ಅಫ್ಘಾನ್ ಮಹಿಳೆಯರಿಗಿದ್ದ ಮತ್ತೊಂದು ಸ್ವಾತಂತ್ರ್ಯವನ್ನು ಕಿತ್ತುಕೊಂಡ ತಾಲಿಬಾನಿಗಳು
ತಾಲಿಬಾನ್ ಅಫ್ಘಾನಿಸ್ತಾನ(Afghanistan)ವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿನ ಮಹಿಳೆಯ ಸ್ಥಿತಿ ತುಂಬಾ ಹೀನಾಯವಾಗಿದೆ. ಶಿಕ್ಷಣ, ಬಟ್ಟೆ, ಉದ್ಯೋಗದಿಂದ ಹಿಡಿದು ಎಲ್ಲದಕ್ಕೂ ನಿರ್ಬಂಧ ಹೇರುತ್ತಿದ್ದಾರೆ. ಇದೀಗ ಮತ್ತೊಂದು ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಾರೆ. ಅಫ್ಘಾನಿಸ್ತಾನದ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾದ ಬ್ಯಾಂಡ್-ಎ-ಅಮೀರ್ ರಾಷ್ಟ್ರೀಯ ಉದ್ಯಾನವನಕ್ಕೆ ಮಹಿಳೆಯರು ಪ್ರವೇಶಿಸುವುದನ್ನು ತಡೆಯಲು ತಾಲಿಬಾನ್ ಭದ್ರತಾ ಪಡೆಗಳನ್ನು ಬಳಸಲಿದೆ.

ಈ ಪ್ರದೇಶದಲ್ಲಿ ಮಹಿಳೆಯರು ಹಿಜಾಬ್ ಅನ್ನು ಸರಿಯಾಗಿ ಹಾಕುತ್ತಿಲ್ಲ ಎಂದು ಆರೋಪಿಸಿದೆ. ಒಂದು ವಾರದ ಹಿಂದೆ, ಸಚಿವ ಮೊಹಮ್ಮದ್ ಖಾಲಿದ್ ಹನಾಫಿ ಅವರು ಪ್ರಾಂತ್ಯಕ್ಕೆ ಭೇಟಿ ನೀಡಿದರು ಮತ್ತು ಮಹಿಳೆಯರು ಹಿಜಾಬ್ ಧರಿಸುವ ಸರಿಯಾದ ವಿಧಾನವನ್ನು ಅನುಸರಿಸುತ್ತಿಲ್ಲ ಎಂದು ಅಧಿಕಾರಿಗಳು ಮತ್ತು ಧಾರ್ಮಿಕ ಮುಖಂಡರಿಗೆ ತಿಳಿಸಿದ್ದರು.
ಪ್ರವಾಸಿ ತಾಣಕ್ಕೆ ಮಹಿಳೆಯರು ಬರದಂತೆ ತಡೆಯುವಂತೆ ಹನಫಿ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದರು. ಇದನ್ನು 2009 ರಲ್ಲಿ ದೇಶದ ಮೊದಲ ರಾಷ್ಟ್ರೀಯ ಉದ್ಯಾನವನವನ್ನಾಗಿ ಮಾಡಲಾಯಿತು, ಇಲ್ಲಿ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.
ಮತ್ತಷ್ಟು ಓದಿ: ಷರಿಯಾದಲ್ಲಿ ರಾಜಕೀಯ ಪಕ್ಷಗಳ ಪರಿಕಲ್ಪನೆ ಇಲ್ಲ: ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ನಿಷೇಧಿಸಿದ ತಾಲಿಬಾನ್
ಯುಎಸ್, ನ್ಯಾಟೊ ಪಡೆಗಳ ವಾಪಸಾತಿ ನಂತರ ಆಗಸ್ಟ್ 15, 2021ರಂದು ದೇಶವನ್ನು ವಶಪಡಿಸಿಕೊಂಡ ಬಳಿಕ, ಅಫ್ಘಾನ್ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಹಲವು ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ.
6ನೇ ತರಗತಿಯ ನಂತರ ಶಾಲೆಗೆ ಹೋಗುವುದನ್ನು ತಡೆಯುವುದು, ಅಫ್ಘಾನ್ ಮಹಿಳೆಯರನ್ನು ಸ್ಥಳೀಯ ಉದ್ಯೋಗಗಳಿಂದ ನಿಷೇಧಿಸುವುದು ಸೇರಿದಂತೆ ಮಹಿಳೆರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಈ ಕಠಿಣ ಕ್ರಮಗಳು ಮುಸ್ಲಿಂ ಬಾಹುಳ್ಯವಿರುವ ರಾಷ್ಟ್ರಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಕಳೆದ ನವೆಂಬರ್‌ನಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರವು ಮಹಿಳೆಯರು ಹಿಜಾಬ್ ಅನ್ನು ಸರಿಯಾಗಿ ಧರಿಸುತ್ತಿಲ್ಲ ಅಥವಾ ಲಿಂಗ ಪ್ರತ್ಯೇಕತೆಯ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ಹೇಳುವ ಮೂಲಕ ಉದ್ಯಾನವನಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಬಳಸುವುದನ್ನು ನಿಷೇಧಿಸಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ