Iowa School Shootout: ಅಯೋವಾ ಶಾಲೆಯಲ್ಲಿ ಗುಂಡಿನ ದಾಳಿ; ವಿದ್ಯಾರ್ಥಿ ಸಾವು, ಆರೋಪಿ ಆತ್ಮಹತ್ಯೆ

ಅಮೆರಿಕದ ಅಯೋವಾ ನಗರದ ಶಾಲೆಯಲ್ಲಿ ಗುಂಡಿನ ದಾಳಿ ನಡೆದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕೃತ್ಯದ ನಂತರ ಆರೋಪಿ ವಿದ್ಯಾರ್ಥಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Iowa School Shootout: ಅಯೋವಾ ಶಾಲೆಯಲ್ಲಿ ಗುಂಡಿನ ದಾಳಿ; ವಿದ್ಯಾರ್ಥಿ ಸಾವು, ಆರೋಪಿ ಆತ್ಮಹತ್ಯೆ
ಅಯೋವಾ ಶಾಲೆಯಲ್ಲಿ ಗುಂಡಿನ ದಾಳಿ; ವಿದ್ಯಾರ್ಥಿ ಸಾವು, ಆರೋಪಿ ಆತ್ಮಹತ್ಯೆ
Image Credit source: Christian Monterrosa / AFP - Getty Images
Edited By:

Updated on: Jan 05, 2024 | 6:57 AM

ಪೆರ್ರಿ, ಅಯೋವಾ, ಜನವರಿ 5: ಅಮೆರಿಕದ ಅಯೋವಾ ನಗರದ ಶಾಲೆಯಲ್ಲಿ ಗುಂಡಿನ ದಾಳಿ (Iowa School Shootout) ನಡೆದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕೃತ್ಯದ ನಂತರ ಆರೋಪಿ 17 ವರ್ಷದ ಯುವಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಾರಿ ಅಧಿಕಾರಿಗಳು, ಚಳಿಗಾಲದ ರಜೆ ಮುಗಿದು ತರಗತಿಗಳು ಆರಂಭವಾದ ಮೊದಲ ದಿನವೇ ಶಾಲೆಗೆ ನುಗ್ಗಿ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 6ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಐವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Video: ಕೋರ್ಟ್​​​ ವಿಚಾರಣೆ ವೇಳೆ ನ್ಯಾಯಧೀಶೆ ಮೇಲೆ ದಾಳಿ ಮಾಡಿದ ಬಂಧಿತ ಕೈದಿ

ಆರೋಪಿಯನ್ನು ಪೆರ್ರಿ ಹೈಸ್ಕೂಲ್‌ನ ವಿದ್ಯಾರ್ಥಿ ಡೈಲನ್ ಬಟ್ಲರ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೃತ್ಯದ ನಂತರ ಸ್ವಯಂ ಪ್ರೇರಿತ ಗುಂಡೇಟಿನಿಂದ ಆತ ಮೃತಪಟ್ಟಿರುವುದು ಕಂಡುಬಂದಿದೆ ಎಂದರು. ಪೆರ್ರಿ ಹೈಸ್ಕೂಲ್‌ನಲ್ಲಿ ನಡೆದ ಗುಂಡಿನ ದಾಳಿಯು ಬೆಳಗ್ಗೆ 7:30 ರ ನಂತರ ನಡೆಯಿತು ಎಂದು ಡಲ್ಲಾಸ್ ಕೌಂಟಿ ಶೆರಿಫ್ ಆಡಮ್ ಇನ್‌ಫಾಂಟೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 am, Fri, 5 January 24