ಪಾಕಿಸ್ತಾನ: ಹಿಟ್ಟು ಕದ್ದಿದ್ದಾನೆಂದು ಬಾಲಕನನ್ನು ಕಟ್ಟಿಹಾಕಿ ಹೊಡೆದು ಚಿತ್ರಹಿಂಸೆ ಕೊಟ್ಟ ಅಂಗಡಿಯವ
ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ, ಹೆಚ್ಚು ಬೆಲೆಯನ್ನು ಕೊಟ್ಟು ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬಾಲಕನೊಬ್ಬ ಹಿಟ್ಟು ಕದ್ದಿದ್ದಾನೆಂದು ಆರೋಪಿಸಿ ಅಂಗಡಿಯವ ಆತನನ್ನು ಕಟ್ಟಿಹಾಕಿ, ಚಿತ್ರಹಿಂಸೆ ನೀಡಿರುವ ಘಟನೆ ವರದಿಯಾಗಿದೆ. ಬಾಲಕನನ್ನು ಕಂಬಕ್ಕೆ ಕಟ್ಟಿಹಾಕಿ ಸಾದಿಕ್ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಿಯಾನ್ ಚನ್ನುವಿನ ಬೋರಾ ಚೌಕ್ ನೆರೆಹೊರೆಯಲ್ಲಿ ಈ ಘಟನೆ ನಡೆದಿದೆ.
ಪಾಕಿಸ್ತಾನ(Pakistan)ದಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ, ಹೆಚ್ಚು ಬೆಲೆಯನ್ನು ಕೊಟ್ಟು ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬಾಲಕನೊಬ್ಬ ಹಿಟ್ಟು ಕದ್ದಿದ್ದಾನೆಂದು ಆರೋಪಿಸಿ ಅಂಗಡಿಯವ ಆತನನ್ನು ಕಟ್ಟಿಹಾಕಿ, ಚಿತ್ರಹಿಂಸೆ ನೀಡಿರುವ ಘಟನೆ ವರದಿಯಾಗಿದೆ. ಬಾಲಕನನ್ನು ಕಂಬಕ್ಕೆ ಕಟ್ಟಿಹಾಕಿ ಸಾದಿಕ್ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಿಯಾನ್ ಚನ್ನುವಿನ ಬೋರಾ ಚೌಕ್ ನೆರೆಹೊರೆಯಲ್ಲಿ ಈ ಘಟನೆ ನಡೆದಿದೆ.
ವೈರಲ್ ವೀಡಿಯೊವನ್ನು ನೋಡಿ ಜನರು ಆಕ್ರೋಶಗೊಂಡಿದ್ದಾರೆ ಮತ್ತು ಈ ಘಟನೆ ಬಗ್ಗೆ ಸ್ಥಳೀಯರು ಅಥವಾ ಅಧಿಕಾರಿಗಳು ಏನೂ ಮಾಡಿಲ್ಲ ಎಲ್ಲರೂ ನೋಡುತ್ತಾ ನಿಂತಿರುವ ಬಗ್ಗೆ ಟೀಕಿಸಿದ್ದಾರೆ. ARY ನ್ಯೂಸ್ ವರದಿ ಮಾಡಿದಂತೆ ಸಿಟಿ ಪೊಲೀಸ್ ಠಾಣೆಯ ಸ್ಕ್ವಾಡ್ ನಂತರ ಸ್ಥಳಕ್ಕೆ ಆಗಮಿಸಿ ಆರೋಪಿ ಅಂಗಡಿಯವರನ್ನು ಕಸ್ಟಡಿಗೆ ತೆಗೆದುಕೊಂಡಿತು.
ಜೂನ್‌ನಲ್ಲಿ, ಪಂಜಾಬ್‌ನ ಚಿಶ್ತಿಯಾನ್ ನಗರದಲ್ಲಿ ವ್ಯಕ್ತಿಯೊಬ್ಬರು ಚಿನ್ನದ ಉಂಗುರಗಳನ್ನು ಕದ್ದ ಆರೋಪದ ಮೇಲೆ ವ್ಯಕ್ತಿಯನ್ನು ತಲೆಕೆಳಗಾಗಿ ನೇತುಹಾಕಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಚಿನ್ನಾಭರಣ ದೋಚಿದ್ದಕ್ಕಾಗಿ ವ್ಯಕ್ತಿ ತನ್ನ ಸಂಬಂಧಿಗೆ ಚಿತ್ರಹಿಂಸೆ ನೀಡಿದ್ದ, ಚಿತ್ರಹಿಂಸೆಗೆ ಒಳಗಾದ ಆರೋಪಿ ಮತ್ತು ವ್ಯಕ್ತಿ ಇಬ್ಬರನ್ನೂ ದೃಶ್ಯಗಳಲ್ಲಿ ಕಾಣಬಹುದು.
ಮತ್ತಷ್ಟು ಓದಿ: Pakistan Crisis: ಸ್ವಯಂಕೃತ ಅಪರಾಧಗಳಿಗೆ ತತ್ತರಿಸಿದ ಪಾಕಿಸ್ತಾನ; ಆರ್ಥಿಕ ಅಧಃಪತನಕ್ಕೆ ಭಾರತ ದ್ವೇಷವೇ ಮುಖ್ಯ ಕಾರಣ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿಲ್ಲ, ಘಟನೆಯು ಸಿಟಿ ಎ ಡಿವಿಷನ್ ಪೊಲೀಸ್ ಠಾಣೆಯ ಸಮೀಪ ನಡೆದಿದೆ ಎಂದು ಎಆರ್ಐ ನ್ಯೂಸ್ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ