Video: ಕೋರ್ಟ್ ವಿಚಾರಣೆ ವೇಳೆ ನ್ಯಾಯಧೀಶೆ ಮೇಲೆ ದಾಳಿ ಮಾಡಿದ ಬಂಧಿತ ಕೈದಿ
ಅಮೆರಿಕದ ನೆವಾಡಾ ಕೋರ್ಟ್ ರೂಂನಲ್ಲಿ ಬುಧವಾರ (ಜ.3)ದಂದು ಅಪರಾಧಿಯೊಬ್ಬ ನ್ಯಾಯಧೀಶೆಯ ಮೇಲೆ ದಾಳಿ ಮಾಡಿದ್ದಾನೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಈ ವ್ಯಕ್ತಿಯನ್ನು 30 ವರ್ಷದ ಡಿಯೋಬ್ರಾ ರೆಡ್ಡೆನ್ ಎಂದು ಗುರುತಿಸಲಾಗಿದೆ.
ಅಮೆರಿಕದ ನೆವಾಡಾ ಕೋರ್ಟ್ ರೂಂನಲ್ಲಿ ಬುಧವಾರ (ಜ.3)ದಂದು ಅಪರಾಧಿಯೊಬ್ಬ ನ್ಯಾಯಧೀಶೆಯ ಮೇಲೆ ದಾಳಿ ಮಾಡಿದ್ದಾನೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಈ ವ್ಯಕ್ತಿಯನ್ನು 30 ವರ್ಷದ ಡಿಯೋಬ್ರಾ ರೆಡ್ಡೆನ್ ಎಂದು ಗುರುತಿಸಲಾಗಿದೆ. ಬುಧವಾರ ಬೆಳಿಗ್ಗೆ ಅಪರಾಧಿಯನ್ನು ನ್ಯಾಯಲಯದ ಮುಂದೆ ಹಾಜರುಪಡಿಸಲಾಗಿದೆ. ಆತನ ಮೇಲಿರುವ ಆರೋಪದ ಬಗ್ಗೆ ವಿಚಾರಣೆ ನಡೆಸಬೇಕಾದರೆ ಈ ಘಟನೆ ನಡೆದಿದೆ. ಈ ಅಪರಾಧಿ ಮೇಲೆ ಅನೇಕ ಪ್ರಕರಣಗಳಿದ್ದು, ಈಗಾಗಲೇ ಶಿಕ್ಷೆಯನ್ನು ಅನುಭವಿಸಿದ್ದಾನೆ. ಬ್ಯಾಟರಿ ದಂಧೆಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಿ ಬುಧವಾರ ಕೋರ್ಟ್ ಮುಂದೆ ಹಾಜರುಪಡಿಸಿದಲಾಗಿದೆ. ವಿಚಾರಣೆ ಸಮಯದಲ್ಲಿ ನ್ಯಾಯಧೀಶರ ಟೆಬಲ್ ಮೇಲೆ ಹಾರಿ ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಮೇಲೆ ಹಲ್ಲೆ ನಡೆಸಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಡಿಯೋಬ್ರಾ ರೆಡ್ಡೆನ್ ನ್ಯಾಯಧೀಶರು ಇರುವ ಟೆಬಲ್ ಮೇಲೆ ಹಾರಿದ ವೇಳೆ ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಅವರು ಕೆಳಗೆ ಬಿದ್ದು ತಲೆ ಗಾಯಗಳಾಗಿವೆ, ಇನ್ನು ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಅವರನ್ನು ಕಾಪಾಡಲು ಬಂದ ಕೋರ್ಟ್ ಮಾರ್ಷಲ್ಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ನ್ಯಾಯಧೀಶೆ ಹಾಗೂ ಮಾರ್ಷಲ್ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತು ಅಪರಾಧಿಯನ್ನು ಕ್ಲಾರ್ಕ್ ಕೌಂಟಿ ಡಿಟೆನ್ಶನ್ ಸೆಂಟರ್‌ನಲ್ಲಿರುವ ಜೈಲಿಗೆ ಹಾಕಲಾಗಿದೆ. ಇತನ ಮೇಲೆ ಅನೇಕ ಪ್ರಕರಣಗಳಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.