ಟ್ವಿಟ್ಟರ್​ನಲ್ಲಿ ಇಲಾನ್ ಮಸ್ಕ್ ಕತ್ತರಿಹಾಕಿದಂತೆ ನನ್ನ ಆಡಳಿತ ಇರುತ್ತೆ: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ

Vivek Ramaswamy Wants Elon Musk: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಭಾರತ ಮೂಲದ ವಿವೇಕ್ ರಾಮಸ್ವಾಮಿ ತಾನು ಅಮೆರಿಕ ಅಧ್ಯಕ್ಷನಾದರೆ ಇಲಾನ್ ಮಸ್ಕ್ ಅವರನ್ನು ಸಲಹೆಗಾರರನ್ನಾಗಿ ನೇಮಿಸಲು ಬಯಸುವುದಾಗಿ ಹೇಳಿದ್ದಾರೆ. ಟ್ಟಿಟ್ಟರ್​ನಲ್ಲಿ ಉದ್ಯೋಗಿ ಸಂಖ್ಯೆ ಮೊಟಕುಗೊಳಿಸಿ ಆಡಳಿತದಲ್ಲಿ ಸುಧಾರಣೆ ತಂದ ರೀತಿಯಲ್ಲಿ ಅಮೆರಿಕದ ಆಡಳಿತ ನಿರ್ವಹಿಸುವೆ ಎಂದಿದ್ದಾರೆ.

ಟ್ವಿಟ್ಟರ್​ನಲ್ಲಿ ಇಲಾನ್ ಮಸ್ಕ್ ಕತ್ತರಿಹಾಕಿದಂತೆ ನನ್ನ ಆಡಳಿತ ಇರುತ್ತೆ: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ
ವಿವೇಕ್ ರಾಮಸ್ವಾಮಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 28, 2023 | 2:49 PM

ವಾಷಿಂಗ್ಟನ್, ಆಗಸ್ಟ್ 28: ಅಮೆರಿಕದ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ವಿವೇಕ್ ರಾಮಸ್ವಾಮಿ (Vivek Ramaswamy) ಅವರಿಗೆ ಇಲಾನ್ ಮಸ್ಕ್ ಮಾದರಿಯಂತೆ. ಟ್ವಿಟ್ಟರ್​ನಲ್ಲಿ ಇಲಾನ್ ಕತ್ತರಿ ಹಾಕಿ ಚೊಕ್ಕಟ ಮಾಡಿದಂತೆ ಅಮೆರಿಕ ಆಡಳಿತದಲ್ಲಿ ಸುಧಾರಣೆ ತರುವೆ ಎಂದು ಭಾರತ ಮೂಲದ 38 ವರ್ಷದ ವಿ ರಾಮಸ್ವಾಮಿ ಹೇಳಿದ್ದಾರೆ. ತಾನೊಂದು ವೇಳೆ ಅಮೆರಿಕದ ಅಧ್ಯಕ್ಷನಾಗಿದ್ದೇ ಆದಲ್ಲಿ ನನ್ನ ಸಲಹೆಗಾರನಾಗಿ ಮಸ್ಕ್ (Elon Musk) ಅವರನ್ನೇ ನೇಮಕ ಮಾಡುವುದಾಗಿ ಅವರು ತಿಳಿಸಿದ್ದಾರೆ. 2022ರಲ್ಲಿ ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಇಲಾನ್ ಮಸ್ಕ್ ಅವರು ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಿದ ಬಳಿಕ ಕಂಪನಿಯ ಕಾರ್ಯನಿರ್ವಹಣೆ ಉತ್ತಮಗೊಂಡಿತ್ತು. ಅಂಥದ್ದೇ ರೀತಿಯಲ್ಲಿ ಅಮೆರಿಕದ ಅಧ್ಯಕ್ಷೀಯ ಆಡಳಿತದ ಕಾರ್ಯಕ್ಷಮೆ ಹೆಚ್ಚಿಸುವುದಾಗಿ ವಿವೇಕ್ ರಾಮಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ಒಳಗೆ ಇರದ ಮತ್ತು ಹೊಚ್ಚ ಹೊಸ ಮುಖಗಳು ನನಗೆ ಬೇಕು. ಇತ್ತೀಚೆಗೆ ಇಲಾನ್ ಮಸ್ಕ್ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು ಅಚ್ಚರಿಪಟ್ಟಿದ್ದೇನೆ. ನನಗೆ ಸಲಹೆಗಾರರಾಗಿ ಅವರು ಇರಬೇಕೆಂದು ಅಪೇಕ್ಷಿಸುತ್ತೇನೆ. ಟ್ವಿಟ್ಟರ್​ನಲ್ಲಿ ಶೇ. 75ರಷ್ಟು ಉದ್ಯೋಗಿಗಳನ್ನು ಅವರು ಲೇ ಆಫ್ ಮಾಡಿದರು. ಅದರ ಪರಿಣಾಮವಾಗಿ ಕಂಪನಿಯ ಕಾರ್ಯಕ್ಷಮತೆ ಹೆಚ್ಚಿತು ಎಂದು ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ತಿಳಿಸಿದ್ದಾರೆ.

ಟ್ವಿಟ್ಟರ್ ಅನ್ನು ಇಲಾನ್ ಮಸ್ಕ್ ಹೇಗೆ ನಿರ್ವಹಿಸುತ್ತಿದ್ದಾರೋ ಅದೇ ರೀತಿ ಸರ್ಕಾರದ ಆಡಳಿತವನ್ನು ನಡೆಸುತ್ತೇನೆ. ಶೇ. 75ರಷ್ಟು ಅನಗತ್ಯ ವೆಚ್ಚವನ್ನು ತೆಗೆದುಹಾಕುವುದು ಮತ್ತು ಆಡಳಿತದ ಕಾರ್ಯಕ್ಷಮತೆ ಹೆಚ್ಚಿಸುವುದು ಹೇಗೆಂಬುದಕ್ಕೆ ಟ್ಟಿಟ್ಟರ್ ಒಂದು ಉತ್ತಮ ನಿದರ್ಶನ ಎಂದು ಫಾಕ್ಸ್ ನ್ಯೂಸ್ ವಾಹಿನಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಇದನ್ನೂ ಓದಿ: Reynolds 045 Fine Carbure ಪೆನ್ ಇನ್ನು ಗತ ಇತಿಹಾಸವಾ? ರೇನಾಲ್ಡ್ಸ್ ಕಂಪನಿ ಹೇಳುವುದೇನು? ಭಾರತೀಯರಿಗೆ ಯಾಕೆ ಇದು ಅಚ್ಚುಮೆಚ್ಚು?

ರಿಪಬ್ಲಿಕನ್ ಪಕ್ಷದ ಅತ್ಯಂತ ಕಿರಿಯ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ

ವಿವೇಕ್ ರಾಮಸ್ವಾಮಿ ಅಮೆರಿಕದಲ್ಲಿರುವ ಭಾರತ ಮೂಲದ ಸಮುದಾಯದ ಎರಡನೇ ತಲೆಮಾರಿಗೆ ಸೇರಿದವರು. ಅಂದರೆ, ಇವರು ಅಮೆರಿಕದಲ್ಲೇ ಹುಟ್ಟಿ ಬೆಳೆದವರು. 38 ವರ್ಷದ ವಿವೇಕ್ ರಾಮಸ್ವಾಮಿ ರಿಪಬ್ಲಿಕನ್ ಪಕ್ಷದಿಂದ ಅಮೆರಿಕ ಅಧ್ಯಕ್ಷೀಯ ಸ್ಥಾನಕ್ಕೆ ಸರ್ಧಿಸುವ ಅತ್ಯಂತ ಕಿರಿಯ ವ್ಯಕ್ತಿ ಎನಿಸಿದ್ದಾರೆ. ಭಾರತೀಯ ಅಮೆರಿಕನ್ ಸಮುದಾಯದ ನಿಕಿ ಹ್ಯಾಲೀ ಕೂಡ ಅಭ್ಯರ್ಥಿಯಾಗಲಿದ್ದಾರೆ.

ಡೊನಾಲ್ಡ್ ಟ್ರಂಪ್, ವಿವೇಕ್ ರಾಮಸ್ವಾಮಿ, ನಿಕಿ ಹ್ಯಾಲೀ ಮೊದಲಾದವರು ರಿಪಬ್ಲಿಕನ್ ಪಕ್ಷದೊಳಗೆ ಸ್ಪರ್ಧಿಸಿ, ಅಂತಿಮವಾಗಿ ಒಬ್ಬ ಅಭ್ಯರ್ಥಿಯನ್ನು ಅಮೆರಿಕ ಅಧ್ಯಕ್ಷೀಯ ಸ್ಥಾನದ ಚುನಾವಣೆಗೆ ಆಯ್ಕೆ ಮಾಡಲಾಗುತ್ತದೆ.

ವಿವೇಕ್ ರಾಮಸ್ವಾಮಿ ಹಾರ್ವರ್ಡ್ ವಿವಿಯಲ್ಲಿ ಜೀವಶಾಸ್ತ್ರ ಓದಿದಬಳಿಕ ಯಾಲೆ ಯೂನಿವರ್ಸಿಟಿಯಿಂದ ಕಾನೂನು ವಿದ್ಯಾಭ್ಯಾಸ ಮಾಡಿದ್ದಾರೆ. ಬಯೋಟೆಕ್ ಕಂಪನಿಗಳನ್ನು ಸ್ಥಾಪಿಸಿದ ಅವರು 40 ವರ್ಷದೊಳಗಿನ ವಯೋಮಾನದ ಅತ್ಯಂತ ಶ್ರೀಮಂತರಲ್ಲಿ ಒಬ್ಬರೆನಿಸಿದ್ದವರು.

ಇದನ್ನೂ ಓದಿ: ಚೀನಾ ಎಲ್ಲಾ ದೇಶಗಳಿಗೂ ತೊಂದರೆ ಕೊಡುವ ಪುಂಡ ದೇಶ; ತಪ್ಪಿಸಿಕೊಳ್ಳುವುದು ಕಷ್ಟ: ಓಆರ್​ಎಫ್ ವಿಪಿ ಅನಿಸಿಕೆ

ಸದ್ಯ ರಿಪಬ್ಲಿಕನ್ ಪಕ್ಷದ ಅತ್ಯಂತ ಭರವಸೆಯ ಯುವ ನಾಯಕ ಎಂದು ವಿವೇಕ್ ರಾಮಸ್ವಾಮಿ ಹೆಸರುವಾಸಿಯಾಗಿದ್ದಾರೆ. ಶಿಕ್ಷಣ ಇಲಾಖೆ, ಎಫ್​ಬಿಐ, ಎಟಿಎಫ್ ಬ್ಯೂರೋ (Bureau of Alcohol, Tobacco, Firearms and Explosives) ಸಂಸ್ಥೆಗಳನ್ನು ಮುಚ್ಚುತ್ತೇನೆಂದು ಹೇಳುತ್ತಾ ಬಂದಿದ್ದಾರೆ.

ಅಮೆರಿಕದ ರಾಜಕೀಯ ರಂಗದಲ್ಲಿ ಭಾರತೀಯ ಸಮುದಾಯದವರ ಪಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅಮೆರಿಕದ ಈಗಿನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿ ಎನಿಸಿದ್ದರು. ಆದರೆ, ಡೆಮಾಕ್ರಾಟ್ ಪಕ್ಷದಿಂದ ಬೈಡನ್ ಅವರು ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಅಮೆರಿಕದ ಕೆಲ ರಾಜ್ಯಗಳಲ್ಲಿ ಭಾರತೀಯ ಸಮುದಾಯದ ವ್ಯಕ್ತಿಗಳು ಗವರ್ನರ್ ಆಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Mon, 28 August 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್