂತೆ ಹೆಣ್ಣುಮಕ್ಕಳು ಸರಿಯಾಗಿ ಹಿಜಾಬ್ ಧರಿಸಿರಲಿಲ್ಲ, ಇಂಡೋನೇಷ್ಯಾದಲ್ಲಿ ಮಹಿಳೆಯರಿಗೆ ಕೆಲವು ಕಠಿಣ ನಿಯಮಗಳಿವೆ. 2021 ರಲ್ಲಿ ಇಲ್ಲಿನ ಶಾಲೆಗಳಲ್ಲಿ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ತೆಗೆದುಹಾಕಲಾಗಿದ್ದರೂ ಈ ಘಟನೆ ಮುನ್ನೆಲೆಗೆ ಬಂದಿದೆ.
ಕೆಲವು ಸಾಮಾಜಿಕ ಕಾರ್ಯಕರ್ತರು ಹೇಳುವಂತೆ ಇಂಡೋನೇಷ್ಯಾದಲ್ಲಿ ಅನೇಕ ಮುಸ್ಲಿಂ ಶಾಲೆಗಳಿವೆ, ಇದರಲ್ಲಿ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಲು ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಲಾಗುತ್ತದೆ.
ಇಂಡೋನೇಷ್ಯಾದ ಮಶ್ರಿಕಿ ಜಾವಾದ ಸರ್ಕಾರಿ ಜೂನಿಯರ್ ಹೈಸ್ಕೂಲ್ನಲ್ಲಿ ಆಗಸ್ಟ್ 23 ರಂದು ಈ ಘಟನೆ ನಡೆದಿದೆ. ಬಂದಿರುವ ಮಾಹಿತಿ ಪ್ರಕಾರ ಹೆಣ್ಣುಮಕ್ಕಳ ತಲೆ ಬೋಳಿಸಿದ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಶಾಲೆಯು ಬಾಲಕಿಯರ ಪೋಷಕರಲ್ಲಿ ಕ್ಷಮೆಯಾಚಿಸಿದೆ.
ಮತ್ತಷ್ಟು ಓದಿ: ಅಫ್ಘಾನ್ ಮಹಿಳೆಯರಿಗಿದ್ದ ಮತ್ತೊಂದು ಸ್ವಾತಂತ್ರ್ಯವನ್ನು ಕಿತ್ತುಕೊಂಡ ತಾಲಿಬಾನಿಗಳು
ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸುವುದು ಅನಿವಾರ್ಯವಲ್ಲ, ಆದರೆ ತಲೆಯನ್ನು ಸರಿಯಾಗಿ ಮುಚ್ಚಿಕೊಂಡು ಸ್ಕಾರ್ಫ್ ಧರಿಸಿ ಶಾಲೆಗೆ ಬರುವಂತೆ ತಿಳಿಸಲಾಗಿದೆ ಎಂದು ಶಾಲೆ ತಿಳಿಸಿದೆ.
ಇನ್ನು ಅಫ್ಘಾನಿಸ್ತಾನದಲ್ಲಿ ಕೂಡ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹೆಣ್ಣುಮಕ್ಕಳ ಸ್ವಾತಂತ್ರ್ಯವನ್ನು ಒಂದೊಂದಾಗಿ ಕಿತ್ತುಕೊಳ್ಳಲಾಗುತ್ತಿದೆ. ಹೆಣ್ಣುಮಕ್ಕಳು 3ನೇ ತರಗತಿಯವರಗೆ ಮಾತ್ರ ಓದಬಹುದು, ಹೋಟೆಲ್ಗೆ ತೆರಳಬೇಕಾದರೂ ಪುರುಷರು ಜತೆಗಿರಬೇಕು, ಸಲೂನ್ಗಳಲ್ಲಿ ಕೆಲಸ ಮಾಡಬಾರದು, ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡುವಂತಿಲ್ಲ ಹೀಗೆ ಹತ್ತು ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ