ಅಫ್ಘಾನಿಸ್ತಾನದಲ್ಲಿ ಇನ್ಮುಂದೆ ಹೆಣ್ಣುಮಕ್ಕಳು ಕೇವಲ 3ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆಯಬಹುದು

ತಾಲಿಬಾನ್ ತನ್ನ ಕ್ರೂರ ನಿರ್ಧಾರಗಳಿಗಾಗಿ ಪ್ರಪಂಚದಾದ್ಯಂತ ಕುಖ್ಯಾತವಾಗಿದೆ. ಅಫ್ಘಾನಿಸ್ತಾನದಲ್ಲಿ ಇನ್ಮುಂದೆ ಹೆಣ್ಣುಮಕ್ಕಳು ಕೇವಲ 3ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆಯಬಹುದು ಎಂದು ತಾಲಿಬಾನ್ ಸರ್ಕಾರ ಹೊಸ ಆದೇಶ ಹೊರಡಿಸಿದೆ

ಅಫ್ಘಾನಿಸ್ತಾನದಲ್ಲಿ ಇನ್ಮುಂದೆ ಹೆಣ್ಣುಮಕ್ಕಳು ಕೇವಲ 3ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆಯಬಹುದು
ವಿದ್ಯಾರ್ಥಿನಿಯರುImage Credit source: The Guardian
Follow us
ನಯನಾ ರಾಜೀವ್
|

Updated on: Aug 06, 2023 | 3:01 PM

ತಾಲಿಬಾನ್(Taliban) ತನ್ನ ಕ್ರೂರ ನಿರ್ಧಾರಗಳಿಗಾಗಿ ಪ್ರಪಂಚದಾದ್ಯಂತ ಕುಖ್ಯಾತವಾಗಿದೆ. ಅಫ್ಘಾನಿಸ್ತಾನದಲ್ಲಿ ಇನ್ಮುಂದೆ ಹೆಣ್ಣುಮಕ್ಕಳು ಕೇವಲ 3ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆಯಬಹುದು ಎಂದು ತಾಲಿಬಾನ್ ಸರ್ಕಾರ ಹೊಸ ಆದೇಶ ಹೊರಡಿಸಿದೆ. 10 ವರ್ಷದ ನಂತರ ಹೆಣ್ಣುಮಕ್ಕಳು ಓದುವ ಹಕ್ಕನ್ನು ತಾಲಿಬಾನ್ ಸರ್ಕಾರ ಕಸಿದುಕೊಂಡಿದೆ. ಹೊಸ ಆದೇಶಕ್ಕೆ ಸುಮಾರು 223 ದಿನಗಳ ಮೊದಲು, ಹೆಣ್ಣುಮಕ್ಕಳು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವುದನ್ನು ನಿಷೇಧಿಸಲಾಯಿತು. ಈ ಹಿಂದೆ 6ನೇ ತರಗತಿವರೆಗೆ ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಓದಲು ಅವಕಾಶವಿತ್ತು.

ತಾಲಿಬಾನ್ ಈ ಹಿಂದೆ ಬ್ಯೂಟಿ ಪಾರ್ಲರ್‌ಗಳಲ್ಲಿ ಮಹಿಳೆಯರು ಕೆಲಸ ಮಾಡುವಂತಿಲ್ಲ ಎಂದು ಹೇಳಿತ್ತು. ತಾಲಿಬಾನ್ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದನ್ನು ನಿಲ್ಲಿಸಿತ್ತು. ತಾಲಿಬಾನ್ ಈಗ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ 10 ವರ್ಷಕ್ಕಿಂತ ಮೇಲ್ಪಟ್ಟ ಬಾಲಕಿಯರನ್ನು ಪ್ರಾಥಮಿಕ ಶಾಲೆಗೆ ಸೇರಿಸದಂತೆ ಸೂಚನೆ ನೀಡಿದೆ ಎಂದು ಬಿಬಿಸಿ ಪರ್ಷಿಯನ್ ವರದಿ ಮಾಡಿದೆ.

ಮತ್ತಷ್ಟು ಓದಿ: Girls Education: ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣ ಕೇಂದ್ರಗಳನ್ನು ಮುಚ್ಚಿದ ತಾಲಿಬಾನ್

ಎರಡು ವರ್ಷಗಳ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿತ್ತು. ಇದರ ನಂತರ, ಆರನೇ ತರಗತಿಗಿಂತ ಹೆಚ್ಚಿನ ಶಾಲೆಗಳಿಗೆ ಹಾಜರಾಗಲು ಹುಡುಗಿಯರನ್ನು ನಿರ್ಬಂಧಿಸಲಾಯಿತು. 683 ದಿನಗಳ ಹಿಂದೆ ತಾಲಿಬಾನ್‌ಗಳು 11 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರಿಗೆ ಶಾಲೆಗೆ ಹೋಗದಂತೆ ಸೂಚನೆ ನೀಡಿದ್ದರು. 223 ದಿನಗಳ ಹಿಂದೆ ಹುಡುಗಿಯರು ವಿಶ್ವವಿದ್ಯಾಲಯಕ್ಕೆ ಹೋಗುವುದನ್ನು ನಿಷೇಧಿಸಲಾಗಿತ್ತು. ಪುರುಷರಿಲ್ಲದೆ ಹೋಟೆಲ್​ಗೆ ಹೋಗುವಂತಿರಲಿಲ್ಲ, ಉದ್ಯಾನಗಳಿಗೆ ತೆರಳುವಂತಿಲ್ಲ ಎಂದೂ ಹೇಳಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ